ಕೌಡಗಾಂವ ಗ್ರಾಮದಲ್ಲಿ ಜರುಗಿದ ಬಸವ ಜಯಂತಿ ಉತ್ಸವ : ರವೀಂದ್ರ ಸ್ವಾಮಿ ಭಾಗಿ

ಔರಾದ: ಎ.25:ಮಹಾಮಾನವತಾವಾದಿ, ಮಂತ್ರಪುರುಷ ಜಗದಜ್ಯೋತಿ, ವಿಶ್ವರತ್ನ ವಿಶ್ವಗುರು ಬಸವೇಶ್ವರರ 890ನೇ ಜಯಂತಿ ಉತ್ಸವವನ್ನು ಕೌಡಗಾಂವ ಗ್ರಾಮದಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಜರುಗಿತು. ಏಕತಾ ಫೌಂಡೇಶನ್‍ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರವೀಂದ್ರ ಸ್ವಾಮಿಯವರು ಜಯಂತಿ ಉತ್ಸವದಲ್ಲಿ ಪಾಲ್ಗೊಂಡು ಗುರುಬಸವೇಶ್ವರರ ತೊಟ್ಟಿಲಿಗೆ ಹಾಗೂ ಬಸವೇಶ್ವರರ ದರ್ಶನ ಪಡೆದರು. ಇದೇ ವೇಳೆ ಗ್ರಾಮಸ್ಥರು ರವೀಂದ್ರ ಸ್ವಾಮಿಯವರನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಸನ್ಮಾನಿಸಿ ಗೌರವಿಸಿದರು. ಅದೇ ಪ್ರೀತಿ, ಅದೇ ನಂಬಿಕೆ ಅದೇ ಗೌರವ ಇಂದಿಗೂ ರವಿಸ್ವಾಮಿಯವರ ಬಗ್ಗೆ ಜನರ ಹೃದಯದಲ್ಲಿ ಹಾಸುಹೊಕ್ಕಾಗಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ತನಗೆ ಕೆಟ್ಟದ್ದನ್ನು ಬಯಸಿದವರಿಗೂ ಒಳ್ಳೆಯದಾಗಲಿ ಎಂದು ರವಿಸ್ವಾಮಿಯವರು ಶುಭ ಹಾರೈಸಿ ಅವರನ್ನು ಕ್ಷಮಿಸುವಷ್ಟು ದೊಡ್ಡ ಗುಣ ಹೊಂದಿದ್ದಾರೆ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.

ವಿಶ್ವಗುರು ಬಸವೇಶ್ವರರ ಜಯಂತಿಯನ್ನು ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಬಿಳಿ ಬಟ್ಟೆಗಳನ್ನು ಧರಿಸಿ, ಕೊರಳ ಮೇಲೆ ಕಾವಿ ಬಣ್ಣದ ಶಾಲುಗಳನ್ನು ಹೊದ್ದುಕೊಂಡು, ಬಸವೇಶ್ವರರ ಹಾಡುಗಳ ಮೇಲೆ ನೃತ್ಯ ಮಾಡಿದ್ರು. ಹಣೆಯಲ್ಲಿ ವಿಭೂತಿ ಧರಿಸಿ, ತಲೆ ಮೇಲೆ ಟೋಪಿಗಳನ್ನು ಧರಿಸಿ ಬಸವ ಜಯಂತಿ ಆಚರಿಸಿದರು. ಗ್ರಾಮಸ್ಥರಲ್ಲಿ ಸಂತೋಷ ಮತ್ತು ಖುಷಿ ಮನೆ ಮಾಡಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಕೌಡಗಾಂವ ಗ್ರಾಮದ ಪ್ರಮುಖರಾದ ಶಿವಕುಮಾರ ತರನಳ್ಳೆ, ರಮೇಶ ಸ್ವಾಮಿ, ಮಾಣಿಕರಾವ ಮೈಲಾರೆ, ಮಹಾದೇವ ತರನಳ್ಳೆ, ರಾಜಕುಮಾರ ಕೋರೆ, ಕಲ್ಲಪ್ಪ ಮೂಲಗೆ, ಉಮಾಕಾಂತ ಪಾಂಚಾಳ, ಸಂದೀಪ ಯರನಳ್ಳೆ, ಬಸವರಾಜ ಮೈಲಾರೆ, ಶ್ರೀಧರ ಪಾಟೀಲ ಮತ್ತು ಶರಣಪ್ಪ ಸೇರಿದಂತೆ ಅನೇಕರು ಉಪಸ್ತಿತರಿದ್ದರು.