ಕೌಟುಂಬಿಕ ಕಲಹ ; ತಾಯಿ ಮಗಳ ಕೊಲೆಮಾಡಿದ ಪುತ್ರ

ದಾವಣಗೆರೆ. ಜ.೯; ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿ ಮತ್ತು ಸಹೋದರಿಯ ಮೇಲೆ 
ಪುತ್ರನೇ ಟ್ರಾಕ್ಟರ್ ಹತ್ತಿಸಿ‌ಕೊಲೆ ಮಾಡಿದ ಘಟನೆ ಹರಿಹರ ತಾಲ್ಲೂಕಿನ ಯಕ್ಕೆಗೊಂದಿ ಗ್ರಾಮದಲ್ಲಿ ನಡೆದಿದೆ. ಸರೋಜಮ್ಮ (63) ಜ್ಯೋತಿ (42) ಕೊಲೆಯಾದ ತಾಯಿ ಹಾಗೂ ಸಹೋದರಿ. ಆರೋಪಿ ಭರಮಗೌಡ ಪರಾರಿಯಾಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಭರಮಗೌಡಟ್ರಾಕ್ಟರ್ ಹತ್ತಿಸಿ ಕಬ್ಬಿಣ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸ್ಥಳದಲ್ಲಿಯೇ  ತಾಯಿ ಮಗಳು ಇಬ್ಬರೂ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಮಲೇಬೆನ್ನೂರು ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.