ಕೋವಿಶೀಲ್ಡ್‌ನ ೨ನೇ ಲಸಿಕೆ ಪಡೆದ ಡಿಸಿ

ರಾಯಚೂರು,ಏ.೦೮- ಕೋವಿಡ್‌ನ ಮೊದಲ ಲಸಿಕೆ ಪಡೆದವರು ಪ್ರೋಟೋಕಾಲ್ ಪ್ರಕಾರ ೨೮ ದಿನಗಳ ನಂತರ ಎರಡನೇ ಲಸಿಕೆ ಪಡೆಯಬೇಕಿದ್ದು, ಜಿಲ್ಲಾಧಿಕಾರಿಗಳಾದ ಆರ್.ವೆಂಕಟೇಶ ಕುಮಾರ್ ಅವರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಏ.೭ರ ಕೋವಿಶೀಲ್ಡ್‌ನ ಎರಡನೇ ಲಸಿಕೆ ಪಡೆದರು.
ನಂತರ ಅರ್ಧ ಗಂಟೆ ಅಲ್ಲಿಯೇ ಅವರನ್ನು ನಿಗಾವಣೆಯಲ್ಲಿ ಇರಿಸಲಾಗಿತ್ತು.
ಈ ಸಂದರ್ಭದಲ್ಲಿ ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ, ಆರ್‌ಸಿಎಚ್‌ಓ ಅಧಿಕಾರಿ ಡಾ. ವಿಜಯ, ಜಿಲ್ಲಾ ಸರ್ಜನ್ ಡಾ. ವಿಜಯ್ ಶಂಕರ್, ಕೋವಿಡ್ ಲಸಿಕೆಯ ನೋಡಲ್ ಅಧಿಕಾರಿ ಡಾ. ಶಿವಪ್ಪ, ರಿಮ್ಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.