ಕೌಶಲ್ಯ ಐ.ಟಿ.ಐ. ಸಮಸ್ಯೆಗಳ ಪರಿಹಾರ

ಕೋಲಾರ,ಜೂ.೨೮- ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮಾಜಿ ಸದಸ್ಯರಾದ ಬೆಳಗಾನಹಳ್ಳಿ ವಿ.ಮುನಿವೆಂಕಟಪ್ಪ ಇತರೆ ಮುಖಂಡರು ಭಾರತದ ಸರ್ಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅತುಲ್‌ಕುಮಾರ್ ತಿವಾರಿಯನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕೌಶಲ್ಯ ಇಲಾಖೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಅಂದರೆ ಕೌಶಲ್ಯ ಐಟಿಐ ಸಂಸ್ಥೆಗಳು ಅನುಭವಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ಕೋರಲಾಯಿತು.
ಮನವಿಗೆ ಸ್ಪಂದಿಸಿದ ಭಾರತದ ಸರ್ಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅತುಲ್‌ಕುಮಾರ್ ತಿವಾರಿ ಅವರು ಕೂಡಲೇ ಸೂಕ್ತ ಕ್ರಮ ವಹಿಸುವುದಾಗಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದರು.