ಕೌಶಲ್ಯ ಹಾಗೂ ಶಿಕ್ಷಣದಿಂದ ಸ್ವಾವಲಂಬಿ ಬದುಕು: ಪ್ರೊ.ಬಿ.ಜಿ ಮೂಲಿಮನಿ

ಬೀದರ್: ಮಾ.24:ಕೌಶಲ್ಯ ಕೇಂದ್ರಗಳ ಮೂಲಕ ಕೌಶಲ್ಯ ತರಬೇತಿ ್ಧಹಾಗೂ ನುರಿತ ಶಿಕ್ಷಣ ತಜ್ಞರಿಂದ ಶಿಕ್ಷಣ ಪಡೆಯುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ ಮೂಲಿಮನಿ ಹೇಳಿದರು.

ಗುರುವಾರ ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದಿಂದ ಪ್ರಗತಿ ಕೇಂದ್ರಗಳ ನಿರ್ವಾಹಕಿಯರಿಗೆ ಹಾಗೂ ಮಕ್ಕಳ ಪಾಲಕರಿಗೆ ಆಪ್ತ ಸಮಾಲೋಚನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಳೆದ ಒಂದು ದಶಕದಿಂದ ವಿಕಾಸ ಅಕಾಡೆಮಿ ಮೂಲಕ ಡಾ.ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದ ತಂಡವು ಕಲಬುರಗಿ ಕಂಪು ಕಾರ್ಯಕ್ರಮದಿಂದ ಹಿಡಿದು ಇಲ್ಲಿಯ ವರೆಗೆ ಕೃಷಿ, ಯುವಜನತೆ, ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಶಿಕ್ಷಣ ಸೇರಿದಂತೆ ಏಳು ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯ ಮಾಡುತ್ತ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಎರಡು ವರ್ಷಗಳಿಂದೀಚೀಗೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಮೂಲಕ ವಿವಿಧ ಸಂಘ ಹಾಗೂ ಸಂಸ್ಥೆಗಳ ಮುಖೇನ ಗ್ರಾಮೀಣ ಭಾಗದ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗಳಾದ ಹೊಲಿಗೆ ತರಬೇತಿ, ಹೈನುಗಾರಿಕೆ, ಸಾವಯವ ಕೃಷಿ ಪದ್ದತಿ ಅಳವಡಿಕೆ, ಸಾಂಸ್ಕøತಿಕ ಶಿಕ್ಷಣ ಇತ್ಯಾದಿ ತರಬೇತಿ ನೀಡಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಇಡೀ ದೇಶಕ್ಕೆ ಮಾರಿಯಾಗಿದೆ ಎಂದು ಬಣ್ಣಿಸಿದರು.

ಮಕ್ಕಳಿಗೆ ಮನೆ ಮೊದಲ ಪಾಠಶಾಲೆ ಎಂಬಂತೆ ಮನೆಯಿಂದಲೆ ಸಂಸ್ಕಾರಿತ ಶಿಕ್ಷಣ ನೀಡುವ ಕಾರ್ಯ ನಡೆಯಬೇಕಿದೆ. ಇದು ವಿದ್ಯಾರ್ಥಿ ದೆಶೆಯಲ್ಲಿ ಜ್ಞಾನರ್ಜನೆ ಹೆಚ್ಚಿಸುವುದರ ಜೊತೆಗೆ ಅವರ ಭೌತಿಕ ಬದುಕು ಉಜ್ವಲಗೊಳ್ಳಲು ಇಲ್ಲಿ ತರಬೇತಿ ಪಡೆದು ಮನೆಗೆ ತೆರಳುವ ತಾಯಿಂದಿರು ತಮ್ಮ ಮಕ್ಕಳಿಗೆ ಕೌಶಲ್ಯಯುಕ್ತ ಹಾಗೂ ಸಾಂಸ್ಕøತಿಕ ಶಿಕ್ಷಣ ನೀಡಲು ಮುಂದಾಗಬೇಕೆಂದರು.

12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಮಾಡಿರುವ ಸಾಮಾಜಿಕ ಕ್ರಾಂತಿಯನ್ನೇ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘವು 23ನೇ ಶತಮಾನದಲ್ಲಿ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಂಘದ ಕಾರ್ಯವೈಖರಿ ಕೊಂಡಾಡಿದರು.

ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೇಶನ್ ಗೌರವಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹಿಂದೆ ಮಹಿಳೆಗೆ ಸಮಾಜದಲ್ಲಿ ಎಲ್ಲಿಲ್ಲದ ಗೌರವವಿತ್ತು. ಆದರೆ ಮಧ್ಯಯುಗದಲ್ಲಿ ಆಕೆಗೆ ಸೌಂದರ್ಯದ ಗೊಂಬೆಯನ್ನಾಗಿ ಮಾಡಿ ಮನೆಯಲ್ಲಿ ಕೂಡಿ ಹಾಕುವ ಹುನ್ನಾರ ನಡೆಯಿತು. ಆದರೆ ಭಾರತ ಸ್ವಾತಂತ್ರದ ವೇಳೆ ಝಾನ್ಸಿರಾಣಿ ಲಕ್ಷ್ಮೀಬಾಯಿ, ಚಾಂದಬೀಬಿ, ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಅಬ್ಬಕ್ಕ, ಜಯದೇವಿ ತಾಯಿ ಲಿಗಾಡೆ, ಒನಕೆ ಓಬವ್ವ ಹೀಗೆ ಒಬ್ಬೊಬ್ಬರು ಒಂದು ರೀತಿಯ ತ್ಯಾಗ ಹಾಗೂ ಬಲಿದಾನ ನೀಡಿ ಈ ಸಮಾಜ ಹಾಗೂ ದೇಶ ಉದ್ದರಿಸುವ ಕಾರ್ಯ ಮಾಡಿದರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಮೂಲಕ ಜಿಲ್ಲೆಯ 600 ಹಳ್ಳಿಗಳಲ್ಲಿ ಅಲ್ಲಿಯ ವಿದ್ಯಾವಂತ ಯುವತಿಯರಿಗೆ ರಚನಾತ್ಮಕ ತರಬೇತಿ ನೀಡಿ ಜಿಲ್ಲೆಯ ಸಮಗೃ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದು ಪ್ರಶಂಸನಿಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ವಿಶೇಷ ಕರ್ತವ್ಯಾಧಿಕಾರಿ ಅಂಬಿಕಾ ಶೇಳಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚುರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸುಮಾರು 4,500 ಪ್ರಗತಿ ಕೇಂದ್ರಗಳು ಹಾಗೂ 1,500 ಕೌಶಲ್ಯ ಕೇಂದ್ರಗಳ ಮೂಲಕ ವಿವಿಧ ಏಳು ಕ್ಷೇತ್ರಗಳಲ್ಲಿ ನಮ್ಮ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಸೌಭಾಗ್ಯವತಿ ಆರ್.ಜೆ ಮಾತನಾಡಿ, ಪ್ರಗತಿ ಕೇಂದ್ರಗಳ ಹಾಗೂ ಕೌಶಲ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಇಲ್ಲಿ ತರಬೇತಿ ಪಡೆದು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸಬೇಕಿದೆ. ಭಾರತೀಯ ಸಂಸ್ಕøತಿ ಪ್ರಕಾರ ಮನೆಯನ್ನು ನಿಜವಾದ ಸಂಸ್ಕಾರಿ ಕೇಂದ್ರವನ್ನಾಗಿ ಮಾಡಬೇಕಿದೆ. ಮೊಬೈಲ್ ಹಾಗೂ ಇತರೆ ಪಾಶ್ಚಾತ್ಯ ವಿಧದ ದುಷ್ಚಟಗಳಿಗೆ ದಾಸ್ಯರಾಗುತ್ತಿರುವ ಯುವಜನರನ್ನು ಸರಿ ದಾರಿಗೆ ಕೊಂಡೊಯ್ಯುವ ಕಾರ್ಯ ತರಬೇತಿ ಪಡೆದ ಮಹಿಳೆಯರು ಮಾಡಬೇಕಿದೆ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸಂಘದ ವತಿಯಿಂದ 10 ಸಾವಿರ ಕೃಷಿಕರಿಗೆ ಹಾಗೂ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯ ಮಾಡಲಾಗಿದೆ. ಈಲ್ಲೆಯಲ್ಲಿ ಈಗಾಗಲೇ ಎರಡು ಹಂತದ ಸೈನ್ಯ ತರಬೇತಿ ನೀಡಿ ಜಿಲ್ಲೆಯ 200ಕ್ಕೂ ಅಧಿಕ ಯುವಜನರಿಗೆ ಭಾರತೀಯ ಸೈನ್ಯದಲ್ಲಿ ಸೇರಿರುತ್ತಾರೆ. ಈಗ ಮೂರನೇ ಹಂತದ ತರಬೇತಿ ನೀಡಲು ಸಂಘ ಸಿದ್ದವಾಗಿದೆ ಎಂದರು.

ಸ್ಥಳಿಯ ಶಾಸಕ ರಹಿಮ್ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಗತಿ ಕೇಂದ್ರದ ಅಧ್ಯಕ್ಷ ಬಿ.ಎಸ್ ಕುದುರೆ, ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪುನಿತ ಸಾಳೆ, ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ, ಶಿವಶಂಕರ ತರನಳ್ಳಿ, ಗುಂಡಯ್ಯ ತೀರ್ಥಾ ಹಾಗೂ ಇತರರಿದ್ದರು.

ಇದೇ ಸಂದರ್ಭದಲ್ಲಿ ಭಾಗವಹಿಸಿದ ತರಬೇತಿದಾರರಾದ ಜ್ಯೋತಿ, ಮೀನಾ ಹಾಗೂ ಇತರರು ತಮ್ಮ ಅನುಭವ ಹಂಚಿಕೊಂಡರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಸಂಘದ ಪ್ರಮುಖ ರೇವಣಸಿದ್ಧ ಜಾಡರ್ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.