ಕೌಟುಂಬಿಕ ಜಗಳದಲ್ಲಿ ವ್ಯಕ್ತಿ ಕೊಲೆ

ದೇವದುರ್ಗ.ಏ.೧೯- ತಾಲೂಕಿನ ಜಾಲಹಳ್ಳಿ ಸಮೀಪದ ಮುಂಡರಗಿ ಗ್ರಾಮದಲ್ಲಿ ಕೌಟುಂಬಿಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಾಬಣ್ಣ ನಾಯಕ ಗುಜಪರ್ (೬೩) ಕೊಲೆಯಾದ ವ್ಯಕ್ತಿ. ಆರೋಪಿ ಶಿವರಾಜ್‌ನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮೃತ ಸಾಬಣ್ಣನ ಪತ್ನಿ ಅನ್ನಪೂರ್ಣ ಜತೆ ಅವರ ಸಂಬಂಧಿ ಶಿವರಾಜ ನಡುವೆ ಜಗಳವಾಗಿದೆ. ಸಾಬಣ್ಣ ಜಗಳ ಬಿಡಿಸಲು ಹೋಗಿದ್ದಾಗ ಆರೋಪಿ ಶಿವರಾಜ ಹೊಡೆದಿದ್ದಾನೆ. ಈ ವೇಳೆ ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಸಾಬಣ್ಣನನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಮೃತನ ಪತ್ನಿ ಅನ್ನಪೂರ್ಣ ನೀಡಿದ ದೂರಿನ ಮೇರೆಗೆ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿದು ಎಸ್ಪಿ ಬಿ.ನಿಖಿಲ್ ಮುಂಡರಗಿ ಗ್ರಾಮದ ಕೊಲೆಯಾದ ಸಾಬಣ್ಣ ಮನೆಗೆ ಭೇಟಿ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದರು. ಸಿಪಿಐ ಸುಭಾಷ್‌ಚಂದ್ರ, ಜಾಲಹಳ್ಳಿ ಠಾಣೆ ಪಿಎಸ್‌ಐ ಬಸವರಾಜ ನಾಯಕ ಇದ್ದರು.

೧೯-ಡಿವಿಡಿ-೫