ಕೌಶಲ್ಯ ಆಧಾರಿತ ಶಿಕ್ಷಣ ಅವಶ್ಯಕ :ಮಹಿಪಾಲರೆಡ್ಡಿ

ಚಿಂಚೋಳಿ,ಸೆ 16: ತಾಲೂಕಿನ ಮಿರಿಯಾಣನ ಪೂಜ್ಯ ಶ್ರೀ ಬಸವ ಮಾಚಿದೇವ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ ನಿಡಗುಂದಾ ಸಂಚಾಲಿತ ಶ್ರೀ ಪಾಪನಾಶ ವಿದ್ಯಾಮಂದಿರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ಸೆಮಿಸ್ಟರ್ ಅವಧಿಯ ಪಾಲಕರ ಸಭೆಯಲ್ಲಿ ವಿದ್ಯಾ ಭಾರತಿ ಕರ್ನಾಟಕ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ ಉದ್ಘಾಟಿಸಿದರು.ನಂತರ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಅಂಕಗಳಿಕೆ ಶಿಕ್ಷಣಕ್ಕಿಂತ ಕೌಶಲ್ಯ ಆಧಾರಿತ ಶಿಕ್ಷಣ ವಿವಿಧ ತರಬೇತಿಗಳ ಅವಶ್ಯಕತೆ ಇದೆ. ಮಕ್ಕಳ ಪ್ರತಿಭೆಗೆ ಅನುಸರವಾಗಿ ಕಲಿಕೆ ಸಾಗಬೇಕು ನಮ್ಮ ಭಾಷೆ, ಸಂಸ್ಕೃತಿ, ಭಾರತೀಯ ಶಿಕ್ಷಣ ಪದ್ಧತಿ ಪಸರಿಸುವ ನಿಟ್ಟಿನಲ್ಲಿ ಮಿರಿಯಾಣ ಗಡಿ ಭಾಗದಲ್ಲಿ ಈ ಶಾಲೆಯಲ್ಲಿ ವಿದ್ಯಾಭಾರತಿ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಶಿಕ್ಷಣ ಮತ್ತು ಸಂಸ್ಕಾರ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ ಶಾಲೆ ಹಾಗೂ ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ಮಡಿವಾಳ ಮಾತನಾಡಿ ನಮ್ಮ ಶಾಲೆವತಿಯಿಂದ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಪಾಲಕರಲ್ಲಿ ಶೈಕ್ಷಣಿಕ ವಾತಾವರಣ ಮೂಡುವ ಶಾಲೆಯಲ್ಲಿ ಹಲವಾರು ಯೋಜನೆಗಳು ಜಾರಿಗೆ ತರಲಾಗಿದೆ.ಗಡಿ ಭಾಗದಲ್ಲಿ ಹಲವಾರು ದೇಶಿಯ ಸಂಸ್ಕೃತಿ ಕಾಪಾಡಲು ನಿರಂತರ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಕನ್ನಡ ಮಾತೃ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.ಶಾಲೆ ಪ್ರಧಾನ ಅಧ್ಯಾಪಕಿ ಶ್ರಾವಂತಿ ನರೇಂದ್ರ ಗೌಡ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು.ಶಿಕ್ಷಕಿ ಸಂಪೂರ್ಣ ಹೊಸಮನಿ ಪ್ರಥಮ ಸೆಮಿಸ್ಟರ್ ಅವಧಿಯ ವರದಿ ವಾಚಿಸಿದರು. ಸಪ್ನಾ ಮಠಪತಿ ಶಾಲೆ ಸಮಗ್ರ ವಾರ್ಷಿಕ ಯೋಜನೆ ಮಂಡಿಸಿದರು. ಅಂಬಿಕಾ ಕುಪೆಂದ್ರ ನಿರೂಪಿಸಿ ವಂದಿಸಿದರು. ಮಾತೃ ಭಾರತಿ ಸದಸ್ಯರು ಸೇರಿದಂತೆ ನಾಗವೇಣಿ ಕಲ್ಲೂರ್, ಶಶಿಕಲಾ ತಿಪ್ಪಣ್ಣ ಶಿಕ್ಷಕಿಯರಾದ ಸುಷ್ಮಾ, ಸಭಾ,ನರಸಮ್ಮ ಅನೇಕ ಮಾತೆಯರು ಪಾಲಕರು ಪಾಲ್ಗೊಂಡರು