ಕೌಡಗಾಂವ ಗಲಭೆಗೆ ಕಾರಣವಾದವರ ವಿರುದ್ಧ ಕ್ರಮ ಜರುಗಿಸಿ: ಪ್ರದೀಪ ನಾಟೇಕರ್

ಬೀದರ್: ಫೆ.9:ಔರಾದ್ ತಾಲೂಕಿನ ಕೌಡಗಾಂವ ಗ್ರಾಮ ಈಗ ಬೂದಿ ಮುಚ್ಚಿದ ಕೆಂಡದಂತಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ. ಎರಡು ಕೋಮುಗಳ ಮಧ್ಯ ನಡೆದ ಇತ್ತಿಚೀನ ಬೆಳವಣಿಗೆಯೇ ಗ್ರಾಮದಲ್ಲಿ ಸೌಹಾರ್ದತೆಯ ವಾತಾವರಣ ಬಿಗಡಾಯಿಸಿರುವುದು ಗಮನಾರ್ಹ ಸಂಗತಿ.
ಗುರುವಾರ ಅಲ್ಲಿಯ ಕೆಲವು ದಲಿತ ಯುವಕರು ಹಾಗೂ ವಿವಿಧ ದಲಿತಪರ ಸಂಘಟನೆಗಳ ಪ್ರಮುಖರು ಸೇರಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ತಮ್ಮ ಆಕ್ರೋಶ ಹೊರ ಹಾಕುತ್ತ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ಇಲಾಖೆಗೆ ಎಚ್ಚರಿಕೆ ಸಂದೇಶ ಸಹ ರವಾನಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಪ್ರದೀಪ ನಾಟೇಕರ್ ಮಾತನಾಡಿ, ನಾವು ಬಾಬಾ ಸಾಹೇಬ್ರ ಅನುಯಾಯಿಗಳು. ಬುದ್ದ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವಗಳಿಗೆ ತಲೆಬಾಗುತ್ತೇವೆ. ಸಂವಿಧಾನ ಹಾಗೂ ಸರ್ವೋಚ್ಛ ನ್ಯಾಯಾಲಯಕ್ಕೆ ಮನ್ನಣೆ ನೀಡುತ್ತೇವೆ. 2009ರಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬರುವ ಎಲ್ಲ ವೃತ್ತಗಳನ್ನು, ಮಂದಿರ, ಮಸಿದಿ, ಚರ್ಚ್ ಇತ್ಯಾದಿ ಆಕ್ರಮ ಸಾರ್ವಜನಿಕ ಆಸ್ತಿ, ಪಾಸ್ತಿಗಳನ್ನು ಸರ್ಕಾರ ತೆರವುಗೊಳಿಸಬೇಕೆಂಬುದು ನಿಜ. ಆದರೆ ಎರಡೇ ದಿನಗಳಲ್ಲಿ ಪೋಲಿಸರ ಕುಮ್ಮಕ್ಕಿನಿಂದ ಕೆಲವು ಕಿಡಿಗೇಡಿಗಳು, ಕೋಮು ಸಾಮರಸ್ಯ ಹಾಳು ಮಾಡುವ ಯುವಕರು ತಡ ರಾತ್ರಿ ಜೈ ಶ್ರೀ ರಾಮ ಎಂದು ಘೋಷಣೆ ಕೂಗುತ್ತ ಬಂದು ಕೂಡಲೇ ಬಸವೇಶ್ವರ ವೃತ್ತ ಅಳವಡಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿರುತ್ತಾರೆ. ಅಂಥವರ ವಿರೂದ್ಧ ಎಫ್.ಐ.