
ಕಾಗವಾಡ : ಸೆ.9:ಶಾಲಾ ಶಿಕ್ಷಣ ಇಲಾಖೆ ಕಾಗವಾಡ ಹಾಗೂ ಸರಕಾರಿ ಶಾಲೆ, ಮೋಳೆ ಇವರ ಸಹಯೋಗದಲ್ಲಿ ಕಾಗವಾಡ ತಾಲೂಕಾ ಮಟ್ಟದ ಕ್ರೀಡಾಕೂಟವು ಜರುಗಿತು.
ತಾಲೂಕಿನ ಕೌಲಗುಡ್ಡ ಗ್ರಾಮದ ಶ್ರೀ ಸಿದ್ದರತ್ನ ಪ್ರೌಢಶಾಲೆಯ ಬಾಲಕಿಯರ ಥ್ರೋ ಬಾಲ್ ತಂಡವು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ, ಶಾಲೆಗೆ ಹಾಗೂ ಕೌಲಗುಡ್ಡ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ,
ವಿಜೇತ ತಂಡಕ್ಕೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಗುರುಗಳು, ಗುರುಮಾತೆಯರು ಹಾಗೂ ಆಡಳಿತ ಮಂಡಳಿ, ಎಲ್ಲ ಸಿಬ್ಬಂದಿಯವರು, ಶ್ರೀ ಸಿದ್ದರತ್ನ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಸಮಸ್ತ ಪಾಲಕ ಬಂಧುಗಳು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.