“ಕೌನ ಬನೇಗಾ ಜ್ಞಾನಪತಿ” ಸ್ಪರ್ಧಾರ್ಥಿಗಳಿಗೆ ವಿಭಿನ್ನ ಅನುಭವ ಕೊಡುವ ಕಾರ್ಯಕ್ರಮ :ಮಹಾದೇವಪ್ಪ ಡಿಗ್ಗಿಮನಿ

ಕಲಬುರಗಿ:ಜ.2: ಕಲಬುರಗಿ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಧ್ಯಯನ ಮಾಡುತ್ತಿರುವವರಿಗೆ, ಪ್ರಜ್ಞಾ ದಿ ಇನ್ಸ್‍ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ವಿಶಿಷ್ಠ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಂತ ಅದ್ಭುತವಾದ ಕೆಲಸವನ್ನು ಮಾಡುತ್ತಿದೆ. “ಕೌನ ಬನೇಗಾ ಜ್ಞಾನಪತಿ” ಕಾರ್ಯಕ್ರಮ ಸ್ಪಧಾರ್ಥಿಗಳಿಗೆ ಸ್ಪೂರ್ತಿ ನೀಡುವ ಜೊತೆಗೆ ವಿಭಿನ್ನ ಅನುಭವ ಕೊಡುವ ಕಾರ್ಯಕ್ರಮ. ಇದರಲ್ಲಿ ಸ್ಪರ್ಧಾರ್ಥಿಗಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು, ಅಪಾರವಾದ ಜ್ಞಾನ ಕೊಡಲಾಗುತ್ತಿದೆ. ಇವರ ಜೊತೆಗೆ ಕನ್ನಡ ರತ್ನ ಡಿ ಕರಿಯರ್ ಕಲಬುರಗಿ ಜಿಲ್ಲೆಯಲ್ಲಿ ಉಚಿತ ತರಗತಿಗಳನ್ನು ನಡೆಸುವ ಮೂಲಕ ಅನೇಕ ಬಡ ಕುಟುಂಬದ ಸ್ಪರ್ಧಾರ್ಥಿಗಳ ಬಾಳು ಬೆಳಗುವಲ್ಲಿ ನೆರವಾಗುತ್ತದೆ ಎಂದು ಪೋಲಿಸ್ ಇನ್ಸ್ ಪರಕ್ಟರ್ ಮಾಹಾದೇವಪ್ಪ ಡಿಗ್ಗಿಮನಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸೋಮುವಾರ ನಗರದ ಕನ್ನಡ ತರ್ನ ಡಿ ಕರಿಯರ್ ಅಕಾಡೆಮಿ ಹಾಗೂ ಪ್ರಜ್ಞಾ ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ವತಿಯಿಂದ ಆಯೋಜಿಸಿದ್ದ “ಕೌನ ಬನೇಗಾ ಜ್ಞಾನಪತಿ” ವಿಭಿನ್ನ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಶ್ರೀನಾಥ ಕಣ್ಣಿ ಕರ್ನಾಟಕದ ಸ್ಪಾರ್ಧಾತ್ಮಕ ಲೋಕದಲ್ಲಿ ಇದೊಂದು ವಿಭಿನ್ನ ವಿಶಿಷ್ಠ ಪ್ರಯತ್ನವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವರಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮವಿದು. ಒಟ್ಟು ಕರ್ನಾಟಕವನ್ನು ಗಮನಿಸಿದಾಗ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವವರ ಸಂಖ್ಯೆ ಕಲ್ಯಾಣ ಕರ್ನಾಟಕದಲ್ಲಿ ಕಡಿಮೆಯಂದು ಕಾಣಬರುತ್ತದೆ. ದೇಶದ ಉನ್ನತ ಹುದ್ದೆಗಳಲ್ಲಿಯೂ ನಮ್ಮ ಪಾಲು ಗಣನೀಯವಾಗಿಲ್ಲ, ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ ವಿದ್ಯೆಗೆ ಸರಿಸಮಾನವಾದ ಸರಕಾರಿ ಹುದ್ದೆ ಪಡೆಯಲು ಬೇಕಾದ ಸ್ಪರ್ಧಾ ಮನೋಭಾವ ಮತ್ತು ಅಧ್ಯಯನದ ಕೊರತೆ ಎದ್ದು ಕಾಣುತ್ತದೆ. ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಯಿದೆ ಆದರೆ ಸ್ಪೂರ್ತಿ ಮತ್ತು ಪ್ರೋತ್ಸಾಹದ ಕೊರತೆ ಕಾಣುತ್ತದೆ. ಶಿಕ್ಷಣ ಪ್ರೇಮಿಗಳು ಧನಾತ್ಮಕ ಮನಸ್ಸು ಮಾಡಿ ಈ ಭಾಗದ ಸ್ಪಧಾರ್ಥಿಗಳಿಗೆ ಪ್ರೋತ್ಸಾಹಿಸುವಲ್ಲಿ ಅವರ ಶೈಕ್ಷಣಿಕ ಮಟ್ಟ ಸುಧಾರಣೆಯಲ್ಲಿ ಕೈಜೋಡಿಸಬೇಕಾದ ಅತ್ಯಂತ ಅಗತ್ಯವಿದೆ. ಕನ್ನಡ ರತ್ನ ಡಿ ಕರಿಯರ್ ಅಕಾಡೆಮಿ ಈ ನಿಟ್ಟಿನಲ್ಲಿ ಉಚಿತ ಕೋಚಿಂಗ್ ಹಾಗೂ ಕಡಿಮೆ ದರದಲ್ಲಿ ಉನ್ನತಮಟ್ಟದ ಕೋಚಿಂಗ್ ನೀಡಿ ಈ ಭಾಗದ ಸ್ಪರ್ಧಾರ್ಥಿಗಳಲ್ಲಿ ಹುರುಪು ತುಂಬುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಪ್ರಾಧ್ಯಾಪಕ ಶಶಿಕಾಂತ ಕೊಳ್ಳಿ ಈ ಸ್ಪರ್ಧಾತ್ಮಕ ಯುಗಕ್ಕೆ ನಮ್ಮ ಯುವಕರನ್ನು ಬೆಳೆಸುವ ನಿಟ್ಟಿನಲ್ಲಿ ಈ ಕೌನ ಬನೆಗಾ ಜ್ಞಾನಪತಿ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ನಾವೆಲ್ಲರೂ ಸರಿಯಾದ ಸಮಯದಿ, ಸರಿಯಾದ ವಯೋಮಾನದಿ ಮತ್ತು ಸರಿಯಾದ ಕ್ರಮದಲ್ಲಿ ಬದುಕು ಯಶಸ್ಸಿನತ್ತ ಕೊಂಡಯ್ಯೂಬೇಕಿದೆ. ಯಶಸ್ಸಿನ ಹಾದಿಯಲ್ಲಿ ಅವಕಾಶಗಳೆಂಬ ಹೂವುಗಳಿರುತ್ತವೆ. ನಮ್ಮ ಧನಾತ್ಮಕ ಒಳದೃಷ್ಠಿಯ ಮೂಲಕ ಹೆಜ್ಜೆಗಳು ಇಟ್ಟರೆ ಯಶಸ್ಸು ನಮ್ಮದಾಗುತ್ತದೆ ಎಂದು ರಸಪ್ರಶ್ನೆಯ ಪ್ರಶ್ನೋತ್ತರಗಳ ಮೂಲಕ ಸ್ಪಧಾರ್ಥಿಗಳಿಗೆ ಪ್ರೋತ್ಸಾಹಕ ಮಾತುಗಳನ್ನು ಆಡಿದರು.

ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ ರಸಪ್ರಶ್ನೆ ಕಾರ್ಯಕ್ರಮವನ್ನು ಅತ್ಯಂತ ಅದ್ಭುತವಾದ ಮನೋರಂಜನೆ ಹಾಗೂ ಜ್ಞಾನ ಕೊಡುತ್ತಾ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಈ ರಸಪ್ರಶ್ನೆಯಲ್ಲಿ ಪ್ರಕಾಶ ಪ್ರಥಮ ಸ್ಥಾನ, ಶಿವಾನಿ ದ್ವೀತಿಯ ಸ್ಥಾನ, ಐಶ್ವರ್ಯ ತೃತೀಯ ಸ್ಥಾನ ಶಿವರಾಜ್ ಮೆಚ್ಚುಗೆ ಬಹುಮಾನ ಪಡೆದರು.

ಈ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಗೌರವ ಸಲಹೆಗಾರರಾದ ಡಾ. ಗೌತಮ್ ಕರಿಕಲ್ ಹಾಜರಿದ್ದರು. ಡಾಕಪ್ಪ ಎಂ. ರಾಠೋಡ್ ಅಧ್ಯಕ್ಷತೆ ವಹಿಸಿದ್ದರು ಉಪನ್ಯಾಸಕರು ಹಾಜರಿದ್ದರು.