ಕೌದಿ ಕಂಬಳಿ ಪುಸ್ತಕ ಲೋಕಾರ್ಪಣೆ

ಕಲಬುರಗಿ,ನ.29-ನಗರದ ಕನ್ನಡ ಭವನದಲ್ಲಿ ಹಿರಿಯ ಲೇಖಕ ಡಾ.ಜಲಾಲುದ್ದೀನ್ ಅಕ್ಬರ್ ಅವರು ರಚಿಸಿದ ಕೌದಿ ಕಂಬಳಿ ಕೃತಿ ಲೋಕಾರ್ಪಣೆ ಮತ್ತು ‘ವೀರಕನ್ನಡಿಗ’ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಡಿ.ಗದ್ದಗಿ ಮಾತನಾಡಿ, ಎಲೆ ಮರೆಕಾಯಿಯಂತೆ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹುಡುಕಿ ಹಲುವಾರು ವರ್ಷಗಳಿಂದ ಪ್ರಶಸ್ತಿ ನೀಡುತ್ತಿರುವ ಹಿರಿಯ ಲೇಖಕ ಡಾ.ಜಲಾಲುದ್ದೀನ್ ಅಕ್ಬರ್ ಅವರ ನೇತೃತ್ವದ ಟ್ರಸ್ಟ್ನ ಸಾಮಾಜಿಕ ಸೇವಾ ಕಾರ್ಯ ಶ್ಲಾಘನೀಯ ಎಂದರು.
ಕೌದಿ ಕಂಬಳಿ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಮಾಜ ಸೇವಕ ಪಂಚಾಕ್ಷರಿ ದೊಡ್ಡಮನಿ, ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮಾನವೀಯ ಜಾಗೃತಿ ಮೂಡಿಸಿ, ಪರಿಪೂರ್ಣ ಜೀವನ ಪದ್ದತಿಗೆ ಬೇಕಾದ ಅನುಬಾವಿಕ ಸಂದೇಶವನ್ನು ಹೊಂದಿರುವ ಕೌದಿ ಕಂಬಳಿ ಕೃತಿ ಆಧುನಿಕ ದಿನಮಾನಗಳಲ್ಲಿ ಬಹಳಷ್ಟು ಅವಶ್ಯವಿದೆ, ಇಂತಹ ಕೃತಿ ರಚನೆ ಮಾಡಿ ಸಮಾಜಕ್ಕೆ ನೀಡಿದ ಲೇಖಕ ಜಲಾಲುದ್ದೀನ್ ಅಕ್ಬರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು,
ಹಿರಿಯ ಲೇಖಕ ಡಾ.ಜಲಾಲುದ್ದೀನ್ ಅಕ್ಬರ್ ಅವರು ಮಾತನಾಡಿ, ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವುದರಲ್ಲಿ ನನಗೆ ಸಂತೃಪ್ತಿಯಿದೆ. ಆದರಿಂದ ಆ ಕಾರ್ಯವನ್ನು ಹಲುವಾರು ವರ್ಷಗಳಿಂದ ನಿರಂತರವಾಗಿ ಮಾಡುತ್ತಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗದ ಹದಿನಾಲ್ಕು ಜನ ಸಾಧಕರಿಗೆ ವೀರಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಲಕಿ ಅತಿನಾ ರೀಫತ್ ಕಾರ್ಯಕ್ರಮ ಉದ್ಘಾಟನೆ ಎಲ್ಲರ ಗಮನ ಸೆಳೆಯಿತು. ಹಿರಿಯ ಸಾಹಿತಿ ಡಾ.ಬಸವರಾಜ ಗವಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ಲೋಬಲ್ ಚಾರಟೇಬಲ್ ಟ್ರಸ್ಟ್ ಅಧ್ಯಕ್ಷ ಪುಟ್ಟಸ್ವಾಮಿ, ಸೃಷ್ಟಿಲೋಕ ಪತ್ರಿಕೆ ಸಂಪಾದಕಿ ಅರ್ಚನಾ, ಯುವ ಲೇಖಕ ಎಚ್.ಎಚ್.ಬೇಪಾರಿ, ಈ ಮಾತೃಭೂಮಿ ಸಂಪಾದಕ ಶೇಖ ನಿಸಾರುದ್ದೀನ್ ಸೇರಿದಂತೆ ಇನ್ನಿತರರು ಇದ್ದರು.
ಸಿಎಂ, ಡಿಸಿಎಂಗೆ ಕೃತಿ ಅರ್ಪಣೆ!
ಹಿರಿಯ ಲೇಖಕ ಡಾ|ಜಲಾಲುದ್ದೀನ್ ಅಕ್ಬರ್ ಅವರು ರಚಿಸಿದ ಕೌದಿ ಕಂಬಳಿ ಪುಸ್ತಕವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಅರ್ಪಣೆ ಮಾಡಿದ್ದು ವಿಶೇಷವಾಗಿತ್ತು.