ಕೌಟುಂಬಿಕ ಕಲಹ: ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಮಹಿಳೆ

ಮಡಿಕೇರಿ, ನ.೧೫- ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಗಲ್ಲು ಗ್ರಾಮದ ಕಾಲುವೆಯ ತೊರೆನೂರಿನ ದೊಡ್ಡಕಾಲುವೆ ಬಳಿ ದುರ್ಘಟನೆ ನಡೆದಿದೆ.

ಮೃತರನ್ನು ಚಿತ್ರದುರ್ಗ ಮೂಲದ ಕೂಲಿ ಕಾರ್ಮಿಕರ ಮಕ್ಕಳಾದ ವಿನಯ್, ವಿಜಯ್ ಹಾಗೂ ದೀಕ್ಷಾ ಎನ್ನಲಾಗಿದೆ. ತಾಯಿ ಚೆನ್ನಮ್ಮಳ (28) ಮೃತದೇಹ ಪತ್ತೆಯಾಗಿಲ್ಲ. ಕಾಲುವೆಯಲ್ಲಿ ಇಬ್ಬರು ಹೆಣ್ಣು ಹಾಗೂ ಒಂದು ಗಂಡು ಮಗುವಿನ ಮೃತ ದೇಹಗಳು ತೇಲಿ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಶವಗಳನ್ನು ಮೇಲೆಕ್ಕೆ ಎತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯಿಂದ ಕೂಲಿ ಕೆಲಸಕ್ಕೆ ಬಂದಿದ್ದ ಇವರು ಹೆಬ್ಬಾಲೆ ಬಳಿ ಶುಂಠಿ ಕೀಳಲು ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರು ಎನ್ನಲಾಗಿದೆ. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಈ ಸಂಬಂಧ ಕೊಣ್ಣನೂರು ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.