ಕೋವ್ಯಾಕ್ಸಿನ್ ಬಗ್ಗೆ ಯುವಕರಲ್ಲಿ ಜಾಗೃತಿ

ಔರಾದ:ಎ.27: ಪಟ್ಟಣದ ರಾಮನಗರ ಓಣಿಯಲ್ಲಿ ಜಿಲ್ಲಾ ಆಡಳಿತ, ನೆಹರು ಯುವ ಕೇಂದ್ರ ಬೀದರ, ಸುಭಾಸ್ ಚಂದ್ರ ಭೋಸ್ ಯುವಕ ಸಂಘ ಔರಾದ, ಅರುಣೋದಯ ಶಿಕ್ಷಣ ಸಂಸ್ಥೆ ಔರಾದ ಸಂಯುಕ್ತಾಶ್ರಯದಲ್ಲಿ ಕೋವಿಡ್ 19 ಕೋರೋನ ವೈರಸ್ ಹಾಗೂ ಕೋವ್ಯಾಕ್ಸಿನ್ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರ್ಬಾರೆರವರು “ಜೀವವಿದ್ದರೆ ಜೀವನ ” ಎಂಬಂತೆ ಕೊರೊನವನ್ನು ಸಮಾಜದಿಂದ ಓಡಿಸಬೇಕಾದರೆ ಪ್ರತಿಯೊಬ್ಬ ನಾಗರೀಕರು, ವಯಸ್ಕರು, ಮಕ್ಕಳು,, ಯುವಕರ ಪಾತ್ರ ಮಹತ್ವದಾಗಿದೆ ಯಾರು ಕೂಡಾ ಅನವಶ್ಯವಾಗಿ ಮನೆಯಿಂದ ಹೊರಗಡೆ ಬರಬೇಡಿ, “ದೋ ಗಜ ದೂರಿ, ಮಾಸ್ಕ ಹೈ ಜರೂರಿ”ಎನ್ನುವಂತೆ ಕಡ್ಡಾಯವಾಗಿ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೈಜರ ಉಪಯೋಗಿಸಿ, ಪ್ರತಿ ಗಂಟೆಗವೋಮ್ಮೆ ಕೈ ತೊಳೆಯಬೇಕು 18 ವರ್ಷದ ಮೇಲ್ಪಟ್ಟ ಎಲ್ಲರೂ ಕೂಡಾ ಹೆದರದೆ ಕಡ್ಡಾಯವಾಗಿ ಕೋವ್ಯಾಕಸಿನ ಪಡೆಯಬೇಕು ಎಂದು ಹೇಳಿದರು.

ಸುಭಾಸ್ ಚಂದ್ರ ಭೋಸ ಯುವಕ ಸಂಘದ ಅಧ್ಯಕ್ಷ ವಿಶ್ವದೀಪ, ಸಾಮಾಜಿಕ ಕಾರ್ಯಕರ್ತ ರತ್ನದೀಪ ಕಸ್ತೂರೆ, ಅಮುಲ್ ಟಕಲೇ, ಮಸ್ನಾಜಿ ಮುಧಾಳೆ, ಅಜಯ, ಯೋಹಾನ ಕೊಳ್ಳೂರ, ಬಾಬುರಾವ ಕರಬಲೆ, ಅಮರೇಶ್, ರೋಹಿತ ಕಾಂಬಳೆ, ಕೃಷ್ಣ, ಧನರಾಜ, ರಾಜಕುಮಾರ ಉಪಸ್ಥಿತರಿದ್ದರು.