ಕೌಠಾ ಪಂಚಾಯತ ಅವಿರೋಧ ಆಯ್ಕೆ

(ಸಂಜೆವಾಣಿ ವಾರ್ತೆ)
ಔರಾದ :ಆ.5: ಸಂತಪೂರ ಪೆÇೀಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೌಠಾ (ಬಿ) ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರಾಗಿ ರವಿನಾ ಗಂಡ ಗೌತಮ್ ಮೇತ್ರೆ ಕೌಡಗಾಂವ ಹಾಗೂ ಉಪಾಧ್ಯಕ್ಷರಾಗಿ ಪ್ರಭು ವಿಠಲ್ ಬಳತೆ ಬಲ್ಲೂರ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿ ತಾಲೂಕು ದಂಡಾಧಿಕಾರಿಯಾದ ಮಲಶಟ್ಟಿ ಚಿದ್ರೆ ಅವರು ಸರ್ವ ಸದಸ್ಯರ ಅನುಮತಿಯ ಮೇರೆಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಚೆಲುವಾ, ಮಹಾದೇವ ತರನಾಳೆ, ರಮೇಶ ಪಾಟೀಲ, ಹನಮಂತ ಕೂಶನೂರೆ, ಗುಂಡಪ್ಪ ಬಿರಾದಾರ, ವಿಶ್ವನಾಥ್ ದಿನೇ, ಗೌತಮ ಮೇತ್ರೆ, ಶಿವರಾಜ್ ಮೈಲಾರೆ, ಹುಲೆಪ್ಪ ಗಡಿಕುಶನೂರ, ಪರಮೇಶ್ವರ ಬಲೂರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪೆÇೀಲೀಸ್ ಸಿಬ್ಬಂದಿಯವರು ಬಂದೋಬಸ್ತ್ ಜವಬ್ದಾರಿ ವಹಿಸಿದರು.