ಕೋವಿಡ 19 ಸೋಂಕಿಗೆ ಲಸಿಕೆ ಬಗ್ಗೆ ವೈದ್ಯ ಸಿಬ್ಬಂದಿಗಳಿಗೆ ತರಬೇತಿ

ಹರಿಹರ.ಜ.9;  ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ವೈರಸ್ ಸೋಂಕಿತರಿಗೆ ಲಸಿಕೆ ನೀಡುವ ಪೂರ್ವ ಸಿದ್ಧತೆ ಬಗ್ಗೆ  ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೀಟ ಜನ್ಯ ಮತ್ತು ನೋಡಲ್ ಅಧಿಕಾರಿ ಡಾ ನಟರಾಜ್  ಆಸ್ಪತ್ರೆಯ ವೈದ್ಯರು, ನರ್ಸಿಂಗ್ ಅಧಿಕಾರಿಗಳು, ಆಶಾ ಕಾರ್ಯಕರ್ತರು ಮೇಲ್ವಿಚಾರಕರಿಗೆ ಲಸಿಕೆ  ನೀಡುವ ಕುರಿತು ತರಬೇತಿಯನ್ನು ನೀಡಲಾಯಿತು. ಈ ವೇಳೆ ಮಾತನಾಡಿದ ಅವರು ಸೋಂಕಿಗೆ ಲಸಿಕೆ ನೀಡುವ ಪ್ರಾಯೋಗಿಕವಾಗಿ ಕಾರ್ಯಕ್ರಮ ದೇಶಾದ್ಯಂತ ಆರಂಭವಾಗಲೆಂದು ಪೂರ್ವ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಕೇಂದ್ರಗಳಲ್ಲಿ ಬೇಟಿ ನೀಡಿ ಸಂಬಂಧಿಸಿದ ವೈದ್ಯರು ಮತ್ತು ನರ್ಸಿಂಗ್ ಅಧಿಕಾರಿಗಳು ಆರೋಗ್ಯ ಇಲಾಖೆಯ ತಾಲ್ಲೂಕು  ವೈದ್ಯಾಧಿಕಾರಿಗಳು  ಮೇಲ್ವಿಚಾರಕರು ಆಶಾ ಕಾರ್ಯಕರ್ತರಿಗೆ ಲಸಿಕೆ ನೀಡುವ ಕುರಿತು ತರಬೇತಿಯನ್ನು ನೀಡಿ ಸ್ಥಳಗಳನ್ನು ಪರಿಶೀಲನೆ ಮಾಡಲಾಗುತ್ತದೆ ಎಂದರು. ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗುತ್ತದೆ ಆದ್ದರಿಂದ ವೈದ್ಯರು ಆರೋಗ್ಯ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಗಳು ಚುರುಕಾಗಿ ಕಾರ್ಯವನ್ನು ನಿರ್ವಹಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು  ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಯಾವುದೇ ನ್ಯೂನತೆ ಬರದಂತೆ  ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ತರಬೇತಿಯಲ್ಲಿದ್ದ ವೈದ್ಯರು ನರ್ಸಿಂಗ್ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಹೇಳಿದರು. ಈ ಸಂದರ್ಭದಲ್ಲಿ ಹರಿಹರ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತ ಅಧಿಕಾರಿ ಡಾ. ಡಿ ಚಂದ್ರಮೋಹನ್. ಸಾರ್ವಜನಿಕಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಎಲ್ ಹನುಮನಾಯ್ಕ್ .ವೈದ್ಯರುಗಳಾದ ಪಂಕಜಾ. ವಿಶ್ವನಾಥ್ ಕುಂದಗೋಳಮಠ .ಮಂಜುನಾಥ್ ಸ್ವಾಮಿ.ನರ್ಸಿಂಗ್ ಅಧಿಕಾರಿ ಗಳಾದ ರೂಪಾ .ಶೋಭಾ ದೊಡ್ಮನಿ .ಲಲಿತಮ್ಮ .ಮೊಹಮ್ಮದ್ ರಫಿ  .ಹಾಗೂ ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಎಂ ಉಮ್ಮಣ್ಣ .ಆರೋಗ್ಯ ಇಲಾಖೆಯ ಮೇಲ್ವಿಚಾರಕರು ಆಶಾ ಕಾರ್ಯಕರ್ತರು ಇಲಾಖೆಯ ಸಿಬ್ಬಂದಿ ವರ್ಗದವರು ಇತರ ಲಸಿಕೆ ತರಬೇತಿ ಕಾರ್ಯಕ್ರಮದಲ್ಲಿ ಹಾಜರಿದ್ದರು