ಕೌಶಲ್ಯ ತರಬೇತಿ ಪಡೆದು ಉದ್ಯೋಗ ಅವಕಾಶ ಮಾಡಿಕೊಳ್ಳಿ


ಲಿಂಗಸೂಗೂರ,ಆ.೦೬-
ದೀನ್ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ನಿರುದ್ಯೋಗ ಯುವಕ/ಯುವತಿಯರು ಉಚಿತ ಕೌಶಲ್ಯ ತರಬೇತಿ ಪಡೆಯುವ ಮೂಲಕ ಉದ್ಯೋಗ ಅವಕಾಶದ ಸದುಪಯೋಗ ಮಾಡಿಕೊಳ್ಳಬೇಕೆಂದು ವಲಯ ಕೌಶಲ್ಯ ಮೇಲ್ವಿಚಾರಕರು ಬಸವರಾಜ ಕಟ್ಟಿಮನಿ ಹೇಳಿದರು.
ತಾಲೂಕೀನ ಕೊನೆಯ ಭಾಗದ ಅಂಕನಾಳ ಗ್ರಾಮದಲ್ಲಿ ನರೇಗಾ ಕೂಲಿಕಾರ್ಮಿಕರಿಗೆ ಭೇಟಿ ತಾಲೂಕ ಪಂಚಾಯತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಕಾರ್ಯಕ್ರಮದಡಿಯಲ್ಲಿ ಸಾಕಷ್ಟು ಗ್ರಾಮೀಣ ಬಡ ಮಹಿಳೆಯರ ಸಮಗ್ರ ಏಳಿಗೆಗೆ ಅನುಕೂಲವಿರುವ ಕಿರು ಮತ್ತು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಲು ಕೃಷಿ ಆಧಾರಿತ ಮಹಿಳೆಯರಿಗಾಗಿ ವಿವಿಧ ರೀತಿಯ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದು, ಅಭಿವೃದ್ಧಿಗಾಗಿ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಯೋಜನೆಯ ಸೌಲಭ್ಯಗಳ ಹಾಗೂ ನಿರೋದ್ಯೋಗ ಯುವಕ ಯುವತಿಯರಿಗೆ ಸ್ವ ಉದ್ಯೋಗ ಮಾಡಲು ಹಲವಾರು ತರಬೇತಿಗಳು ಇರುವುದರಿಂದ ಯೋಜನೆಯನ್ನು ಉಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಿರುದ್ಯೋಗ ಯುವಕರಿಗೆ ಬೆಂಗಳೂರಿನ Indus Weld Tech Charitable Trust Nelamangal ದಲ್ಲಿ ೬ ತಿಂಗಳು ಗ್ಯಾಸ್ ವೆಲ್ಡಿಂಗ್ ಮತ್ತು ರಾಯಚೂರಿನ Sunskills training resources pvt Ltd ಐಣಜ ದಲ್ಲಿ ಯುವಕ/ಯುವತಿಯರಿಗೆ ಹೋಟೆಲ್ ಮ್ಯಾನೇಜಮೆಂಟ್” ತರಬೇತಿ ಇರುವುದು, ಗ್ರಾಮೀಣ ಪ್ರದೇಶದಲ್ಲಿರುವ ೧೮-೩೫ ವಯಸ್ಸಿನ,BPL, AAY ಕಾರ್ಡ್ ಹೊಂದಿರುವ, (SSLC, PUC, ITI, Any degree)ಯವರಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ ಎಂದರು.
ತಾಲೂಕ ವ್ಯವಸ್ಥಾಪಕ-ಕೃಷಿ, ಮಲ್ಲಪ್ಪ ಗಾಳಪೂಜಿ ಮಾತನಾಡಿ ಈ ಭಾಗದಲ್ಲಿ ೪ ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳಾ ರೈತ ಉತ್ಪಾದಕರ ಕಂಪನಿ ಮಾಡಲಾಗುತ್ತಿದ್ದು ಈ ಭಾಗದ ರೈತ ಮಹಿಳೆಯರು ಇದರ ಉಪಯೋಗ ಮಾಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಎಂಬಿಕೆ ಶಶಿಕಲಾ ಹಿರೇಮಠ, ಎಲ್ ಸಿಆರ್ ಪಿ ಶಶಿಕಲಾ, ಕೃಷಿಸಖಿ ಅಮೃತ ಹಿರೇಮಠ, ಪಶುಸಖಿ ರೇಣುಕಾ ಅಂಕನಾಳ ಇದ್ದರು.