ಕೋವಿಡ್ 4ನೇ ಅಲೆ ಹತೋಟಿಯಲ್ಲಿಡಲು ಮಾಸ್ಕ್ ಧರಿಸಿ, 

ಚಿತ್ರದುರ್ಗ.ಜ.೪;
ಕೋವಿಡ್ 4ನೇ ಅಲೆ ಹತೋಟಿಯಲ್ಲಿಡಲು ಮಾಸ್ಕ್ ಧರಿಸಿ, ಮುಂಜಾಗ್ರತಾ ಲಸಿಕೆ ವರಸೆ ತಪ್ಪದೇ ಪಡೆಯಿರಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಕೋವಿಡ್ ಲಸಿಕಾ ಅಧಿವೇಶನದಲ್ಲಿ ಅವರು ಮಾತನಾಡಿದರು.
ಕೋವಿಡ್ 4ನೇ ಬರಬಹುದಾದ ಪರಿಸ್ಥಿತಿ ಇರುವುದರಿಂದ ಸಾರ್ವಜನಿಕರು ಮುಂಜಾಗ್ರತೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು. ಕೋವಿಡ್ 4ನೇ ಅಲೆ ಹತೋಟಿಯಲ್ಲಿಡಲು ಮಾಸ್ಕ್ ಧರಿಸಿ ಮುಂಜಾಗ್ರತಾ ಲಸಿಕೆ ವರಸೆ ತಪ್ಪದೇ ಪಡೆಯಿರಿ. ತಾಲ್ಲೂಕಿನಲ್ಲಿ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
 ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಂತ್ರಣಾ ನಡುವಳಿಕೆಗಳ ಅಭ್ಯಾಸ ಮಾಡಿ. ಕೋವಿಡ್ 4ನೇ ಅಲೆಯನ್ನು ತಡೆಗಟ್ಟೋಣ ತಪ್ಪದೇ ಮಾಸ್ಕ್ ಧರಿಸುವುದು ಸ್ಯಾನಿಟೈಜರ್ ಬಳಸಿ ಕೈಗಳ ಶುಚಿತ್ವ ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಇರಿಸುವುದು, ಕೋವಿಡ್ ಮುಂಜಾಗ್ರತಾ ವರಸೆ ಲಸಿಕೆ ಪಡೆಯುವುದು, ಜಾತ್ರೆ ಹಬ್ಬ, ಜನಸಂದಣಿ ಸ್ಥಳಗಳಿಂದ ದೂರವಿರುವುದು, ಶೀತ ಕೆಮ್ಮು, ಜ್ವರ ನೆಗಡಿ ಬಂದಾಗ ತಪ್ಪದೇ ಕೋವಿಡ್ ಪರೀಕ್ಷೆ ತಪಾಸಣೆ ಮಾಡಿಸಿಕೊಳ್ಳುವುದು ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವಾಗ ಸೀನುವಾಗ ಮುಂಜಾಗ್ರತೆ ವಹಿಸುವುದು ಪ್ರಮುಖವಾಗಿದೆ ಎಂದರು.ತಾಲ್ಲೂಕಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ದಾಸ್ತಾನು ಲಭ್ಯವಿದೆ. ಮುಂಜಾಗ್ರತಾ    ಕೋವ್ಯಾಕ್ಸಿನ್ ಲಸಿಕಾ   ವರಸೆ ಪಡೆಯುವ ಒಟ್ಟು 28358 ಜನ ಫಲಾನುಭವಿಗಳು ಬಾಕಿ ಇರುತ್ತಾರೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿನ ಲಸಿಕೆ ನೀಡುತ್ತಿದ್ದಾರೆ. ಸಾರ್ವಜನಿಕರು ಕೋವ್ಯಾಕ್ಸಿನ್ ಲಸಿಕಾ ಫಲಾನುಭವಿಗಳು ಮುಂಜಾಗ್ರತಾ ವರಸೆ ಪಡೆಯಿರಿ. ಕೋವಿಶೀಲ್ಡ್ ಲಸಿಕೆ ದಾಸ್ತಾನು ಬಂದನಂತರ ಇದನ್ನೂ ಸಹ ಶೀಘ್ರವಾಗಿ ನೀಡಲಾಗುತ್ತದೆ ಎಂದರು.ಕಾಲ್ಗರೆ ಲಸಿಕಾ ಅಧಿವೇಶನದಲ್ಲಿ ಈ ದಿನ 130 ಜನರಿಗೆ ಕೋವ್ಯಾಕ್ಸಿನ್ ಲಸಿಕೆಯ ಮುಂಜಾಗ್ರತಾ ವರಸೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ಆಂಜನೇಯ, ಕಿರಿಯ ಆರೋಗ್ಯಾ ಸುರಕ್ಷತಾಧಿಕಾರಿ ರಜೀಯ ಬೇಗಂ, ಫಾರ್ಮಸಿ ಅಧಿಕಾರಿ ಲೋಕೇಶ್ ಇತರರು ಭಾಗವಹಿಸಿದ್ದರು.