ಕೋವಿಶೀಲ್ಡ್ ಲಸಿಕೆ ಪ್ರತಿ ಡೋಸ್‌ಗೆ ೨೦೦ ರೂ. ಗೆ ಮಾರಾಟ

ನವದೆಹಲಿ, ಜ.೪- ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಕ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಗೆ ತುರ್ತು ಬಳಕೆಗೆ ಅನುಮತಿ ನೀಡಿದ ನಡುವೆಯೇ ಪ್ರತಿ ಡೋಸ್ ಲಸಿಕೆಯನ್ನು ೨೦೦ ರೂಪಾಯಿಗೆ ಮರಾಟ ಮಾಡಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರಕ್ಕೆ ೧೦೦ ದಶಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಪ್ರತಿ ಡೋಸ್‌ಗೆ ೨೦೦ ರೂಪಾಯಿಯಂತೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಭಾರತೀಯ ಸೆರಂ ಸಂಸ್ಥೆ ಮುಖ್ಯಸ್ಥ ಆಧಾರ್ ಪೂನಾವಾಲ ಹೇಳಿದ್ದಾರೆ.
ಖಾಸಗಿಯಾಗಿ ಲಸಿಕೆಯನ್ನು ದುಬಾರಿ ವೆಚ್ಚದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಸರ್ಕಾರಕ್ಕೆ ಪ್ರತಿ ಡೋಸ್ ೨೦೦ ರೂಪಾಯಿಗೆ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಮಾರುಕಟ್ಟೆಯಲ್ಲಿ ಪ್ರತಿ ಡೇಸ್ ಲಸಿಕೆಯನ್ನು ೧೦೦೦ ರೂಪಾಯಿಗೆ ಮಾರಾಟ ಮಾಡಲು ಸಂಸ್ಥೆ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ
ಭಾರತೀಯ ಸೆರಂ ಸಂಸ್ಥೆ ಒಂದು ಶತಕೋಟಿ ಡೋಸ್ ಲಸಿಕೆಗಾಗಿ ಈಗಾಗಲೇ ಆರ್ಡರ್ ಪಡೆಯದೆ ಇದನ್ನ ಮುಂದಿನ ಕೆಲವೇ ಸಿದ್ದ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಶ್ವದ ಅತಿದೊಡ್ಡ ಔಷಧ ತಯಾರಿಕಾ ಸಂಸ್ಥೆಯಾದ ಪುಣೆಯ ಭಾರತೀಯ ಸೆರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದೆ.
ಕೊವಾಕ್ಸ್ ಲಸಿಕೆಯನ್ನು ೩೦೦ ರಿಂದ ೪೦೦ ದಶಲಕ್ಷ ಡೋಸ್ ತಯಾರಿಸಲು ಈಗಾಗಲೇ ಆರ್ಡರ್ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಲಸಿಕೆಗಾಗಿ ಆರ್ಡರ್ ಪಡೆದಿರುವ ಎಲ್ಲವನ್ನೂ ಆದಷ್ಟು ಬೇಗ ಪೂರೈಕೆ ಮಾಡಲು ಸಂಸ್ಥೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ವರ್ಷದ ಅಂತ್ಯದೊಳಗೆ ಲಸಿಕೆ ಸಂಪೂರ್ಣವಾಗಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