ಕೋವಿಶೀಲ್ಡ್ ಲಸಿಕೆ 300 ರೂ.ಗೆ ಇಳಿಕೆ: ಆಧಾರ್ ಪೂನಾವಾಲ

ಮುಂಬೈ, ಏ.28- ದೇಶದಲ್ಲಿ ಮೇ. 1 ರಿಂದ 18 ವಯೋಮಾನದವರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಮುಂದಾಗುತ್ತಿದ್ದಂತೆ ಕೋವಿಶೀಲ್ಡ್ ಪ್ರತಿ ಡೋಸ್ ಲಸಿಕೆಯನ್ನು ಸರ್ಕಾರಕ್ಕೆ 300 ರೂಪಾಯಿ ದರದಲ್ಲಿ ನೀಡಲು ಭಾರತೀಯ ಸೆರಂ ಸಂಸ್ಥೆ ತಿಳಿಸಿದೆ.

ಈ ಮುಂಚೆ ಸರ್ಕಾರಕ್ಕೆ ಪ್ರತಿ ಡೋಸ್ 400 ರೂಪಾಯಿಗೆ ಕೊಡಲು ನಿರ್ದರಿಸಲಾಗಿತ್ತು.ಇದೀಗ ಅದರ ಬೆಲೆಯನ್ನು 100 ರೂಪಾಯಿ ಕಡಿತ ಮಾಡಿ‌ 300 ರೂಪಾಯಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಭಾರತೀಯ ಸಂಸ್ಥೆಯ ಸಂಸ್ಥೆಯ ಮುಖ್ಯಸ್ಥ ಆಧಾರ್ ಪೂನಾವಾಲಾ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು ಪ್ರತಿ ಡೋಸ್ ಲಸಿಕೆಯನ್ನು 300 ರೂಪಾಯಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರಕ್ಕೆ ಪ್ರತಿ ಡೋಸ್ ಲಸಿಕೆಯನ್ನು 400 ರೂಪಾಯಿ ಮತ್ತು ಖಾಸಗೀ ಆಸ್ಪತ್ರೆಗಳಿಗೆ 600 ರೂಪಾಯಿಗೆ ಪ್ರತಿ ಡೋಸ್ ಲಸಿಕೆ ನೀಡಲು ಸೆರಂ ಈ ಮುಂಚೆ ಪ್ರಕಟಿಸಿತ್ತು.

ಸಂಸ್ಥೆಯ ಈ ನಿರ್ಧಾರದಿಂದಾಗಿ ರಾಜ್ಯಸರ್ಕಾರಗಳಿಗೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗುವ ಜೊತೆಗೆ ದೇಶದ ಜನರ ಪ್ರಾಣ ಉಳಿಯಲು ಸಹಕಾರಿಯಾಗಲಿದೆ ಹೀಗಾಗಿ ಇಂತಹದೊಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಈ ಮುಂಚೆ ನಿಗದಿಮಾಡಿರುವ ಅದರದ ಬಗ್ಗೆ ಆಧಾರ್ ಪೂನಾವಾಲಾ ಯಾವುದೇ ಪ್ರಸ್ತಾಪ ಮಾಡಿಲ್ಲ ಹೀಗಾಗಿ ಪ್ರತಿ ‌ಡೋಸ್ 600 ರೂಪಾಯಿಗೆ ಲಸಿಕೆ ಲಭ್ಯವಾಗಲಿದೆ