ಕೌಶಲ್ಯ ತರಬೇತಿ ಪಡೆದು ಮಹಿಳೆಯರುಸ್ವಂತ ಉದ್ದಿಮೆ ಪ್ರಾರಂಭಿಸಲು ಕರೆ

ಕೋಲಾರ,ಜೂ,೧೫:ಕೇಂದ್ರ ರಾಜ್ಯ ಸರ್ಕಾರಗಳ ಕೌಶಲ್ಯ ತರಬೇತಿ ಪಡೆದ ಮಹಿಳೆಯರು ಸ್ವಂತ ಉದ್ದಿಮೆ ಆರಂಭಿಸುವತ್ತ ಸರಿಯಾದ ತೀರ್ಮಾನ ಮಾಡಿ ಉತ್ತಮ ಗುರಿ ಯೋಜನೆ, ಅಚಲನಂಬಿಕೆ, ವಿಶ್ವಾಸ ದೊಂದಿಗೆ ಯೋಜನಾಬದ್ದವಾಗಿ ಆರಂಭಿಸುವ ಮುಖಾಂತರ ಸ್ವಂತ ಉದ್ದಿಮೆ ಆಗಿ ಇತರರಿಗೆ ಉದ್ಯೋಗ ನೀಡಲು ಮುಂದಾಗಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ಧೆಶಕ ಮಹಮ್ಮದ್ ಅತ್ತಿಕುಲ್ಲಾ ಶರೀಪ್ ಮಹಿಳೆಯರಿಗೆ ಕರೆ ನೀಡಿದರು.
ನಗರದ ಅಂತರಗಂಗೆ ರಸ್ತೆಯ ಹೆಚ್.ಆರ್.ಡಿ.ಸಿ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ ಕೌಶಲ್ಯಾಭಿವೃದ್ದಿ ಇಲಾಖೆ, ಸಿಡಾಕ್ ದಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ, ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ (ಹೆಚ್.ಆರ್.ಡಿ.ಸಿ) ಸಂಸ್ಥೆಗಳ ಸಂಯುಕ್ತ ಅಶ್ರಯದಲ್ಲಿ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ತರಬೇತಿ ಮುಗಿಸಿದವರಿಗೆ ಏರ್ಪಡಿಸಿದ ಮೂರು ದಿನಗಳ ಉದ್ಯಮಶೀಲತಾ ಪ್ರೇರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗಕ್ಕೆ ಮತ್ತು ಉದ್ಯಮಿಗೆ ಅಜಗಜಾಂತರ ವ್ಯತ್ಯಾಸವಿದೆ ಕೆಲಸಕ್ಕೆ ಸೇರಿದರೆ ಒಂದು ಸೀಮಿತ ಚೌಕಟ್ಟು ಇರುತ್ತದೆ ಆದರೆ ಉದ್ಯಮೆಯಾದವರು ಆಕಾಶದೆತರಕ್ಕೂ ಬೆಳಯಬಹುದು ಸೀಮಿತ ಚೌಕಟ್ಟು ಇರುವುದಿಲ್ಲವಾದ್ದರಿಂದ ಉದ್ಯಮ ಆರಂಭಿಸುವವರಿಗೆ ಅದರಲ್ಲಿಯು ಮುಖ್ಯವಾಗಿ ಸರ್ಕಾರದ ಯೋಜನೆಗಳಲ್ಲಿ ಕೌಶಲ್ಯ ತರಬೇತಿ ಪಡೆದಂತಹವರು ಮುಂದೆ ಉದ್ಯಮಿ ಯಾಗಬೇಕೆಂಬ ಉದ್ದೇಶದಿಂದ ಈ ತರಬೇತಿ ಮೂರು ದಿನಗಳ ಕಾಲ ಈ ಕಾರ್ಯಾಗಾರ ನಡೆಯುತ್ತಿದೆ. ಮುಂದೆ ಬರುವವರಿಗೆ ಜಿಲ್ಲಾ ಕೈಕಾರಿಕಾ ಕೇಂದ್ರ ನೆರವು ನೀಡಲಿದೆ. ಉದ್ಯಮಿ ಆರಂಭಿಸಲು ಲೋನ್‌ಗೆ ಸರ್ಕಾರದಿಂದ ಶೇಕಡ ೩೫ ರಷ್ಟು ರಿಯಾಯ್ತಿ ಸಿಗುತ್ತದೆ ಬೈಯೋಕಾನ್ ಕಂಪನಿಯನ್ನು ವಿಶ್ವವಿಕ್ಯಾತಿಯಾಗಿ ಮುನ್ನಡೆಸುತ್ತಿರುವ ಕೀರಣ್ ಮೋಜುಂದಾರ್ ಷಾ ಸೇರಿದಂತೆ ಮಹಿಳೆಯರು ಬಹುದೊಡ್ಡ ದೊಡ್ಡ ಉದ್ಯಮೆ ಕಂಪನಿಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದು ನಮ್ಮ ಮಂದೆ ಅಲವಾರು ಉದಾರಣೆಗಳಿದೆ ಅವರೆಲ್ಲರು ಸಣ್ಣ ಸಣ್ಣ ದಾಗಿಯೇ ಉದ್ಯಮ ಆರಂಭಿಸಿದವರು. ದೃಡನಿರ್ದರದೊಂದಿಗೆ ತಾವು ಸಹ ಉದ್ಯಮ ಆರಂಭಿಸಲು ಆರ್ಥಿಕ ಸ್ವವಲಂಭಿಗಳಾಗಲು ಮುಂದಾಗುವಂತೆ ಮಹಿಳೆಯರಿಗೆ ಕರೆ ನೀಡಿದರು.
ಹೆಚ್.ಆರ್.ಡಿ.ಸಿ ಕೌಶಲ್ಯ ತರಬೇತಿ ಸಂಸ್ಥೆಯ ನಿರ್ಧೇಶಕ ಎಂ.ವಿ.ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಶಾಲಾ ಕಾಲೇಜು ಬಿಟ್ಟಿರುವ ಮತ್ತು ಮನೆಯಲ್ಲಿರುವ ಮಹಿಳೆಯರು ಬ್ಯೂಟೀಷಿಯನ್, ಟೈಲರಿಂಗ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಮುಂತಾದ ತರಬೇತಿಗಳ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಡಾ ಸಂಸ್ಥೆಯ ಕಲ್ಯಾಣ್ ಕುಮಾರ್ .ಆರ್ ಸ್ವಾಗತಿಸಿ ನಿರೂಪಿಸಿದರು.ಸಂಪನ್ಮೂಲ ಅವೇಕ್ ಸಂಸ್ಥೆ ಬೆಂಗಳೂರಿನ ಸದಾಶಿವ, ಶ್ರೀಮತಿ ನಾಗವೇಣಿ ಹಾಗೂ ಕೌಶಲ್ಯ ತರಬೇತಿ ಪೂರ್ಣಗೊಳಿಸಿದ್ದ ಸುಮಾರು ಅರವತ್ತು ಮಹಿಳೆಯರು ಹಾಗೂ ಹೆಚ್.ಆರ್.ಡಿ.ಸಿ ಸಂಸ್ಥೆ ಸಿಬ್ಬಂದಿ ವರ್ಗ ಹಾಜರಿದ್ದರು.