ಕೋವಿಶೀಲ್ಡ್ ಲಸಿಕೆ ಜೀವಿತಾವಧಿ ೬ ರಿಂದ ೯ ತಿಂಗಳಿಗೆ ವಿಸ್ತರಣೆ

ನವದೆಹಲಿ,ಮಾ.೩೧- ಕೊರೊನಾ ಸೋಂಕಿಗೆ ನೀಡಲಾಗುತ್ತಿರುವ ಕೋವಿಶೀಲ್ಡ್ ಲಸಿಕೆಯ ಜೀವತಾವಧಿಯನ್ನು ೬ ತಿಂಗಳಿನಿಂದ ೯ ತಿಂಗಳಿಗೆ ವಿಸ್ತರಿಸಲಾಗಿದೆ. ಇದಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರು (ಬಿಜಿಸಿಐ) ಒಪ್ಪಿಗೆ ನೀಡಿದ್ದಾರೆ.
ಈ ಸಂಬಂಧ ಬಿಜಿಸಿಐ ಬಿಜಿ ಸೊಮಾನಿ ಸೀರಂ ಸಂಸ್ಥೆಗೆ ಪತ್ರ ಬರೆದು ಈಗ ಉತ್ಪಾದನೆಯಾಗಿರುವ ಲಸಿಕೆಗಳನ್ನು ೯ ತಿಂಗಳವರೆಗೆ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಲಸಿಕೆಯ ಲೇಬಲ್‌ನಲ್ಲಿ ಈ ಅಂಶವನ್ನು ಅಳವಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
೫ ಎಂಎಲ್ ಇರುವ ೧೦ ಡೋಸೆಜ್‌ನ ಬಾಟಲಿಯಲ್ಲಿರುವ ಕೋವಿ ಶೀಲ್ಡ್ ಲಸಿಕೆಯ ಜೀವಿತಾವಧಿಯನ್ನು ೩ ತಿಂಗಳಿಗೆ ವಿಸ್ತರಣೆ ಮಾಡುವ ವಿಚಾರದಲ್ಲಿ ಯಾವುದೇ ಆಕ್ಷೇಪವಿಲ್ಲ ಎಂದು ಬಿಜಿಸಿಐ ಸ್ಪಷ್ಟಪಡಿಸಿದೆ.
ಆಕ್ಸ್‌ಫರ್ಡ್ ಮತ್ತು ಆಸ್ಟ್ರಾಜನೆಕಾ ಕಂಪನಿ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಿದೆ. ಈ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿರುವುದನ್ನು ತಜ್ಞರು ದೃಢಪಡಿಸಿದ್ದಾರೆ.