ಕೋವಿಡ್ 2ನೇ ಅಲೆ ಕೋವಿಡ್ ನಿಯಮಗಳನ್ನು ಪಾಲಿಸಿ: ಬಸನಗೌಡ ಪಾಟೀಲ್ ಯತ್ನಾಳ

ವಿಜಯಪುರ, ಏ.28-ನಗರ ಶಾಸಕರಾದ ಬಸನಗೌಡ ರಾ. ಪಾಟೀಲ ಯತ್ನಾಳ ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಂಡಿದ್ದು ಅದರಂತೆ ಇಂದು ವಾರ್ಡ ನಂ-04, ಸೋಲಾಪುರ ರಸ್ತೆಯ ಕೆ.ಎಚ್.ಬಿ. ಕಾಲೊನಿ ಶ್ರೀ ಹನುಮಾನಗುಡಿ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಎರಡನೇ ಅಲೆ ಈ ರೋಗ ಬೆಳೆಯುವಂತಹ ಕಾಲದಲ್ಲಿ ಸರ್ಕಾರವಿರಬಹುದು, ಅಧಿಕಾರಿಗಳಿರಬಹುದು, ಸಾರ್ವಜನಿಕರಿರಬಹುದು ಜವಾಬ್ದಾರಿಗಳನ್ನ ನಿಭಾಯಿಸವದು ನಮ್ಮೆಲ್ಲರ ಕರ್ತವ್ಯ ಇದೆ. ಸಾರ್ವಜನಿಕರು ಮುಂಜಾಗ್ರತೆಯಿಂದ ಇರಬೇಕಾಗುತ್ತದೆ. ಒಳ್ಳೆ ಕೆಲಸ ಮಾಡುವಾಗ ಸಾಕಷ್ಟು ಅಪ ಪ್ರಚಾರಗಳಾಗುತ್ತವೆ, ಲಸಿಕೆ ಬಗ್ಗೆ ಏನೆನೋ ಅಪಪ್ರಚಾರ ಮಾಡುವ ಹುನ್ನಾರ ನಡೆದಿದ್ದು, ನಿನ್ನೆ ಆಕ್ಷಿಜನ್ ತರುವಂತಹ ರೈಲ್ವೆ ಮಾರ್ಗದಲ್ಲಿ ಸ್ಪೋಟ ಮಾಡುವಂತಹ ವ್ಯವಸ್ಥಿತ ಸಂಚು ನಡೆದಿದೆ, ದಿಲ್ಲಿಯಲ್ಲಿ ರೈತರ ಹೋರಾಟದ ಹೆಸರು ಹೇಳಿಕೊಂಡು, ಆಕ್ಷಿಜನ್ ತಲುಪದೆ ಇರುವ ರೀತಿಯಲ್ಲಿ ವ್ಯವಸ್ಥಿತ ಸಂಚು ನಡೆದಿದೆ. ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ನಂತಹ ಪರಿಸ್ಥಿತಿಯಲ್ಲಿ ನಿರಂತರ ಹೋರಾಟದ ಮೂಲಕ ಜನರ ನೆರವಿಗೆ ನಿಂತಿದು,್ದ ಅವರಿಗೆ ರಾಜ್ಯ ಸರ್ಕಾರ, ಸಾರ್ವಜನಿಕರು, ನಾವೆಲ್ಲರೂ ಕೈಜೋಡಿಸಿ ಸಹಕರಿಸಬೇಕು ಎಂದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ನಗರದ ಮನಗೂಳಿ ರಸ್ತೆಯಲ್ಲಿ ಬರುವ ಬಸವ ಭವನ ಮಂಗಲ ಕಾರ್ಯಾಲವನ್ನು ಕೋವಿಡ್ ಕೇರ್ ಸೆಂಟರ್‍ಗಾಗಿ ನೀಡಿದ್ದು, ಇಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಬಿಸಲಾಗಿದ್ದು, ಇಲ್ಲಿ ಆರೋಗ್ಯ ಸಿಬ್ಬಂದಿಗಳು ಇರುತ್ತಾರೆ, ಅಲ್ಲದೆ ನಮ್ಮ ಸಿದ್ದೇಶ್ವರ ಸಂಸ್ಥೆ ಹಾಗು ಸಿದ್ದಸಿರಿ ಸೌಹಾರ್ಧದಿಂದ ರೋಗಿಗಳಿಗಾಗಿ ಉಚಿತವಾಗಿ ಬೆಳಿಗ್ಗೆ ಉಪಹಾರ ಹಾಗು ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಬೆಡ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ನಗರದಲ್ಲಿ ಕೋವಿಡ್ ಲಸಿಕಾ ಅಭಿಯಾನವನ್ನು ಪ್ರಾರಂಭ ಮಾಡಿದಾಗಿನಿಂದ ನಗರವು ಈಗಾಗಲೇ ಶೇ 42% ರಷ್ಟು