ಕೌಶಲ್ಯ ಮತ್ತು ಸ್ವಯಂ ಅಭಿವೃದ್ಧಿ ಹೊಂದಬೇಕು : ಡಾ. ಇಂದುಮತಿ ಪಿ ಪಾಟೀಲ

ಕಲಬುರಗಿ:ಮಾ.1: ಪ್ರಥಮ ದರ್ಜೆ ಕಾಲೇಜು ಫರಹತಾಬಾದ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಕಲಬುರಗಿ ಇವರ ಸಹಯೋಗದಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಪಟಾಲಂ ನಾಯಕರ ಒಂದು ದಿನದ ಕಾರ್ಯಗಾರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಇಂದುಮತಿ ಪಿ ಪಾಟೀಲ ಉದ್ಘಾಟಿಸಿ ಮಾತನಾಡಿ ರೋವರ್ಸ್ ಮತ್ತು ರೇಂಜರ್ಸ್‍ಗಳು ಸಮಾಜಮುಖಿಯಾಗಿ ದೇಶಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಜೀವನಕೌಶಲ್ಯಾಭಿವೃದ್ಧಿ ಗುಣಗಳನ್ನು ಅಳವಡಿಸಿಕೊಂಡು ಒಳ್ಳೆಯ ನಾಗರಿಕರಾಗಿ ನಾನು ನನಗಾಗಿ ಅಲ್ಲ ಸರ್ವರಿಗಾಗಿ ಎಂಬ ದೈಯೈವಾಕ್ಯವನ್ನು ಜೀವನದಲ್ಲಿ ರೂಢಿಸಿಕೊಂಡು ಸಮ-ಸಮಾಜವನ್ನು ಕಟ್ಟುವ ಉತ್ತಮ ವೈಕ್ತಿಗಳಾಗಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳು ಮತ್ತು ಕಾಲೇಜಿನ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ರವೀಂದ್ರಕುಮಾರ ಭಂಡಾರಿ ಮಾತನಾಡುತ್ತ ರೋವರ್ಸ್ ಮತ್ತು ರೇಂಜರ್ಸ್ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ನೀತಿ ಕಥೆಯ ಮೂಲಕ ಹೇಳಿದರು.

ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸಯೋಜಕರಾದ ಡಾ. ಭೀಮಣ್ಣ ಹೆಚ್. ಮಾತನಾಡುತ್ತ ಸ್ಕೌಟ್ಸ್ ಮತ್ತು ಗೈಡ್ಸ್ ಗುರಿ ಉದ್ದೇಶಗಳನ್ನು ತಿಳಿಸುತ್ತಾ ಲಾರ್ಡ ಬೇಡನ್ ಪೋವೆಲ್‍ರ ಜೀವನ ವೃಂತಾಂತವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಶಶಿಕಾಂತ ಪಾಟೀಲ, ಡಾ. ಅರ್ಚನಾ, ಸಿಬ್ಬಂದಿಗಳಾದ ಚಂದ್ರಶಾ ಅಂಬಲಗಿ, ಸಂಗೀತಾ ಮುನೋಳ್ಳಿ, ಮಲ್ಲಿಕಾರ್ಜುನ ಭಾಗವಹಿಸಿದರು. ಕಾರ್ಯಕ್ರಮವನು ಇತಿಹಾಸ ಪ್ರಾಧ್ಯಾಪಕರಾದ ಡಾ.ಗಾಂಧೀಜಿ ಮೋಳಕೆರೆ ನಿರೂಪಿಸಿ ವಂದಿಸಿದರು.