ಕೌಲ್ ಬಜಾರ್ ಪ್ರದೇಶದಲ್ಲಿ ನಾಸೀರ್ ಹುಸೇನ್ ಪ್ರಚಾರ

ಬಳ್ಳಾರಿ, ಏ.23: ರಾಜ್ಯಸಭಾ ಸದಸ್ಯರೂ ಆಗಿರುವ ನಗರದ ಕಾಂಗ್ರೆಸ್ ಮುಖಂಡ ಡಾ.ಸಯ್ಯದ್ ನಾಸೀರ್ ಹುಸೇನ್ ಅವರು ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಕೌಲ್ ಬಜಾರ್ ಪ್ರದೇಶದ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದಾರೆ.
ಬೆಂಬಲಿಗರೊಂದಿಗೆ ಹಲವಡೆ ಮನೆ ಮನೆಗೆ ತರಳಿ ಕರಪತ್ರ ಹಂಚಿ. ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಪಾಲಿಕೆಯಲ್ಲಿ ಅಧಿಕಾರಕ್ಕೆ ತನ್ನಿ. ಏನೇನು ನಗರದ ಅಭಿವೃದ್ದಿ ಯೋಜನೆಗಳನ್ನು ಅನುಷ್ಟಾನ ಮಾಡಲಿದೆ ಎಂಬುದರ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿದರು.
ಬಿಜೆಪಿ ಪಕ್ಷ ಮತ್ತು ಆ ಪಕ್ಷ ಪ್ರಧಾನಿ ನರೇಂದ್ರ್ರ ಮೋದಿ ಅವರು ಬರೀ ಸುಳ್ಳುತ್ತಾರೆ. ಕರೋನಾವನ್ನು ದೇಶದಿಂದ ಹೊಡೆದೋಡಿಸುತ್ತೇನೆ ಎಂದರು. ಆದರೆ ಅದು ಮತ್ತೆ ಉಲ್ಬಣಿಸುತ್ತಿದೆ. ಅದನ್ನು ನಿಯಂತ್ರಿಸುವಲ್ಲಿ ಅವರ ಆಡಳಿತ ವಿಫಲವಾಗಿದೆ. ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರವೂ ಸಹ ಯಾವುದೇ ಅಭಿವೃದ್ದಿ ಮಾಡದೆ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿ. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮಾಡಲು ಮನವಿ ಮಾಡಿದರು.