ಕೋವ್ಯಾಕ್ಸಿನ್ ಕೊರೊನಾಗೆ ರಾಮಬಾಣ

ವಾಷಿಂಗ್ಟನ್, ಏ.೨೮-ಭಾರತದಲ್ಲಿ ದೇಶೀಯವಾಗಿ ಅಭಿವೃದ್ದಿ ಪಡಿಸಿರುವ “ಕೊವಾಕ್ಸಿನ್ ಲಸಿಕೆ ರೂಪಾಂತರ ಅಥವಾ ಭಾರತೀಯ ಡಬಲ್ ರೂಪಾಂತರದ ಒತ್ತಡ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಆಂತೋನಿ ಫಾಸಿ ಹೇಳಿದ್ದಾರೆ.
ಕೋವಾಕ್ಸಿನ್ ಲಸಿಕೆ ಯಲ್ಲಿ ಬಿ.೧.೬೧೭ ರೂಪಾಂತರವನ್ನು ತಟಸ್ಥಗೊಳಿಸುವ ಶಕ್ತಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ
ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ- ಐಸಿಎಂಆರ್ ಜಂಟಿಯಾಗಿ ಈ ಲಸಿಕೆ ಅಭಿವೃದ್ಧಿಪಡಿಸಿದೆ.
ಪ್ರತಿನಿತ್ಯದ ಕೊರೋನೋ ಸೋಂಕಿನ ವಿಷಯದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು ಸೋಂಕಿನಿಂದ ಚೇತರಿಸಿಕೊಳ್ಳುವ ಶಕ್ತಿ ಹೆಚ್ಚಳದ ಜೊತೆಗೆ ರೂಪಾಂತರ ಅಥವಾ ಡಬಲ್ ರೂಪಾಂತರ ತಡೆಯುವ ಶಕ್ತಿಯನ್ನು ಹೊಂದಿದೆ ಎಂದು ಫಾಸಿ ತಿಳಿಸಿದ್ದಾರೆ
ಕೋವಾಕ್ಸಿನ್ ಲಸಿಕೆಯಲ್ಲಿ ಚೇತರಿಕೆ ಪ್ರಮಾಣ ಹೆಚ್ಚು ಕಂಡುಬಂದಿದೆ ಎಂದು ಅವರು ಹೇಳಿರುವುದರಿಂದ ದೇಶಿಯ ಲಸಿಕೆಯ ಬಗ್ಗೆ ಮತ್ತಷ್ಟು ಬಲ ಬಂದಂತಾಗಿದೆ.
ಸದ್ಯ ಭಾರತದಲ್ಲಿ ದಿನನಿತ್ಯ ಸೋಂಕು ಹೆಚ್ಚಳವಾಗುತ್ತಿರುವ ನಡುವೆಯೂ ಸೋಂಕಿಗೆ ಲಸಿಕೆ ಪಡೆಯುವುದರಿಂದ ಸೋಂಕು ಹೆಚ್ಚಳವಾಗುವುದು ತಡೆಯಬಹುದು ಎಂದು ಅವರು ಸುದ್ದಿ ಸಂಸ್ಥೆಗೆ ಈ ವಿಷಯವನ್ನು ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಭಾರತದ ರಾಷ್ಟ್ರೀಯ ಸೂಕ್ಷ್ಮಾಣು ಸಂಸ್ಥೆ ಜಂಟಿಯಾಗಿ ಕೋವಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿ ಈ ವರ್ಷದ ಜನವರಿ ೩ರಂದು ತುರ್ತು ಬಳಕೆಗೆ ಅನುಮೋದನೆ ನೀಡಿದೆ ಹೀಗಾಗಿ ದೇಶದಲ್ಲಿ ಲಸಿಕೆ ಹಾಕುವ ಪ್ರಗತಿ ಜಾರಿಯಲ್ಲಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಝೆನಕ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯ ಜೊತೆಗೆ ಕೊವಾಕ್ಸಿನ್ ಲಸಿಕೆಯನ್ನು ಭಾರತದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಜನರಿಗೆ ನೀಡಲಾಗುತ್ತಿದೆ
ಇದಕ್ಕೂ ಮುನ್ನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ನಡೆಸಿದ ಲಸಿಕೆಯ ಗುಣಮಟ್ಟ ಪ್ರಕಾರ ಲಸಿಕೆ ಶೇಕಡ ೨೮ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳು ತಿಳಿಸಿದ್ದವು.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಂದಿಗೆ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ರೂಪಾಂತರ ಮತ್ತು ಡಬ್ಬಲ್ ರೂಪಾಂತರ ಸೋಂಕು ಕಂಡು ಬಂದಿದೆ. ಅದನ್ನು ತಡೆಯುವ ಮತ್ತು ತಟಸ್ಥಗೊಳಿಸುವ ಶಕ್ತಿ ಕೋವಾಕ್ಸಿನ್ ಗೆ ಇದೆ ಎಂದು ಅಮೆರಿಕಾದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಆಂಟೋನಿ ಫಾಸಿ ಹೇಳಿದ್ದಾರೆ