ಆರ್ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು. ಯುವಕರು ಜೈ ಶ್ರೀ ರಾಮ ಎಂದು ಘೋಷಣೆ ಕೂಗುತ್ತ ಬಂದು ಆಕ್ರಮವಾಗಿ ಬಸವೇಶ್ವರ ಚೌಕ್ ಅಳವಡಿಸಿದರೂ ಸ್ಥಳದಲ್ಲಿದ್ದ ಪೋಲಿಸರು ಮೌನ ವಹಿಸುವ ಮೂಲಕ ಈ ಆಕ್ರಮ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು ಕೂಡಲೇ ಅಂಥ ಪೋಲಿಸರನ್ನು ಅಮಾನತ್ತುಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಔರಾದ್‍ನ ರಾಹುಲ ಖಂದಾರೆ ಮಾತನಾಡಿ, ಇವನಾರವ, ಇವನಾರವ, ಇವ ನಮ್ಮವ, ಇವ ನಮ್ಮ ಮನೆಯ ಮಗನೆಂದೆನಿಸಯ್ಯ ಎಂಬ ಅಣ್ಣ ಬಸವಣ್ಣನವರ ತತ್ವದಲ್ಲಿ ನಡೆಯುವ ಈ ದೇಶದಲ್ಲಿ ಅಂಬೇಡ್ಕರ್‍ರಿಗೆ ಹಾಗೂ ಅವರ ಅನುಯಾಯಿಗಳಿಗೆ ಪದೆ ಪದೆ ಅನ್ಯಾಯ ಮಾಡುವುದು, ಪೀಡಿಸುವುದು, ಚಿತ್ರಹಿಂಸೆ ನೀಡುವುದು ಶೋಚನಿಯ ಸನ್ನಿವೇಶ. ಶೋಷಿತರನ್ನು ರಕ್ಷಿಸಿ ಗೌರವಿಸುವ ಕಾರ್ಯ ಸರ್ಕಾರಗಳು ಮಾಡಬೇಕು. ಆದರೆ ಪದೆ ಪದೆ ಅನ್ಯಾಯವೆಸಗಿ ದಲಿತರನ್ನು ಭಯಭೀತರನ್ನಾಗಿ ಮಾಡುವ ಮೂಲಕ ಸಮಾಜದಲ್ಲಿ ಸಾಮರಸ್ಯೆ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದರು.
ಮಾರೂತಿ ಕಂಟಿ ಮಾತನಾಡಿ, ಒಂದು ವಾರದೊಳಗೆ ಖುದ್ದು ಕೌಡಗಾಂವ ಗ್ರಾಮಕ್ಕೆ ಡಿ.ಸಿ, ಎಸ್.ಪಿ ಬಂದು ಸೌಹಾರ್ದತೆಯ ಸಭೆ ಮಾಡಿ ಈ ಸಮಸ್ಯೆಗೆ ಅಂತ್ಯ ಹಾಡಬೇಕು. ನಿರ್ಲಕ್ಷಿಸಿದರೆ ಬೀದರ್‍ನಿಂದ ಕೌಡಗಾಂವ ಗ್ರಾಮದ ವರೆಗೆ ಪಾದಯಾತ್ರೆ ಹಮ್ಮಿಕೊಂಡು ಖಾಯಂ ಆಗಿ ಘಟನೆ ನಡೆದ ಸ್ಥಳದಲ್ಲಿಯೇ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದೆಂದು ಕಿವಿ ಮಾತು ಹೇಳಿದರು.
ವಿವಿಧ ದಲಿತಪರ ಸಂಘಟನೆಗಳ ಪ್ರಮುಖರಾದ ತುಕಾರಾಮ ಗೌರೆ, ನರಸಿಂಗ ಸಾಮ್ರಾಟ, ಸುಭಾಷ ಲಾಧಾ, ಸಂತೋಷ ಶಿಮಧೆ, ಹಣಮಂತ ಮಟ್ಟೆ, ರಾಜಕುಮಾರ ಶಿಂಧೆ, ಗೌತಮ ಬಗಲ್ಕರ್, ಪ್ರಕಾಶ ರಾವಣ, ಸತೀಶ ವಗ್ಗೆ, ಅಂಬರೀμï ಕುದುರೆ, ಸತೀಶ್ ವಾಗ್ಗೆ. ಶಿವಕುಮಾರ. ಫುಲೆ, ಸತೀಶ ಹರ್ಗರಿಕರ್,. ಶಿವರಾಜ್ ವಗ್ಗೆ., ಅಖಿಲೇಶ್ ಸಾಗರ್. ರಾಹುಲ್ ಮೇತ್ರಿ. ರಜನಿಕಾಂತ್ ವಗ್ಗೆ.ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿದ್ದರು.