ಕೋವಿಡ ಸಂಕಷ್ಟದ ಈ ಸಮಯದಲ್ಲಿ ದೂರವಾಗದೇ ನೆರವಿಗೆ ಮುನ್ನುಗ್ಗಿ: ಅತಾ ಉಲ್ ಮುಜೀಬ್ ಲೋಣೆ

ಕಲಬುರಗಿ,ಜೂ.7- ಕೋವಿಡ್ ಸಂಕಷ್ಟದ ಈ ದಿನಗಳಲ್ಲಿ ಸಂತ್ರಸ್ಥರಿಗೆ ನೆರವಾಗುವ ಮೂಲಕ ಮಾನವೀಯ ಸೇವೆಯನ್ನು ಕೈಗೊಳ್ಳುವುದು ಪ್ರತಿಯೊಬ್ಬ ಅಹ್ಮದಿಯ ಮುಸ್ಲೀಮರ ಕರ್ತವ್ಯವಾಗಬೇಕು ಎಂದು ಮಜ್ಲಿಸ್ ಅನ್ಸಾರುಲ್ಲಾ ರಾಷ್ಟ್ರೀಯ ಅಧ್ಯಕ್ಷ ಅತಾ ಉಲ್ ಮುಜೀಬ್ ಲೋಣೆ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಅಹ್ಮದಿಯಾ ಅನ್ಸಾರುಲ್ಲಾರರಿಗಾಗಿ ರವಿವಾರ (06/06/2021) ಸಂಜೆ ಹಮ್ಮಿಕೊಂಡಿದ್ದ ಗೂಗಲ್ ಮೀಟ್ ಆನ್‍ಲೈನ್ ತರಬೇತಿ ಕಾಂiÀರ್iಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಕೋವಿಡ್ ಸೋಂಕು ಹಲವರನ್ನು ಬಲಿ ಪಡೆದಿದೆ, ಮತ್ತು ಬಹುತೇಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಲ್ಲದೇ ನಮ್ಮೆಲ್ಲರನ್ನು ದೂರವೂ ಮಾಡಿರುವ ಇಂತಹ ಕಾಲಘಟ್ಟದಲ್ಲಿ ನಾವೇಲ್ಲರು ನೆರವಿಗೆ ಮುಂದಾಗುವುದು ಅತಿಅವಶ್ಯಕವಾಗಿದೆ ಎಂದರು.
ನಿಮ್ಮ ನೆರೆಹೊರೆಯವರು ಹಾಗು ಬಂಧುಬಳಗವನ್ನು ಮತ್ತು ಸ್ನೇಹಿತರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿರಿ, ಅವರ ನೆರವಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿ ಮತ್ತು ವಿಶೇಷವಾಗಿ ಅವರ ಆರೋಗ್ಯಕ್ಕಾಗಿ ಅಲ್ಲಾಹನೋಂದಿಗೆ ಪ್ರಾರ್ಥಿಸಿರಿ ಎಂದರು.
ದೇವನಿಂದ ಅವತರಿಸಿದ ಮಹಾಪುರುಷರೆಲ್ಲರೂ ಭಕ್ತರನ್ನು ದೇವನ ಸನ್ನಿಧಿಗೆ ಮುಟ್ಟಿಸು ಮಾರ್ಗವನ್ನು ತೋರಿಸಿದ್ದಾರೆ. ದೇವನಿಗೆ ಸಂಪೂರ್ಣ ಶರಣಾಗಿ ಮಾನವೀಯ ಸೇವೆಯಲ್ಲಿ ತೊಡಗುವವನು ಮಾತ್ರ ಇಹ ಮತ್ತು ಪರ ಲೋಕದಲ್ಲಿ ಯಶಸ್ವಿಯಾಗುತ್ತಾನೆ.
ಪ್ರವಾದಿ ಮೊಹ್ಮದ (ಸಅ) ಪೈಗಂಬರರ ಭವಿಷ್ಯವಾಣಿಯಂತೆ ಅಂತ್ಯಯುಗದಲ್ಲಿ ಮಸೀಹ ಮೌವೂದರು ಅವತರಿಸುವರು, ಅವರೋಂದಿಗೆ ನಿಷ್ಠೆಯ ದಿಕ್ಷೆ ಪಡೆಯುವ ಮೂಲಕ ಅಲ್ಲಾಹನು ಅನುಗೃಹಿಸಿರುವ ಖಿಲಾಫತ್ತಿನ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಈ ವ್ಯವಸ್ಥೆಯಿಂದ ಭಕ್ತರ ಪ್ರಾರ್ಥನೆಯ ಸ್ವೀಕಾರ ಹಾಗೂ ಜೀವಂತ ದೇವನ ದರ್ಶನಭಾಗ್ಯವೂ ನೈಜಭಕ್ತರಿಗೆ ಲಭ್ಯವಾಗುತ್ತದೆ.
ತಮ್ಮ ಕುಟುಂಬಗಳ ಯಜಮಾನರಾದ ಅನ್ಸಾರುಲ್ಲಾರು, ತಮ್ಮ ಮಕ್ಕಳಿಗೆ ಮಾನವೀಯ ಸೇವೆ ಮಾಡುವ ಸಂಸ್ಕಾರ ನೀಡಿರಿ, ಅವರ ಮೇಲ್ವಿಚಾರಣೆಯನ್ನು ವಹಿಸಿಕೊಂಡು ಖಿಲಾಫತ್ತಿನೊಂದಿಗೆ ಅಧಿನರಾಗಿರುವಂತೆ ನೋಡಿಕೊಳ್ಳಿರಿ ಎಂದರು.
ದಕ್ಷಿಣ ಭಾರತ ಉಪಾಧ್ಯಕ್ಷ ಶಕೀಲ ಅಹ್ಮದ ಸಾಬ ದಂಡೋತಿ ಅವರು ಪವಿತ್ರ ಕುರ್‍ಆನ್ ಪಠಣದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಅಧ್ಯಕ್ಷ ತಾಜುದ್ದೀನ ಸಾಬ ಕೇರಳ ಅವರು, ಸ್ವಾಗತಿಸಿಕೊಂಡರು. ಬೆಂಗಳೂರು ಜಿಲ್ಲಾಧ್ಯಕ್ಷ ಸೈಯದ ಶಾರಿಕ್ ಮಜೀದ ಸಾಹೇಬರು ವಂದಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಸರಿಸುಮಾರು 400ಕ್ಕೂ ಹೆಚ್ಚು ಜನ ಅನ್ಸಾರುಲ್ಲಾರು ಈ ಆನ್‍ಲೈನ್ ತರಬೇತಿಯಲ್ಲಿ ಪಾಲ್ಗೊಂಡಿದ್ದರು ಕೊನೆಗೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.