ಕೋವಿಡ ಸಂಕಷ್ಟದ ವಿಫಲತೆ ಖಂಡಿಸಿ ಆನ್‍ಲೈನ್ ಚಳವಳಿ ಕೈಗೊಂಡ ಎಐಡಿಎಸ್‍ಓ

ಕಲಬುರಗಿ,ಏ.28- ಕೋವಿಡ ಸಂಕಷ್ಟ ಹಾಗೂ ಸರ್ಕಾರದ ವಿಫಲಗೆಯನ್ನು ಖಂಡಿಸಿ ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಸಪ್ತಾಹ ದಿನ ಚಳವಳಿ ಕೈಗೊಂಡಿದೆ.
ಕೋವಿಡ್ ನಿರ್ವಾಹಣೆಗೆ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಂತೆ ಹಾಗೂ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಮತ್ತು ಲಸಿಕೆ ನೀಡುವಂತೆ ಒತ್ತಾಯಿಸಲು ಕಳೆದ ಏಪ್ರಿಲ್ 25ರಿಂದ ಮೇ 1 ರವರೆಗೆ ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆಯು ಅಖಿಲ ಭಾರತ ಸಪ್ತಾಹ ದಿನಕ್ಕೆ ಕರೆಕೊಟ್ಟಿದೆ.
ಕಲಬುರಗಿ ಜಿಲ್ಲೆಯಲ್ಲೂ ಇದರ ಅಂಗವಾಗಿ ಪ್ರತಿದಿನವೂ ವಿಭಿನ್ನ ರೀತಿಯಲ್ಲಿ ಆನ್ಲೈನ್ ಚಳುವಳಿಯನ್ನು ಸಂಘಟಿಸುತ್ತಿದೆ. ಅಂತೆಯೇ ಅಖಿಲ ಭಾರತ ಸಪ್ತಾಹದ ಮೂರನೇ ದಿನದಂದು ಕಲಬುರಗಿ ಜಿಲ್ಲೆಯಾದ್ಯಂತ ಆನ್ಲೈನ್ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯದ್ಯಂತ ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಒಳಗೊಂಡಂತೆ ಸರ್ಕಾರದ ವಿಫಲತೆಯನ್ನು ವಿರೋಧಿಸಿ ಸಂಘಟನೆಯ ಬೇಡಿಕೆಗಳನ್ನು ಹೊಂದಿದ ಪೆÇೀಸ್ಟರ್ ಗಳನ್ನು ಹಿಡಿದು ಫೆÇೀಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್,ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ವಾಟ್ಸಾಪ್ ಸ್ಟೇಟಸ್ ಗೆ ಹಾಕಿಕೊಳ್ಳುವುದರ ಮೂಲಕ ಚಳುವಳಿಯಲ್ಲಿ ಭಾಗವಹಿಸಿದರು.
ಬರುವ ಮೇ 1ರ ವರೆಗೂ ಹೀಗೆ ಹಲವಾರು ರೀತಿಯ ಆನ್ಲೈನ್ ಚಳುವಳಿಗಳು ಮುಂದುವರೆಯಲಿದ್ದು ವಿದ್ಯಾರ್ಥಿಗಳು, ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಐಡಿಎಸ್‍ಒ ಕಲಬುರಗಿ ಜಿಲ್ಲಾ ಸಮಿತಿಯು ಕರೆ ನೀಡುತ್ತದೆ.
ಕೋವಿಡ್ -19ರ ಎರಡನೇ ಅಲೆಗೆ ಒಂದೆಡೆ ಇಡೀ ದೇಶವೇ ನಲುಗಿದೆ. ಎಲ್ಲೆಡೆ ಸಾವು ನೋವುಗಳ ಆಕ್ರಂದನ, ಜೀವನದ ಮೇಲೆ ಹತಾಶೆಯು ಮನೆ ಮಾಡಿದೆ. ದಿನೇ ದಿನೇ ಏರುತ್ತಿರುವ ಪ್ರಕರಣಗಳು ಮೈ ನಡುಗಿಸಿದೆ. ಸರಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರವೇ ಪ್ರತಿ ದಿನಕ್ಕೆ ಸರಿಸುಮಾರು ಮೂರ ರಿಂದ ಮೂರುವರೇ ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಇನ್ನು ವಾಸ್ತವದಲ್ಲಿ ಈ ಅಂಕಿ – ಅಂಶಗಳು ಆಘಾತಕಾರಿಯಾಗಿವೆ. ತನ್ನನ್ನು, ತನ್ನವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಅದೆಷ್ಟೋ ಜೀವಗಳು ಚೀರುತ್ತಿರುವ ಘಟನೆಗಳು ಹೃದಯವಿದ್ರಾವಕವಾಗಿದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ಕೊರೊನಾಯಿಂದ ಬಳಲುತ್ತಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆಯಿಲ್ಲದೇ ಸಾಯುತ್ತಿರುವುದು ಅತ್ಯಂತ ದುರಂತರವೇ ಸರಿ. ಕಳೆದ ದಿನ ದೇಶದ ಎರಡು ಆಸ್ಪತ್ರೆಗಳಲ್ಲಿ 30 ಜನರು ಆಕ್ಸಿಜನ್ ಇಲ್ಲದೇ ಅಸುನೀಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿವೆ. ಆಸ್ಪತ್ರೆಗಳಲ್ಲಿ ಮೂಲಭೂತವಾಗಿ ಆಕ್ಸಿಜನ್ ಸೌಕರ್ಯ ಎಲ್ಲರಿಗೂ ದೊರಕಬೇಕು..ಆದರೆ ಈ ಮಟ್ಟಿಗಿನ ಕೊರತೆ ಹಾಗೂ ಆಕ್ಸಿಜನ್ ಗಾಗಿ ಜನ ಬೀದಿ ಬೀದಿ ಅಲೆಯುತ್ತಿರುವ ಧಾರುಣ ಪರಿಸ್ಥಿತಿ ಏಕೆ!? ಇದಕ್ಕೆ ಸರ್ಕಾರದ ಬೇಜವಬ್ದಾರಿ ಹಾಗೂ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣವಾಗಿದೆ ಎಂದು ಅಪಾದಿಸಿದೆ.
