ಕೋವಿಡ 19 ಲಾಕ್ಡೌನ್ ಪರಿಣಾಮ ಯಾರೊಬ್ಬರು ಹಸಿವಿನಿಂದಾಗಿ ಬಳಲಬಾರದು: ಸುನೀಲ ಜೈನಾಪುರ

ವಿಜಯಪುರ, ಮೇ.31-ಭಾರತ ಯುವ ವೇದಿಕೆ ಚಾರಿಟೇಬಲ್ ಪೌಂಡೇಶನ್ (ರಿ) ವಿಜಯಪುರ ಇವರ ವತಿಯಿಂದ ಸತತವಾಗಿ ಹದಿನಾಲ್ಕು ದಿನಗಳ ವರೆಗೆ ಕೋವಿಡ 19 ದಿಂದಾಗಿ ಲಾಕ್ಡೌನ್ ಇರುವದರಿಂದ ಯಾರು ಕೊಡ ಹಸಿವಿನಿಂದಾಗಿ ಬಳಲಬಾರದು ಎಂದು ವೇದಿಕೆಯ ರಾಜ್ಯಾಧ್ಯಕ್ಷರಾದ ಸುನೀಲ ಜೈನಾಪುರ ಹೇಳಿದ್ದಾರೆ.
ವೇದಿಕೆಯು ಸರಕಾರದ ನಿಯಮಾವಳಿ ಪ್ರಕಾರ ನಗರದ ನಾನಾ ಪ್ರದೇಶಗಳಾದ ಕೆ.ಸಿ. ನಗರದ ಶ್ರೀ ಶಾಂತೇಶ್ವರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಡುಗೆಯನ್ನು ತಯಾರಿಸಿ ರೋಗಿಗಳ ಪರಿಚಾರಕರಿಗೆ ಪ್ರತಿ ನಿತ್ಯ ಪಲಾವ್, ಉಪ್ಪಿಟ್ಟು ಮತ್ತು ನೀರಿನ ಬಾಟಲಿ ಕನಿಷ್ಠ 400-500 ಜನರಿಗೆ ಖಾಸಗಿ ಆಸ್ಪತ್ರೆಗಳಿಗೆ ಮತ್ತು ಸರಕಾರಿ ಆಸ್ಪತ್ರೆ ಆವರಣ, ಸಿಟಿ ಬಸ್ಸ್ಟಾಂಡ್, ಸ್ಲಂ ನಿವಾಸಿಗಳಿಗೆ ಮುಂತಾದ ಕಡೆಗಳಲ್ಲಿ ಹಸಿದವರ ಹಸಿವು, ನೀರಡಿಕೆ, ನಿರಾಶ್ರಿತರಿಗೆ ವೇದಿಕೆಯು ದಾನಿಗಳ ಸಹಾಯದ ಜೊತೆಗೆ ಕೆಸಿ ನಗರ ಮತ್ತು ಅಲಕುಂಟೆ ನಗರ ಹಿರಿಯರಾದ ಬಿ.ಜೆ ಇಂಡಿ ಸರ್ ಮತ್ತು ಭೀಮಸೇನ ಕೋಕರೆ ಇನ್ನು ಎಲ್ಲಾ ಹಿರಿಯರು ಸಹಾಯ ಮತ್ತು ಸಹಕಾರ ನೀಡಿದ್ದಾರೆ ನಮ್ಮ ಕೈಲಾದಷ್ಟು ಸಹಾಯ ಮಾಡುತಿದ್ದಿವೆ ಅದೇ ರೀತಿಯಲ್ಲಿ ಮುಂದೆಯು ಕೊಡ ನಿರಂತರವಾಗಿ ಮುಂದುವರಿಯಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರಾದ ಆನಂದ ಬ್ಯಾಲಾಳ, ಅವದುತ್ ಕೋಳಿ, ಶಶಿ ಸಂಗಣ್ಣವರ, ಸಂಜು ಹೂಗಾರ, ವೈ.ಎಸ್ ಅರಬಿ, ಸತೀಶ ದೊಡ್ಡಮನಿ, ಶಾಹಿದ್ ಕೆ.ಎಫ್, ಪೃಥ್ವಿ ನಾಯಕ, ತನ್ವಿರ ಕೋಲಾರ, ಸಂದೀಪ್ ರಾಥೋಡ, ನಿಖಿಲ್ ಬಾಗೇವಾಡಿ, ಆನಂದ್ ರೊಯ್, ಅಮೀನ ಮುಲ್ಲಾ, ವಿನೋದ್ ರಾಥೋಡ, ಕಿರಣ್ ಅಲಕುಂಟೆ, ರಮೇಶ್ ಪೂಜಾರಿ, ಬೈಲಪ್ಪ,ಶೋಯಿಬ್ ಏನ್ ಎಫ್, ಉಮೇಶ್ ಗುಡಿಸಲಮನಿ, ಮುಬಾರಕ್ ಶೇಕ, ದಯಾನಂದ, ತಬ್ರೀಜ್, ರಾಹುಲ್ ಪನ್ಹಾಳಕರ, ಅನಿಲ್ ನಾನೂರಿ, ವಿವೇಕ್ ಸಿಂದಗಿ, ರಾಜೇಶ್ ಕುಂಟೆ, ಶಿವರಾಜ ಬೇವಿನಮರದ, ಬಂದೇನವಾಜ್ ಹೊನವಾಡ, ಯೂಸುಫ್ ಇನಾಮದಾರ, ಮಲ್ಲು ಕುಮಟಗಿ ಉಪಸ್ಥಿತರಿದ್ದರು.