ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸಂಸದರಿಂದ ಸಭೆ:ಜನರಲ್ಲಿ ಭಯ ಹೋಗಲಾಡಿಸುವ ಜವಾಬ್ದಾರಿ ವೈದ್ಯರದ್ದು:ಸಂಸದ ಡಾ. ಉಮೇಶ ಜಾಧವ

ಕಲಬುರಗಿ.ಏ16: ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್-19 ಎರಡನೇ ಅಲೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ ಭಯಭೀತರಾಗಿದ್ದು, ಇವರಲ್ಲಿ ಭಯ ಹೋಗಲಾಡಿಸಿ ಸೂಕ್ತ ಮಾರ್ಗದರ್ಶನದ ಮೂಲಕ ಚಿಕಿತ್ಸೆ ನೀಡುವ ಜವಾಬ್ದಾರಿ ವೈದ್ಯರದ್ದಾಗಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ ಜಾಧವ ಅವರು ಹೇಳಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಕರೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಸ್ಪತ್ರೆಗೆ ದಾಖಲಾದರೆ ಹಾಗೂ ರೆಮಿಡಿಸ್ವಿರ್ ಇಂಜೆಕ್ಷನ್ ತೆಗೆದುಕೊಂಡರμÉ್ಟೀ ಕೋವಿಡ್ ಸೋಂಕಿನಿಂದ ವಾಸಿಯಾಗಬಹುದು ಎಂದು ಜನರು ಭಾವಿಸಿದ್ದು, ಇದು ಸಾರ್ವಜನಿಕರ ಮನಸ್ಸಿನಲ್ಲಿ ಬೇರೂರಿದೆ. ಸಾರ್ವಜನಿಕರ ಮನಸ್ಸಿನಿಂದ ಇದನ್ನು ನಾವು ಹೋಗಲಾಡಿಸಬೇಕಾಗಿದ್ದು, ಇದಕ್ಕಾಗಿ ತಜ್ಞ ವೈದ್ಯರ ಸಮಿತಿ ರಚಿಸಿಸಬೇಕು. ಸಮಿತಿಯ ಶಿಫಾರಸ್ಸಿನನ್ವಯ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಸೌಮ್ಯ ಸ್ವಭಾವದ ಸೋಂಕಿತರಿಗೆ ಆಸ್ಪತ್ರೆಯ ಚಿಕಿತ್ಸೆ ಅವಶ್ಯಕತೆವಿಲ್ಲ ಎಂಬುದನ್ನು ಸಹ ಜನರಿಗೆ ಮನವರಿಕೆ ಮಾಡಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆ ಚಿಕಿತ್ಸೆ ಅವಶ್ಯವಿರುವ ರೋಗಿಗಳನ್ನು ಮಾತ್ರ ಜಿಮ್ಸ್ ಹಾಗೂ ಇ.ಎಸ್.ಐ.ಸಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳಿಗೆ ಬೇಕಾದ ಔಷಧಿ, ಆಕ್ಸಿಜನ್ ಸಿಲೆಂಡರ್, ಹಾಸಿಗೆ ಪೂರೈಕೆಗೆ ಯಾವುದೇ ಕೊರತೆ ಇಲ್ಲ, ಹೆಚ್ಚುವರಿ ಕೇಳಿದಲ್ಲಿ ಸರ್ಕಾರದಿಂದ ಪೂರೈಸಲಾಗುವುದು. ಎಲ್ಲಾ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಲ್ಪ್ ಡೆಸ್ಕ್ ರಚಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಜಿಮ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿಗಳ ಕೊರತೆಯಿದೆ ಎಂದು ಜಿಮ್ಸ್ ಸಂಸ್ಥೆಯ ನಿರ್ದೇಶಕಿ ಡಾ. ಕವಿತಾ ಪಾಟೀಲ ಅವರು ಸಂಸದರಿಗೆ ತಿಳಿಸಿದರು. ತಕ್ಷಣವೇ ಇದಕ್ಕೆ ಸ್ಪಂದಿಸಿದ ಸಂಸದರು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅನಿಲಕುಮಾರ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಜಿಮ್ಸ್ ಅಗತ್ಯವಿರುವ 10 ಲ್ಯಾಬ್ ಟೆಕ್ನಿಷಿಯನ್, 20 ಡಾಟಾ ಎಂಟ್ರಿ ಅಪರೇಟರ್, 10 ಜನ ವೈದ್ಯರು, 40 ಜನ ಗ್ರೂಪ್ ‘ಡಿ’ ಸಿಬ್ಬಂದಿಗಳು ಹಾಗೂ 100 ಜನ ನರ್ಸ್ ಸಿಬ್ಬಂದಿಗಳನ್ನು ತುರ್ತಾಗಿ ಪೂರೈಸುವಂತೆ ಕೋರಿಕೊಂಡರು.
