ಕೋವಿಡ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

ಚಿಂಚೋಳಿ,ಸೆ.25- ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಕಾನೂನು ಸೇವಾ ಸಮಿತಿ ಮತ್ತು ತಾಲೂಕ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ್ ಜೇಟ್ಲಾ ಮತ್ತು ಸಿವಿಲ್ ನ್ಯಾಯಾಧೀಶ ರವಿಕುಮಾರ್ ಅವರು ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚಿಂಚೋಳಿಯ ಹಿರಿಯ ವಕೀಲರಾದ ಶ್ರೀಮಂತ ಬಿ ಕಟ್ಟಿಮನಿ. ಸುಯ9ಕಾಂತ ಚಿಂಚೋಳಿ. ಚಂದ್ರಶೆಟ್ಟಿ ಜಾಧವ್. ವಿಜಯಕುಮಾರ್ ರಾಠೋಡ. ಶ್ರೀನಿವಾಸ್ ಬಂಡಿ. ಜೀ ಕೇ ಗೋಖಲೆ. ಸುದರ್ಶನ್ ಬಿರಾದಾರ್. ಶಂಕರ್ ರಾಠೋಡ್. ವಿಶ್ವನಾಥ ಬೆನಕನ. ಚಿಂಚೋಳಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲ ರಾಠೋಡ್. ತಹಸಿಲ್ದಾರ್ ಅರುಣ್ ಕುಲಕರ್ಣಿ. ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಮೊಮ್ಮದ್ ಗಫರ್. ಆರ್ ಆಯ್ ವಿಎ ಪಿಡಿಯೋ ಸಂಜು ಮೆತ್ರಿ.ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು