ಕೌದಿ ಏಕವ್ಯಕ್ತಿ ನಾಟಕ ಪ್ರದರ್ಶನ

ಕಲಬುರಗಿ,ಫೆ.5-ಮೈಸೂರಿನ ಕವಿತಾ ಪ್ರಕಾಶನ ಕಲಬುರಗಿ ರಂಗಾಯಣ ಸಹಯೋಗದೊಂದಿಗೆ ಗಣೇಶ ಅಮೀನಗಡ ಅವರ “ಕೌದಿ” ಏಕವ್ಯಕ್ತಿ ನಾಟಕ ಪ್ರದರ್ಶನ ನಗರದ ರಂಗಾಯಣ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಚಿಂತಕಿ ಡಾ.ಮೀನಾಕ್ಷಿ ಬಾಳಿ ನಾಟಕ ಪ್ರದರ್ಶನ ಉದ್ಘಾಟಿಸಿದರು. ರಂಗಕರ್ಮಿ ಸಂದೀಪ ಬಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ನಾಟಕದ ಕರ್ತೃ ಗಣೇಶ ಅಮೀನಗಡ, ರಂಗಾಯಣದ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಉಪಸ್ಥಿತರಿದ್ದರು.