ಕೌಲ್ ಬಜಾರ್ ಮಟನ್ ಮಾರುಕಟ್ಟೆ ರಸ್ತೆಯ ಪರಿಸ್ಥಿತಿ ಇದು

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ನ 14 : ಇಲ್ಲಿನ ಕೌಲ್ ಬಜಾರ್ ಪ್ರದೇಶದ ಮಟನ್ ಮಾರುಕಟ್ಟೆಯ ರಸ್ತೆ ಕೆಸರು ಗದ್ದೆಯಂತಾಗಿದೆ. ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಇದರ ಪರಿಸ್ಥಿತಿ‌ ಮತ್ತಷ್ಟು ಹದಗೆಟ್ಟಿದೆ.
ರಸ್ತೆಯ ಎರೆಡು ಬದಿಯ ಚರಂಡಿಗಳು ತ್ಯಾಜ್ಯದಿಂದ  ಮುಚ್ಚಿಹೋಗಿರುವುದರಿಂದ ಚರಂಡಿಯಲ್ಲಿ ಹರಿಯಬೇಕಾದ  ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಇದರಿಂದ ಮಾರುಕಟ್ಟೆಗೆ ಬರುವ ಜನ ಈ ಅಸ್ವಚ್ಚತೆಯ ಪರಿಸರದಲ್ಲೇ ವ್ಯವಹಾರ ಮಾಡಬೇಕಾಗಿದೆ. ತ್ಯಾಜ್ಯದಿಂದ ತುಂಬಿಹೋಗಿರುವ ಚರಂಡಿಗಳನ್ನು ಕ್ಲೀನ್ ಮಾಡಲು ಪಾಲಕೆ ಆಯುಕ್ತರಲ್ಲಿ  ಮನವಿ ಮಾಡಿದ್ದರೂ ಈವರಗೆ ಅವರು ಇದಕ್ಕೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.