ಗುರಿಯನ್ನು ಸಾಧಿಸಿದ್ದು, ಜಿಲ್ಲೆಯ ಒಟ್ಟಾರೆ ಪ್ರತಿಶತ ಶೇಕಡಾದಲ್ಲಿ ನಗರವು ಮುಂದಿದೆ. ನಗರದಾದ್ಯಂತ ವ್ಯಾಕ್ಷಿನೇಶನ್ ನಡೆಯುತ್ತಿದ್ದು ಈಗಾಗಲೇ ನಮ್ಮ ಸಿದ್ಧೇಶ್ವರ ಸಂಸ್ಥೆಯ ಹಾಗು ಸಿದ್ದಸಿರಿ ಸೌಹಾರ್ಧ ಸಹಕಾರಿ ನಿ. ಸಹಭಾಗಿತ್ವದಡಿಯಲ್ಲಿ ಸಿದ್ಧೇಶ್ವರ ಸಂಸ್ಥೆಯ ವತಿಯಿಂದ ಶಾಲಾ ಬಸ್ಸಗಳನ್ನು ನಗರ ನಾಗರಿಕರಿಗಾಗಿ ಲಸಿಕಾ ಕೇಂದ್ರಗಳಿಗಾಗಿ ಕರೆತರಲು ನೀಡಲಾಗಿದೆ, ಅದಲ್ಲದೆ ಉಚಿತ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿ ನೀಡಲು ಅಟೋ ಪ್ರಚಾರದ ವ್ಯವಸ್ಥೆ ಸಹ ಮಾಡಿದ್ದು ನಮ್ಮ ಸಂಸ್ಥೆಯ ಹಾಗು ಸೌಹಾರ್ದದ ಸಿಬ್ಬಂದಿಗಳು ಮನೆ-ಮನೆಗೆ ಹೋಗಿ ಲಸಿಕಾ ಕೇಂದ್ರದಲ್ಲಿ ನಾಗರಿಕರು ಬಂದು ಲಸಿಕೆ ಪಡೆಯಲು ಮಾಹಿತಿ ನೀಡುತ್ತಿದ್ದಾರೆ.
ವಿಜಯಪುರ ನಗರ ಮತಕ್ಷೇತ್ರವು ನೂರಕ್ಕೆ ನೂರರಷ್ಟು (100%) ಲಸಿಕಾ ಗುರಿ ಸಾಧಿಸುವನಿಟ್ಟಿನಲ್ಲಿ ಪರಿಕಲ್ಪನೆಯೊಂದಿಗೆ, ಸತತವಾಗಿ ಉಚಿತ ಲಸಿಕಾ ಅಭಿಯಾನವನ್ನು ದಿ.28 ರಂದು ಬೆಳಿಗ್ಗೆ 10:30 ಕ್ಕೆ ವಾರ್ಡನಂ-01 ರ ಸಂಗಮೇಶ್ವರ ಕಾಲೊನಿಯ ಶ್ರೀ ಸಂಗಮೇಶ್ವರ ಗುಡಿ ಆವರಣ, ದಿ.29 ರಂದು ಬೆಳಿಗ್ಗೆ 10:30 ಕ್ಕೆ ವಾರ್ಡ ನಂ-22 ರಜಲನಗರದ ಶ್ರೀ ಶಿವಶರಣೆ ನಿಂಬೆಕ್ಕ ಸಭಾಭವನ (ಶ್ರೀ ಸಿದ್ದೇಶ್ವರ ಬ್ಯಾಂಕ್ ಹತ್ತಿರ) ದಿ.30 ರಂದು ಬೆಳಿಗ್ಗೆ 10:30 ಕ್ಕೆ ವಾರ್ಡನಂ-03 ರ ಗ್ಯಾಂಗಬಾವಡಿಯ ಕುಂಬಾರಗಲ್ಲಿಯ ಸರಕಾರಿ ಶಾಲೆ ನಂ-10 ರಲ್ಲಿ ಏರ್ಪಡಿಸಲಾಗಿದ್ದು ಸುತ್ತಮುತ್ತಲಿನ ನಾಗರಿಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಶ್ರೀ ಸಿದ್ದೇಶ್ವರ ಸಂಸ್ಥೆಯಿಂದ ಕೋವಿಡ್ ಕೇರ್ ಸೆಂಟರ್ ಮಾಡಲು ಸೋಲಾಪೂರ ರಸ್ತೆಯ ಜೈನ ಕಾಲೇಜ್‍ಗೆ ಬೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿಗಳಾದ ಡಾ.ಕವಿತಾ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಪಾಲಿಕೆ ಮಾಜಿ ಸದಸ್ಯರಾದ ಎಂ.ಎಸ್.ಕರಡಿ, ಮುಖಂಡರಾದ ಚಂದ್ರು ಚೌಧರಿ, ಶ್ರೀನಿವಾಸ ಬೆಟಗೇರಿ, ಸಿದ್ರಾಮ ಹೂಗಾರ, ರವಿ ಪಂಡಿತ್, ಗೋಪಾಲ ಕಂದಬಾಳ, ರಂಗಪ್ಪ ಬಾಗಲಕೋಟ, ಶ್ರೀ ರಮೇಶ ನಾಗಾವಿ, ಅನೀಲ ಜಾಧವ್, ಶ್ರೀಶೈಲ ಬಿರಾದಾರ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.