
ದಾವಣಗೆರೆ.ಏ.೨೦; ನಗರದ ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನಲ್ಲಿಇಂಡಸ್ಟ್ರಿ ಇಂಟಿಗ್ರೇಟೆಡ್ ಕೋರ್ಸ್’ಗಳೊಂದಿಗೆ ಪ್ರಸ್ತುತ ಪಡಿಸಿದ್ದು ‘ಕಾಲೇಜ್ ಟು ಕಾರ್ಪೋರೇಟ್’ ಎಂಬ ಧ್ಯೆಯದ ಮೂಲಕ ಎಜುಕೇಶನ್ 4.0 ಅಳವಡಿಸಿಕೊಂಡಿರುವ ಹೆಗ್ಗಳಿಕೆ ಈ ಸಂಸ್ಥೆಯದ್ದು ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ವೇತ ಎಸ್ ಮರಿಗೌಡರ್ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಲೇಜಿನಲ್ಲಿ ಪ್ರಸ್ತುತ ವರ್ಷದ ದಾಖಲಾತಿ ಪ್ರಾರಂಭವಾಗಿದೆ.ಪದವಿ ಪಡೆದು ಕಾಲೇಜಿನಿಂದ ಹೊರಹೋಗುವ ವಿದ್ಯಾರ್ಥಿಗಳು ಉದ್ಯಮ ಹಾಗೂ ಕೈಗಾರಿಕ ಕ್ಷೇತ್ರದ ಕೌಶಲ್ಯಗಳನ್ನು ಹೊಂದಿದ್ದರೆ ಮಾತ್ರ ಉದ್ಯೋಗವಕಾಶ ತಕ್ಷಣ ಲಭಿಸಲು ಸಾಧ್ಯ. ಹೀಗಾಗಿ ಪದವಿ ಕೋರ್ಸ್ಗಳ ಜೊತೆಯಲ್ಲೇ ಅವರಿಗೆ ಉದ್ಯಮದ ಎಲ್ಲಾ ಕೌಶಲ್ಯಗಳು, ತಂತ್ರಜ್ಞಾನಗಳನ್ನು ಅಳವಡಿಸುತ್ತ ಹೋಗುವ ಈ ನೂತನ ಯೋಜನೆಯನ್ನು ‘ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು’ ಆರಂಭಿಸಿದೆ. ಕಳೆದ ವರ್ಷವೇ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕಲಿಕೆಯಲ್ಲಿ ಅಳವಡಿಸಿದ್ದು ಉತ್ತಮ ಫಲಿತಾಂಶ ಲಭಿಸಿದೆ ಎಂದರು.ವಿಭಿನ್ನ ಕೋರ್ಸ್‌ಗಳನ್ನು ಸಮರ್ಪಕವಾಗಿ ಅಳವಡಿಸಿ ಉತ್ತಮ ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಅನೇಕ ಪ್ರಶಸ್ತಿ ಗಳಿಸಿದೆ.ಕಾಲೇಜಿನಲ್ಲಿ ಬಿಎಸ್‌ಸಿ ಸೀಡ್ ಟೆಕ್ನಾಲಜಿ, ಪ್ಲಾಂಟ್ ನ್ಯೂಟ್ರೀಷನ್, ಅಕ್ವಾ ಕಲ್ಚರ್, ಮೆಡಿಸಿನಲ್ ಕೆಮಿಸ್ಟಿç ಸೇರಿದಂತೆ ವಿದ್ಯಾರ್ಥಿಗಳ ಆಸಕ್ತಿಕರ ವಿಷಯಗಳ ಕಲಿಕೆಯನ್ನೂ ಅಳವಡಿಸಲಾಗಿದೆ. ಬಿಸಿಎಯಲ್ಲಿ ಬಿಗ್ ಡಾಟಾ ಅನಾಲಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಡಾಟಾ ಸೈನ್ಸ್ ವಿಷಯಗಳನ್ನು ಸೇರಿಸಲಾಗಿದೆ. ಬಿ.ಕಾಂನಲ್ಲಿ ಪ್ರೊಫೆಷನಲ್ ಬಿ.ಕಾಂ ಕೋರ್ಸ್ಅನ್ನು ಅಳವಡಿಸಲಾಗಿದ್ದು, ಇದರಿಂದ ಹೆಚ್ಚಿನ ಉದ್ಯೋಗ ಲಭಿಸಲು ಸಾಧ್ಯತೆ ಹೆಚ್ಚು. ವಿವಿಧ ರಾಷ್ಟಿçÃಯ, ಅಂತರರಾಷ್ಟಿçÃಯ ಕಂಪನಿ ಹಾಗೂ ಸಂಸ್ಥೆಗಳೊAದಿಗೆ 40 ಒಡಂಬಡಿಕೆಗಳನ್ನು ಮಾಡಿಕೊಂಡಿರುವುದರಿAದ ಹೊಸ ಕೋರ್ಸ್ಗಳನ್ನು ಅಳವಡಿಸಲು ಸಾಧ್ಯವಾಗಿದೆ ಎಂದರು.
ಉತ್ತಮ ಅಂಕ ಗಳಿಸಿದ 15 ವಿದ್ಯಾರ್ಥಿಗಳಿಗೆ ರೂ. 10 ಸಾವಿರ ಶುಲ್ಕ ಮಾತ್ರ ತೆಗೆದುಕೊಳ್ಳುವ ‘ಫಾರ್ಚುನ್-15’ ಎಂಬ ಅವಕಾಶ ಒದಗಿಸಲಾಗಿದೆ. ಶೇ 50ರಷ್ಟು ಅಭ್ಯಾಸ, ಶೇ 50ರಷ್ಟು ಕೌಶಲ್ಯ ಎಂಬ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಎಂಐಟಿ ಪ್ಲೇಸ್ ಮೆಂಟ್ ಆಫೀಸರ್ ತೇಜಸ್ವಿ ಕಟ್ಟೀಮನಿ, ಪ್ರೊ.ರಾಜಶೇಖರ್ ಜಿ.ಸಿ,ಪ್ರೊ.ರಮೀಜ್ ರಜಾ,ಪ್ರೊ.ಸವಿತಾ ಪಿ.ಹೆಚ್ ಉಪಸ್ಥಿತರಿದ್ದರು.