ಕೋವಿಡ ಸಮಯದಲ್ಲಿ ರಾಜಕೀಯ ಬೇಡ: ಸಂತೋಷ ಗಡಂತಿ

ಚಿಂಚೋಳಿ,ಏ.29- ಕೋವಿಡ ಮಹಾಮಾರಿ ಎರಡನೆ ಅಲೆಯಿಂದಾಗಿ ದೇಶ ತಲ್ಲಣಗೊಂಡಿದೆ, ತಾಲೂಕಿನ ಜನತೆರು ಅನಗತ್ಯವಾಗಿ ಹೊರಗಡೆ ಬರಬೇಡಿ ಮತ್ತು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ಬಿಜೆಪಿ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ ಅವರು ಮನವಿ ಮಾಡಿದ್ದಾರೆ.
ವಿಶೇಷವಾಗಿ ವಿರೋಧ ಪಕ್ಷದವರು ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಬಿಟ್ಟು ಸಾರ್ವಜನಿಕರ ಸೇವೆಗೆ ಮುಂದಾಬೇಕು, ಹಾಗೂ ಕೋವಿಡ ಹೆಲ್ತ ಕೇರ್ ಸೆಂಟರನ್ನು, ಶಾಸಕ/ಸಂಸದರು ಮುತುವರ್ಜಿ ವಹಿಸಿ ಚಿಂಚೋಳಿ ಆಸ್ಪತ್ರೆಯಲ್ಲಿ ಅಳವಡಿಸಿದ್ದಾರೆ, ಶೋಕಿ ರಾಜಕಾರಣಗೋಸ್ಕರ ಉಧ್ಘಾಟನೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿರುವ ಸುಭಾಷ ರಾಠೋಡ ಅವರು, ಮೊದಲು ಆಸ್ಪತ್ರೆಗೆ ಭೇಟಿ ನೀಡಿ ವಿಕ್ಷಿಸಲಿ ಎಂದರು.
ಇಗಾಗಲೆ ಹಲವಾರು ಸೊಂಕಿತ ರೋಗಿಗಳಿಗೆ ಚಿಕಿತ್ಸೆ ಕೋಡಲಾಗಿದೆ, ಮತ್ತು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ, ಆಕ್ಸಿಜನ ಸೌಲಭ್ಯ ಕೂಡ ಒದಗಿಸಲಾಗಿದೆ, ಹಾಗೂ ಶಾಸಕರಾದ ಡಾ.ಅವಿನಾಶ ಜಾಧವ, ಸಂಸದರಾದ ಡಾ.ಉಮೇಶ ಜಾಧವ ಅವರು ವೈದ್ಯರಿರುವುದರಿಂದ ತಾಲೂಕ ಆಸ್ಪತ್ರೆಯಲ್ಲಿ ಸುಸಜ್ಜಿತ ಕೋವಿಡ ಸೆಂಟರ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಅವರು ನಿರಂತರವಾಗಿ ವೈದ್ಯರ ಜೊತೆ ಸಂಪರ್ಕಿಸಿ, ಯಾವುದೇ ರೀತಿ ಆಸ್ಪತ್ರೆಯಲ್ಲಿ ಏನು ಕಡಿಮೆ ಆಗದಂತೆ ಮೇಲುಸ್ತುವಾಗಿ ವಹಿಸುತ್ತಿದ್ದಾರೆ ಸೋಂಕಿತ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಸಕಾಲದಲ್ಲಿ ಅಂದರೆ ತುರ್ತಾಗಿ ಆಸ್ಪತ್ರೆಗೆ ಬೇಕಾದ ಎಲ್ಲಾ ರೀತಿಯ ಔಷದ ಸೇರಿದಂತೆ ಸಹಕಾರ ನೀಡುತಿದ್ದಾರೆ.
ಅದೇ ರೀತಿ ಸಂಸದರಾದ ಡಾ ಉಮೇಶ ಜಾಧವ, ಭಗವಂತ ಖುಬಾ ಅವರು ಎಲ್ಲಾ ತಾಲೂಕ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಚಿಕಿತ್ಸೆ ಗೋಸ್ಕರ ಸಲಹೆ ನೀಡುತಿದ್ದಾರೆ.
ಕಲಬುರ್ಗಿಯಲ್ಲಿ ಕೋವಿಡ ಹೆಚ್ಚಾಗಿದ್ದರಿಂದ ಸ್ವತಃ ಡಾ ಉಮೇಶ ಜಾಧವ ಅವರು ಬೆಂಗಳೂರಿನಿಂದ 350 ರೆಮಡೆಸಿವಿರ್ ಚುಚ್ಚುಮದ್ದುಗಳನ್ನು ತಂದಿದ್ದಾರೆ, ಶೋಕಿಗೋಸ್ಕರವಾಗಿ ತಂದಿಲ್ಲ ಕಲಬುರ್ಗಿ ಜಿಲ್ಲೆಯ ಸಾರ್ವಜನಿಕ, ಕೋವಿಡ ಸೊಂಕಿತರ ಹಿತದೃಷ್ಟಿಯಿಂದ ಅವರು ಪ್ರತಿದಿನ ಪ್ರತಿಕ್ಷಣ ರಾತ್ರಿ ಸಮಯದಲ್ಲಿಯೂ ಕೂಡ ಸ್ಪಂದಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುತಿದ್ದಾರೆ.
ಆದ್ದರಿಂದ ಸುಭಾಷ ರಾಠೋಡ ಅವರೇ ಆರು ತಿಂಗಳಿಗೆ ಒಮ್ಮೆ ಚಿಂಚೋಳಿಗೆ ಬಂದು ರಾಜಕೀಯ ಮಾಡುವುದನ್ನು ಬಿಟ್ಟು ತಮ್ಮ ಸ್ವಕ್ಷೇತ್ರವಾದ ಆಳಂದಗೆ ತೆರಳಿ ಸಾರ್ವಜನಿಕರ ಕುಂದು ಕೊರತೆ ಆಲಸಿ ಎಂದು ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ ಅವರು ಸವಾಲು ಹಾಕಿದ್ದಾರೆ.
ಸಾರ್ವಜನಿಕರು ಕಡ್ಡಾಯ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲರೂ ಕೈಜೊಡಿಸುವಂತೆ ಅವರು ಕೋರಿದರು.