ಕೋವೀಡ್‍ನಿಂದ ಸಾವನ್ನಪ್ಪಿದ ಪಾದ್ರಿಯ ಮೃತದೇಹ ಇಟ್ಟು ಪ್ರಾರ್ಥನೆ

ಮೈಸೂರು:ಮೇ.01: ಕೋವೀಡ್‍ನಿಂದ ಸಾವನ್ನಪ್ಪಿದ ಪಾದ್ರಿಯ ಮೃತದೇಹವನ್ನು ಇಟ್ಟು ಪ್ರಾರ್ಥನೆ ಮಾಡಿರುವ ಘಟನೆ ಕರುಣಾಪುರ ಚರ್ಚ್‍ನಲ್ಲಿ ನಡೆದಿದೆ.
ನಗರದ ಗಾಂಧಿನಗರದಲ್ಲಿರುವ ಕರುಣಾಪುರ ಚರ್ಚ್‍ನಲ್ಲಿ ಕೊವೀಡ್ ನಿಯಮ ಉಲ್ಲಂಘನೆಯಾಗಿದೆ. ಮಿಷನ್ ಆಸ್ಪತ್ರೆಯಲ್ಲಿ ಇಂದು ಕೋವೀಡ್ ನಿಂದ ಮೃತರಾದ ಪಾದ್ರಿರ ಕಳೇಬರವನ್ನು ನೇರವಾಗಿ ಮಸಣಕ್ಕೆ ತೆಗೆದುಕೊಂಡು ಹೋಗಬೇಂಕೆದು ಸರ್ಕಾರದ ನಿಯಮವನ್ನು ಗಳಿಗೆ ತುರಿದ್ದಾರೆ. ಕೋವೀಡ್ ನಿಂದ ಮೃತರಾದರೆ ಸರ್ಕಾರದ ನಿಯಮ ಪಾಲಿಸಬೇಕು.ಆದರೆ ಪಾದ್ರಿಯ ಮೃತದೇಹವನ್ನು ಚರ್ಚ್‍ಗೆ ತಂದು ಇಪ್ಪತ್ತು ನಿಮಿಷಗಳ ಪಾರ್ಥನೆ ಮಾಡಲಾಯಿತ್ತು.
ಸ್ಥಳೀಯರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪಾದ್ರಿಯ ಮೃತದೇಹವನ್ನು ಅಂಬೂಲೆನ್ಸ್ ಮೂಲಕ ಸಾಗಿಸಲಾಯಿತು.