ಕೋವಿಡ್ 4ನೇ ಅಲೆ ಬಗ್ಗೆ ಜಾಗೃತೆ ವಹಿಸಿ

ಕಲಬುರಗಿ,ಜು.25:ಕೌಶಲ್ಯ ಅಭಿವೃಧ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಾಯೋಜಿತ ಸಂಸ್ಥೆಯಾದ ಜನ ಶಿಕ್ಷಣ ಸಂಸ್ಥಾನ ಗುಲಬರ್ಗಾ ಜಿಲ್ಲೆಯಾದ್ಯಂತ ಸಚಿವಾಲಯದ ಆದೇಶದಂತೆ ಜನ ಶಿಕ್ಷಣ ಸಂಸ್ಥಾನವು ಸತತವಾಗಿ 16/07/2022 ರಿಂದ 31/07/2022 ರವರೆಗೆ ನಡೆಯುವ ಸ್ವಚ್ಛತಾ ಪಕವಾಡ ಕಾರ್ಯಕ್ರಮದ ಅಡಿಯಲ್ಲಿ ಕೋವಿಡ್ – 19 ಜಾಗೃತೆ ಬಗ್ಗೆ ಅರಿವು ಕಾರ್ಯಕ್ರಮವನ್ನು ದಿನಾಂಕ 25-07-2022 ರಂದು ಚಿತ್ತಾಪುರ ತಾಲ್ಲೂಕಿನ ಕೋರವಾರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕೋರವಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮಾರುತಿ ರವರು ಕೋವಿಡ್ 4ನೇ ಅಲೆ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಇದು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಈ ಸೋಂಕಿನಿಂದ ನಮ್ಮನ್ನು ಮತ್ತು ನಮ್ಮವರನ್ನು ಸುರಕ್ಷಿತಗೊಳಿಸಬೇಕಾದರೆ ನಾವೆಲ್ಲರೂ ಮನೆಯಿಂದ ಹೊರಗೆ ಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರದಿಂದಿರಬೇಕು ಮತ್ತು ಆಗಾಗ ಸ್ಯಾನಿಟೈಜರ್ ಹಾಕಿ ಕೈ ತೊಳೆಯಬೇಕು. ಅಂದಾಗ ಮಾತ್ರ ನಾವು ಕೋವಿಡ್ ಅನ್ನು ತಡೆಗಟ್ಟಬಹುದು ಎಂದು ಕಲಿಕಾರ್ಥಿಗಳಿಗೆ ತಿಳಿ ಹೇಳಿದರು.
ಆನ ಶಿಕ್ಷಣ ಸಂಸ್ಥಾನ ಗುಲಬರ್ಗಾ ನಿರ್ದೇಶಕರಾದ ಶ್ರೀ ಸುರೇಂದ್ರ ಪೋಲಿಸ್‍ಪಾಟೀಲ ರವರು ಮಾತನಾಡುತ್ತಾ ಕೋವಿಡ್ ರಿಂದ ನಮ್ಮನ್ನು ಕಾಪಾಡುವುದರಲ್ಲಿ ಲಸಿಕೆ ಮಹತ್ವವಾದ ಕಾರ್ಯವನ್ನು ನಿರ್ವಹಿಸುತ್ತದೆ. ಅದಕ್ಕೆ 18 ವರ್ಷ ವಯಸ್ಸಿನ ಮೆಲ್ಪಟ್ಟವರು ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಲಸಿಕೆ ಪಡೆದವರಿಗೂ ಕೂಡ ಕೊರೋನಾ ಬರಬಹುದು ಆದರೆ ಅದು ಅಷ್ಟೋಂದು ದೇಹಕ್ಕೆ ಹಾನಿ ಮಾಡುವುದಿಲ್ಲ ಎಂದು ಹೇಳಿದರು.
ಶಾಲೆಯ ಮುಖ್ಯಗುರುಗಳಾದ ಶ್ರೀ ಅಶೋಕ ಮಸ್ಕಿನ್ ರವರು ಮಾತನಾಡುತ್ತಾ ನಾವು ಜಾಗೃತೆ ವಹಿಸಿ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅದರೊಟ್ಟಿಗೆ ಕೋವಿಡ್ ಜೊತೆ ಜೊತೆಗೆ ವಿವಿಧ ತರಹದ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲ್ಲರೂ ಮುಂಜಾಗೃತಾ ಕ್ರಮವಾಗಿ ಲಸಿಕೆ ತೆಗೆದುಕೊಳ್ಳಿ ಲಸಿಕೆ ತೆಗೆದುಕೊಳ್ಳುವುದರಿಂದ ನಮ್ಮ ದೇಹಕ್ಕೆ ರೋಗಾಣುವಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಧಾಬಾ, ಪಾರ್ವತಿ ಹಿರೇಮಠ, ನಾಗಪ್ಪ, ಲೀಲಾವತಿ ಬಿ ಕುಲಕರ್ಣಿ, ಆರುಂಧತಿ, ಗುರುನಾಥ ಜಾಧವ, ಆಸ್ರಾಫರಹೀನ, ಹಣಮಂತರಾವ ಹಾಗೂ ಇತರರು ಬಾಗವಹಿಸಿದರು.