ಕೌಲ್ ಬಜಾರ್ ನಲ್ಲಿ ಕಾಂಗ್ರೆಸ್ ಪ್ರಚಾರನಾಗೇಂದ್ರ ಆಯ್ಕೆಗೆ ಅಲ್ಲಂ ವೀರಭದ್ರಪ್ಪ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,8- ದೇಶದಲ್ಲಿ ಕೋಮುವಾದಿ, ನಿರಂಕುಶಮತಿ, ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ನರೇಂದ್ರ ಮೋದಿ ಅವರ ಪಕ್ಷದ ಆಡಳಿತಕ್ಕೆ ಕೊನೆಗಾಣಿಸಲು ಹಾಗು  ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಹಾಲಿ ಶಾಸಕ ಬಿ.ನಾಗೇಂದ್ರ ಅವರನ್ನು ಆಯ್ಕೆ ಮಾಡಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹೇಳಿದರು.
ಅವರು ನಿನ್ನೆ ಸಂಜೆ ಕೌಲ್ ಬಜಾರ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಧರ್ಮಾತೀತವಾದ, ಜಾತ್ಯಾತೀತವಾದ ಸರ್ವ ಸಮುದಾಯಗಳನ್ನು ಒಂದೇ ರೀತಿ ಕಾಣುವ, ಅಭಿವೃದ್ಧಿ ಬಯಸುವ ಪಕ್ಷ ಎಂದರೆ ಕಾಂಗ್ರೆಸ್ ಮಾತ್ರ ಅದನ್ನು ಇತಿಹಾಸವೇ ಹೇಳುತ್ತಿದೆ. ಕಳೆದ ಬಾರಿ ಕನಿಷ್ಟ ಮತಗಳಿಂದ ಆಯ್ಕೆ ಮಾಡಿತ್ತು ಈ ಬಾರಿ 25 ಸಾವಿರ ಮತಗಳಿಗಿಂತ ಹೆಚ್ಚು ಅಂತರದಲ್ಲಿ ಆಯ್ಕೆ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಅಭ್ಯರ್ಥಿ ನಾಗೇಂದ್ರ ಅವರು ಮಾತನಾಡಿ‌.  ಚುನಾವಣೆಯನ್ನು ಶಾಂತಿಯುತವಾಗಿ ಮಾಡಬೇಕೆಂಬುದು ನಮ್ಮ ಆಶಯ. ಆದ್ರೆ ಎದುರಾಳಿಗಳು ಕಾಂಗ್ರೆಸ್ ಗೆ ಹೋಗಬೇಡಿ ಎಂದು ಬೆದರಿಕೆ ಹಾಕುತ್ತಿದ್ದಾರಂತೆ. ಇಂತಹುದಕ್ಕೆಲ್ಲ ನಾನು ಅವಕಾಶ ಕೊಡಲ್ಲ. ಬೆದರಿಕೆ ಹಾಕುವ ಕೆಲಸದಲ್ಲಿ ನಾನೂ ಮಾಸ್ಟರ್ ಡಿಗ್ರಿ ಮಾಡಿರುವೆ ಎಂದರು. ಹಣ ಇದೆ ಎಂಬ ಮದವಿದೆ ಅವರಿಗೆ ಈ ಚುನಾವಣೆಯಲ್ಲಿ ಜನ‌ ಬೆಂಬಲ‌ ಇರುವ ಕಾಂಗ್ರೆಸ್ ನಿಂದ ಆ ಮದ ಇಳಿಸಲಿದೆಂದರು.
ಮತದಾರ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಹಣ ಕೊಟ್ಟರೆ ತೆಗೆದುಕೊಳ್ಳಿ. ಆದರೆ ಬುಲಟ್ ದಿಗಿಂದಾ ಲೇದಾ ಎಂಬಂತೆ ಕಾಂಗ್ರೆಸ್ ಬಟನ್ ಒತ್ತಿ ಕೋಮುವಾದಿಗಳಗೆ ಪಾಠ ಕಲಿಸಿ ಎಂದು ಮನವಿ ಮಾಡಿದರು.
ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಹುಮಾಯೂನ್ ಖಾನ್ ಸೇರಿದಂತೆ ಪಕ್ಷದ ಅನೇಕ‌ ಮುಖಂಡರು ಪಾಲ್ಗೊಂಡಿದ್ದರು.