ಕೌಶಲ್ಯಾಭಿವೃದ್ಧಿ ಪಡೆಯುವ ಮೂಲಕ ನಿರುದ್ಯೋಗ ಸಮಸ್ಯೆ ನೀಗಿಸಿ – ಎನ್ ವೈ ಗೋಪಾಲಕೃಷ್ಣ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.3 :- ಕೌಶಲ್ಯಾಭಿವೃದ್ಧಿ ಪಡೆಯುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಮುಂದಾಗುವಂತೆ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಕರೆ ನೀಡಿದರು.
ಅವರು ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು, ಜಿಲ್ಲಾಕೌಶಲ್ಯಾಭಿವೃದ್ಫಿ ಅಧಿಕಾರಿ ಕಚೇರಿ ಬಳ್ಳಾರಿ, ಶ್ರೀ ಸಿದ್ದಲಿಂಗೇಶ್ವರ ಗ್ರಾಮೀಣ ವಿದ್ಯಾಸಂಸ್ಥೆ ಕೂಡ್ಲಿಗಿ ಹಾಗೂ ವಿಜಯನಗರ ಜಿಲ್ಲಾಡಳಿತ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ಉದ್ಯೋಗ ಮೇಳ 2022-23 ರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎದ್ದು ಕಾಣುತ್ತಿದ್ದು ಕಾಯಕವೇ ಕೈಲಾಸ ಎಂಬಂತೆ ನಮ್ಮ ಭವಿಷ್ಯ ನಮ್ಮ ಕೈಯಲ್ಲಿರುವುದರಿಂದ ಕರಕುಶಲ ಹಾಗೂ ಕೌಶಲ್ಯ ಪಡೆಯುವ ಮೂಲಕ ಸ್ವಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸಬಹುದು ಹಿರೋಷಿಮಾ ನಾಗಸಾಕಿ ಯುದ್ದದಿಂದ ದೇಶವೇ ಹಾಳಾಗಿದ್ದ ಜಪಾನ್ ಬದುಕುವ ಛಲದಲ್ಲಿ ಕೌಶಲ್ಯತೆ ಮಾಡಿ ಇಡೀ ವಿಶ್ವಕ್ಕೆ ಮಾದರಿಯಾಗದೆ ಈ ಸಾಲಿನಲ್ಲಿ ನಾವು ಸಹ ಜೀವನ ಸಾಗಿಸಿದರೆ ನಿರುದ್ಯೋಗ ಸಮಸ್ಯೆ ದೂರವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಸಂಸದರಾದ ವೈ ದೇವೇಂದ್ರಪ್ಪ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಎಂ ಶಾರದಾಬಾಯಿ, ಉಪಾಧ್ಯಕ್ಷೆ ರೇಣುಕಾ ದುರುಗೇಶ, ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ ಎಂ ತಿಪ್ಪೇಸ್ವಾಮಿ, ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ ಇದ್ದರು. ಗುಪ್ಪಾಲ್ ಕೊಟ್ರೇಶ ಸ್ವಾಗತಿಸಿ ನಿರೂಪಿಸಿದರು.