ಕೋವಿಡ್ 2ನೇ ಅಲೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ಸಿಂದಗಿ, ಏ.17-ಕೋವಿಡ್ ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕ ಎಂದು ಜಿಲ್ಲಾಧಿಕಾರಿ ಸುನೀಲಕುಮಾರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶುಕ್ರವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಾ ಅಧಿಕಾರಿಗಳೊಂದಿಗೆ ಮಾತನಾಡಿದರು.
ತÀಮ್ಮ ಆರ್ಥಿಕ ಚಟುವಟಿಕೆ ದಿನನಿತ್ಯದ ಜೀವನೋಪಾಯ, ಉದ್ಯೋಗ ಜತೆಗೆ ಸರ್ಕಾರ ನೀಡಿದ ಕೋವಿಡ್ ನಿಯಂತ್ರಣ ನಿಯಮಗಳು ನಿಯಮಗಳನ್ನು ಕಟ್ಟು ನಿಟ್ಟಾಗ ಪಾಲಿಸಬೇಕು. ನಿಯಮಗಳನ್ನು ಪಾಲಿಸದೇ ನಿರ್ಲಕ್ಷ್ಯ ಮಾಡಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವುದು ಅನಿವಾರ್ಯ ಎಂದು ವಿವರಿಸಿದರು.
ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕೆಲವು ಕೋವಿಡ್ ಕುರಿತು ನಿಯಮಗಳನ್ನು ನಿರ್ಣಯ ಕೈಕೊಳ್ಳಲಾಯಿತು.
ನಿರ್ಣಯಗಳು: ಗುರಿ ನಿಗದಿ ಮಾಡಿದಂತೆ ಗಂಟಲ ದ್ರವ ಸಂಗ್ರಹ ಮಾಡುವುದು, ಕೊರಂಟೆನ್ ವಾಚ್ ಆ್ಯಪ್ ನಲ್ಲಿ ಕೆಲಸ, ಕೊಂಟ್ಯಾಕ್ಟ ಟ್ರೇನಿಂಗ್ ಆ್ಯಪ್‍ನಲ್ಲಿ ಕೆಲಸ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದವರಿಗೆ ದಂಡವಿದಿಸುವುದು, ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಗುರುತಿಸುವುದು ಎಂದು ನಿರ್ಣಯ ತಗೆದುಕೊಳ್ಳಲಾಯಿತು.
ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜಕುಮಾರ ಯರಗಲ್, ಆರ್‍ಸಿಎಚ್‍ಓ ಡಾ.ಮಹೇಶ ನಾಗರಬೆಟ್ಟ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಬೀಳಗಿ, ಸ್ಟೇಟ್ ನೋಡಲ್ ಅಧಿಕಾರಿ ಡಾ.ಶಖೀಲಾ, ಇಂಡಿ ವಿಭಾಗಾಧಿಕಾರಿ ರಾಹುಲ ಸಿಂಧೆ, ಸಿಂದಗಿ ತಹಶೀಲ್ದಾರ ಸಂಜೀವಕುಮಾರ ದಾಸರ, ದೇವರ ಹಿಪ್ಪರಗಿ ತಹಶೀಲ್ದಾರ ಡಿ.ಎಸ್. ಕಡಕಬಾವಿ, ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ, ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ್, ಆಲಮೇಲ ಪ.ಪಂ ಮುಖ್ಯಾಧಿಕಾರಿ ಅಭಿಷೇಕ ಪಾಂಡ್ರೆ, ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ, ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ರ ಕೇಂದ್ರ ವೈಧ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ಭಾಗವಹಿಸಿದರು.