ಕೋವಿಶೀಲ್ಡ್ ಪೂರೈಕೆಗೆ‌ ಕೇಂದ್ರ ಸರ್ಕಾರ 1732.50 ಕೋಟಿ ಮುಂಗಡ ಬಿಡುಗಡೆ

ನವದೆಹಲಿ,ಮೇ 3-ಈ ತಿಂಗಳಿನಿಂದ ‌ಜೂನ್ ಹಾಗೂ ಜುಲೈ ತಿಂಗಳಲ್ಲಿ 11 ಕೋಟಿ ಡೋಸ್‌ಗಳಷ್ಟು ಕೋವಿಶೀಲ್ಡ್ ಕೊರೊನಾ ಲಸಿಕೆ ಪೂರೈಸುವುದಕ್ಕಾಗಿ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾಕ್ಕೆ(ಎಸ್ಐಐ) ಕೇಂದ್ರ ಸರ್ಕಾರ 1732.50 ಕೋಟಿ ಪೂರ್ಣ ಮುಂಗಡ ಹಣವನ್ನು ಬಿಡುಗಡೆ ಮಾಡಿದೆ.
ಟಿಡಿಎಸ್‌ ತೆರಿಗೆ ಕಟಾವಾದ ನಂತರ ಉಳಿದ 1699.50 ಕೋಟಿ ಹಣವನ್ನು ಕಳೆದ ಏ.28ರಂದೇ ಎಸ್‌ಐಐ ಸಂಸ್ಥೆ ಸ್ವೀಕರಿಸಿದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸರ್ಕಾರ ಲಸಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಆದೇಶ ಹೊರಡಿಸಿಲ್ಲ‘ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ‌‌ಸತ್ಯಕ್ಕೆ ದೂರವಾದ್ದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಕೊನೆಯ ಅದೇಶದಲ್ಲಿ 10 ಕೋಟಿ ಡೋಸ್‌ಗಳ ಕೋವಿಶೀಲ್ಡ್ ಲಸಿಕೆ ಸರಬರಾಜು ಮಾಡುವಂತೆ ಕೇಳಲಾಗಿತ್ತು. ಅದರಂತೆ ಮೇ 3 ರವರೆಗೆ 8.744 ಕೋಟಿ ಡೋಸ್‌ಗಳಷ್ಟು ಲಸಿಕೆ ಸರಬರಾಜಾಗಿದೆ ಇದಲ್ಲದೇ, 5 ಕೋಟಿ ಡೋಸ್‌ಗಳಷ್ಟು ಕೋವಾಕ್ಸಿನ್ ಲಸಿಕೆಯನ್ನು ಮೇ, ಜೂನ್ ಮತ್ತು ಜುಲೈತಿಂಗಳೊಳಗೆ ಪೂರೈಸುವುದಕ್ಕಾಗಿ ಏ.28ರಂದು ಭಾರತ್‌ ಬಯೋಟೆಕ್ ಕಂಪನಿಗೆ 787.50 ಕೋಟಿ (ಟಿಡಿಎಸ್‌ ಕಡಿತಗೊಂಡು 772.50) ಪೂರ್ಣ ಹಣವನ್ನು ಏಪ್ರಿಲ್ 28ರಂದು ಬಿಡುಗಡೆ ಮಾಡಲಾಗಿದೆ. ದಿನ ಕಂಪನಿಯವರು ಹಣವನ್ನು ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರ ಮೇ 2 ರಂದು16.54 ಕೋಟಿ ಡೋಸ್‌ಗಳಷ್ಟು ಲಸಿಕೆಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಕೆ ಮಾಡಿದೆ. ಸಚಿವಾಲಯದ ಬಳಿ ಇನ್ನೂ 78 ಲಕ್ಷ ಡೋಸ್‌ಗಳಷ್ಟು ಲಸಿಕೆಗಳಿವೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 54 ಲಕ್ಷ ಡೋಸ್‌ಗಳಷ್ಟು ಲಸಿಕೆಗಳನ್ನು ಸರಬರಾಜು ಮಾಡಲಾಗುತ್ತದೆ‘ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.