ದಿನವೂ ಸಾವಿರಾರು ಜನ ಸಾಯುತ್ತಾ, ಕುಟುಂಬದವರು ಚಿತಾಗಾರದಲ್ಲಿ ಸಿಕ್ಕಸಿಕ್ಕಲ್ಲಿ ಶವಗಳನ್ನು ಸುಡಲು ಕ್ಯೂ ನಿಂತಿದ್ದಾರೆ. ಈ ನಡುವೆಯು ಕೇಂದ್ರ ಸರಕಾರದ ಮಾನ್ಯ ಪ್ರಧಾನ ಮಂತ್ರಿಗಳು, ಗೃಹ ಸಚಿವರು ಮತ್ತು ಹಲವಾರು ಸಚಿವರು ಚುನಾವಣಾ ಪ್ರಚಾರಗಳಲ್ಲಿ ಇಷ್ಟು ಜನರನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಭಾಷಣಗಳನ್ನು ಮಾಡುತ್ತಿದ್ದಾರೆ.!! ಮತ್ತು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೋವಿಡ್ ಸೋಂಕು ಇದ್ದಾಗಿಯೂ , ಆರೋಗ್ಯ ಸಚಿವರು ಹಾಗೂ ಇನ್ನಿತರ ಮಂತ್ರಿಗಳು ಬಸವಕಲ್ಯಾಣ, ಮಸ್ಕಿ, ಉಪ ಚುನಾವಣಾ ಪ್ರಚಾರಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳದೇ ಕುರ್ಚಿಗಾಗಿ ಓಡಾಡುವುದರಲ್ಲಿ ವ್ಯಸ್ತರಾಗಿದ್ದಾರೆ !! ಚುನಾವಣೆಗೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವವರಿಗೆ ಜನರಿಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಉಚಿತ ಲಸಿಕೆ, ವೆಂಟಿಲೇಟರ್ ಪೂರೈಕೆ ಸಾಧ್ಯವಾಗುವುದಿಲ್ಲವೇ!? ಜನರ ಅಮೂಲ್ಯ ಜೀವಗಳನ್ನು ಉಳಿಸುವ ಮಾತಾನಾಡುವ ಬದಲು ಚಿತಾಗಾರಗಳನ್ನು ಹೆಚ್ಚಿಸುವ ಬಗ್ಗೆ ಮಾತಾನಾಡುತ್ತಾರೆ ನಮ್ಮ ಆಳ್ವಿಕರು..!! ಜನರ ಜೀವಕ್ಕೆ ಬೆಲೆ ಕೊಡದ ಸರ್ಕಾರ ಇನ್ನೇನೂ ತಾನೇ ಕೊಟ್ಟೀತು..!?
ಒಂದೆಡೆ ತೀವ್ರ ಆರ್ಥಿಕ ಬಿಕ್ಕಟ್ಟು ಜನರನ್ನು ಒಂದು ಹೊತ್ತಿನ ಊಟಕ್ಕೂ ತತ್ತರಿಸುವಂತೆ ಮಾಡಿದೆ. ಹಾಗೂ ಇನ್ನೊಂದೆಡೆ ಈ ಮಾರಣಾತಿಂಕ ಕಾಯಿಲೆಯಿಂದ ಸರಿಯಾದ ಆರೋಗ್ಯ ವ್ಯವಸ್ಥೆಲ್ಲದೇ ಹುಳುಗಳಂತೆ ಜನ ಪ್ರಾಣ ಬಿಡುತ್ತಿದ್ದಾರೆ. ಈ ಪ್ರಕ್ಷುಬ್ಧ ಪರಿಸ್ಥಿತಿಗೆ ನಮ್ಮೆಲ್ಲರ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಯೇ ಕಾರಣವಾಗಿದೆ ಎಂದು ದೂರಿದೆ.