ಕೋವಿಡ ಸಮಯದಲ್ಲಿ ರಾಜಕೀಯ ಬೇಡ ಪ್ರೇಮಸಿಂಗ ಜಾಧವ್

ಚಿಂಚೋಳಿ,ಏ.30- ಕೋವಿಡ ಮಹಾಮಾರಿ ಎರಡನೆ ಅಲೆ ಎದುರಾಗಿದ್ದು ಇಡಿ ದೇಶ ತಲ್ಲಣಗೊಳಿಸಿದೆ, ತಾಲೂಕಿನ ಜನತೆಯಲ್ಲಿ ವಿನಂತಿಸಿಕೊಳ್ಳುವದೇನೆಂದರೆ, ತಾವು ಅನಗತ್ಯವಾಗಿ ಹೊರಗಡೆ ಬರಬೇಡಿ, ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ವಿರೋಧ ಪಕ್ಷದವರು ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಬಿಟ್ಟು ಸಾರ್ವಜನಿಕರ ಸೇವೆಗೆ ಬನ್ನಿ ಎಂದು ಐನಾಪೂರ್ ತಾಲೂಕ ಪಂಚಾಯತ ಸದಸ್ಯರಾದ ಪ್ರೇಮಸಿಂಗ ಜಾಧವ್ ಅವರು ಮನವಿ ಮಾಡಿದ್ದಾರೆ.
ಕೋವಿಡ ಹೆಲ್ತ ಕೇರ್ ಸೆಂಟರನ್ನು, ಶಾಸಕ/ಸಂಸದರು ಮುತುವರ್ಜಿ ವಹಿಸಿ ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ಅಳವಡಿಸಿದ್ದಾರೆ, ಶೋಕಿ ರಾಜಕಾರಣಗೋಸ್ಕರ ಉಧ್ಘಾಟನೆ ಮಾಡಿದ್ದಾರೆ ಎಂದು ಹೇಳುವ ವಿರೋಧ ಪಕ್ಷದ ನಾಯಕರು ಮೊದಲು ಆಸ್ಪತ್ರೆಗೆ ಭೇಟಿ ಕೊಟ್ಟು ನೋಡಿ ಇಗಾಗಲೆ ಹಲವಾರು ಸೊಂಕಿತ ರೋಗಿಗಳಿಗೆ ಚಿಕಿತ್ಸೆ ಕೋಡಲಾಗಿದೆ, ಮತ್ತು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ, ಆಕ್ಸಿಜನ ಸೌಲಭ್ಯ ಕೂಡ ಒದಗಿಸಲಾಗಿದೆ, ಕಲ್ಬುರ್ಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ ಅವರು ವೈದ್ಯರಿರುವುದರಿಂದ ಎಲ್ಲಾ ತಾಲೂಕ ಆಸ್ಪತ್ರೆಯಲ್ಲಿ ಸುಸಜ್ಜಿತ ಕೋವಿಡ ಸೆಂಟರ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಅವರು ನಿರಂತರವಾಗಿ ವೈದ್ಯರ ಜೊತೆ ಸಂಪರ್ಕಿಸಿ, ಯಾವುದೇ ರೀತಿ ಆಸ್ಪತ್ರೆಯಲ್ಲಿ ಏನು ಕಡಿಮೆ ಇರಬಾರದು, ರೋಗಿಗಳಿಗೆ ತೊಂದರೆಯಾಗಬಾರದು ಎಂದು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುತಿದ್ದಾರೆ, ಅದೇ ರೀತಿ ಸಂಸದರಾದ ಡಾ ಉಮೇಶ ಜಾಧವ ಅವರು ಎಲ್ಲಾ ತಾಲೂಕ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ ಕುರಿತು ಅಧಿಕಾರಿಗಳ ಜೊತೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಗೋಸ್ಕರ ಸಲಹೆ ನೀಡುತಿದ್ದಾರೆ, ಅಲ್ಲದೆ ಕಲಬುರ್ಗಿಯಲ್ಲಿ ಕೋವಿಡ ಹೆಚ್ಚಾಗಿದ್ದರಿಂದ ಸ್ವತಃ ಡಾ ಉಮೇಶ ಜಾಧವ ಅವರು ಬೆಂಗಳೂರಿನಿಂದ 350 ರೆಮಡೆಸಿವಿರ್ ಚುಚ್ಚುಮದ್ದುಗಳನ್ನು ತಂದಿದ್ದಾರೆ, ಶೋಕಿಗೋಸ್ಕರವಾಗಿ ತಂದಿಲ್ಲ ಕಲಬುರ್ಗಿ ಜಿಲ್ಲೆಯ ಸಾರ್ವಜನಿಕ, ಕೋವಿಡ ಸೊಂಕಿತರ ಹಿತದೃಷ್ಟಿಯಿಂದ ಅವರು ಪ್ರತಿದಿನ ಪ್ರತಿಕ್ಷಣ ರಾತ್ರಿ ಸಮಯದಲ್ಲಿಯೂ ಕೂಡ ಸ್ಪಂದಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುತಿದ್ದಾರೆ. ಯುವಕರಂತೆ ಕಲ್ಬುರ್ಗಿಯ ಲೋಕಸಭೆ ಸದಸ್ಯರಾದ ಡಾ ಉಮೇಶ ಜಾಧವ ಅವರು ಜನ ಸೇವೆ ಮಾಡುತ್ತಿದ್ದಾರೆ ಅವರಿಗೆ ಎಷ್ಟು ಕೋಟಿ ವಂದನೆ ಹೇಳಿದರು ಸಾಕಾಗುವುದಿಲ್ಲ ಎಂದು ಐನಾಪೂರ್ ತಾಲೂಕ ಪಂಚಾಯತ ಸದಸ್ಯರಾದ ಪ್ರೇಮಸಿಂಗ ಜಾಧವ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.