ಕೌಶಲ್ಯ ಮಿಷನ್:ಶೇ 70 ಅಭ್ಯರ್ಥಿಗಳಿಗೆ ಉದ್ಯೋಗ

ಕಲಬುರಗಿ ಮಾ 24: ಕಲಬುರಗಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆಯಡಿ 1615,ಯಾದಗಿರಿ ಜಿಲ್ಲೆಯಲ್ಲಿ 300, ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ 5969 ಯಾದಗಿರಿ ಜಿಲ್ಲೆಯಲ್ಲಿ 1879 ಅಭ್ಯರ್ಥಿಗಳು ಉಚಿತ ತರಬೇತಿ ಪಡೆದಿದ್ದಾರೆ.ಶೇ 70 ರಷ್ಟು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ಷರತ್ತಿನೊಂದಿಗೆ ತರಬೇತಿ ಕೇಂದ್ರಗಳಿಗೆ ತರಬೇತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರು ತಿಳಿಸಿದರು.ವಿಧಾನ ಪರಿಷತ್ತಿನಲ್ಲಿ ಪರಿಷತ್ತು ಸದಸ್ಯ ಬಿ ಜಿ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಡೇ ನಲ್ಮ್ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ 4933 ಮತ್ತು ಯಾದಗಿರಿ ಜಿಲ್ಲೆಯಲ್ಲಿ 1300 ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ.ಇವರು ಸ್ವಯಂ ಉದ್ಯೋಗ ಆರಂಭಿಸಲು ಇಚ್ಛಿಸಿದರೆ ವೈಯಕ್ತಿಕ ಕಿರು ಉದ್ಯಮಕ್ಕೆ 2 ಲಕ್ಷ ರೂ ಗುಂಪು ಕಿರು ಉದ್ಯಮಕ್ಕೆ 10 ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸಿ,ಶೇ 7 ಕ್ಕಿಂತ ಮೇಲ್ಪಟ್ಟ ಬಡ್ಡಿ ಸಹಾಯಧನವನ್ನು ಯೋಜನೆಯಿಂದ ಭರಿಸಿ ಪಾವತಿಸಲಾಗುವದು.
ಕಲಬುರಗಿ ಜಿಲ್ಲೆಯಲ್ಲಿ ಡಿಡಿಯುಜಿಕೆವೈ ( 6121) ಆರ್ ಸೆಟಿ (3410) ಡಿಡಿಯುಜಿಕೆವೈ ( 3096 )ಮತ್ತು ಯಾದಗಿರಿ ಜಿಲ್ಲೆಯಲ್ಲಿ ಡಿಡಿಯುಜಿಕೆವೈ ( 345) ಆರ್ ಸೆಟಿ (3618 ) ಡಿಡಿಯುಜಿಕೆವೈ ( 289) ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ ಎಂದು ಸಚಿವರು ತಿಳಿಸಿದರು.