ಕೋವಿಡ್ ವ್ಯಾಕ್ಸಿನ್ ಬಗ್ಗೆ ಅರಿವು ಮೂಡಿಸಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಪ್ರತಿನಿಧಿಗಳ ಸಹಕಾರ ಪಡೆದು ಆಶಾ ಕಾರ್ಯಕರ್ತೆಯರ ಸಹಕಾರ ಪಡೆದು ಗ್ರಾಮ ಪಂಚಾಯತಿ ಮತ್ತು ಆರೋಗ್ಯ ಇಲಾಖೆಯಿಂದ ಜನರಲ್ಲಿ ವ್ಯಾಕ್ಸಿನ್ ಪಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ದಿಲೀμï ಶಶಿ ಅವರಿಗೆ ನಿರ್ದೇಶನ ನೀಡಿದ ಸಂಸದ ಡಾ. ಉಮೇಶ ಜಾಧವ ಅವರು ಮಾಸ್ಕ್ ಬಳಸದೆ ಓಡಾಡುವರ ಹಾಗೂ ರಾತ್ರಿ ಕಫ್ರ್ಯೂನಲ್ಲಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಗರ ಪೆÇಲೀಸ್ ಆಯುಕ್ತ ಎನ್. ಸತೀಶಕುಮಾರ ಅವರಿಗೆ ಸಂಸದರು ತಿಳಿಸಿದರು.
ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನ ಅವರು ಮಾತನಾಡಿ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಕಲಬುರಗಿ ನಗರದಲ್ಲಿಯೆ ಹೆಚ್ಚಾಗಿದೆ. ಈ ಮೊದಲು ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೇವಲ ಶೇ.20 ರಷ್ಟು ಬೆಡ್‍ಗಳನ್ನು ಸರ್ಕಾರಿ ಆಸ್ಪತ್ರೆಯ ಶಿಫಾರಸ್ಸಿನ ರೋಗಿಗಳಿಗೆ ಮೀಸಲಿರಿಸಲಾಗುತ್ತಿತ್ತು. ಇದೀಗ ಪ್ರಕರಣಗಳು ಹೆಚ್ಚಾದಂತೆ ಇದರ ಪ್ರಮಾಣ ಶೇ.50ಕ್ಕೆ ಹೆಚ್ಚಿಸಿದೆ. ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಸರ್ಜರಿಗಳನ್ನು ಮಾತ್ರ ಪರಿಗಣಿಸಿ ಎಂದು ವೈದ್ಯರಿಗೆ ಸಲಹೆ ನೀಡಿದರು.
ಶುಕ್ರವಾರ ಜಿಲ್ಲೆಗೆ 17 ಸಾವಿರ ಕೋವಿಶಿಲ್ಡ್ ಹಾಗೂ 3 ಸಾವಿರ ಕೋವ್ಯಾಕ್ಸಿನ್ ಲಸಿಕೆಗಳು ಆಗಮಿಸಿದ್ದು, ಜಿಲ್ಲೆಯಲ್ಲಿ ಲಸಿಕೆಯ ಕೊರತೆಯಿಲ್ಲ. ಐ.ಸಿ.ಯೂ.ಗಳಲ್ಲ ಪದೆ-ಪದೇ ಆಕ್ಸಿಜನ್ ಸಿಲೆಂಡರ್ ಬದಲಾವಣೆ ಮಾಡುವುದನ್ನು ತಪ್ಪಿಸಲು ಗ್ಯಾಸ್ ಸಿಲಿಂಡರ್ ಮತ್ತು ಜಂಬೊ ಸಿಲಿಂಡರ್‍ಗಳನ್ನು ಕೊಯಂಬತ್ತೂರು ಹಾಗೂ ಹೈದ್ರಾಬಾದಿನಿಂದ ಹಾಗೂ ಲಿಕ್ವಿಡ್ ಸಿಲಿಂಡರ್‍ಗಳನ್ನು ಬಳ್ಳಾರಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ತಿನ ಶಾಸಕ ಬಿ.ಜಿ ಪಾಟೀಲ್, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಆರೋಗ್ಯ ಇಲಾಖೆಯ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಕೆ.ಎಸ್.ರಾಜೇಶ, ಜಿಲ್ಲಾ ಅರೋಗ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್, ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಫಿವುದ್ದಿನ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಇ.ಎಸ್.ಐ.ಸಿ ಆಸ್ಪತ್ರೆಯ ಡೀನ್ ಡಾ. ಲೋಬೊ, ಡಿ.ಎಸ್.ಓ ಡಾ. ಶಿವಕುಮಾರ್ ದೇಶಮುಖ, ಡಿ.ಎಲ್.ಓ ಡಾ. ರಾಜಕುಮಾರ ಕುಲಕರ್ಣಿ ಸೇರಿದಂತೆ ಆರೋಗ್ಯ ಇಲಾಖೆಯ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.