ಕೋವಿಡ್ 2ನೇ ಅಲೆಯಲ್ಲಿ ಸಾವು ನೋವಿನಿಂದ ಹಲವು ಕುಟುಂಬಗಳು ನಿರಾಶ್ರಿತ: ಶಾಸಕ ಯಶವಂತರಾಯಗೌಡ ಪಾಟೀಲ್

ಇಂಡಿ, ಜೂ.1-ಇಡೀ ಪ್ರಪಂಚದಲ್ಲಿ ಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ರೋಗದ ಬಾಧೆ ದೇಶಕ್ಕೆ ಶಾಪವಾಗಿ ಪರಿಣಮಿಸಿದೆ, ಚೈನಾದಿಂದ ಪ್ರಾರಂಭಗೊಂಡು ಅನೇಕ ರಾಷ್ಟ್ರಗಳಲ್ಲಿ ಅನೇಕ ಜೀವಗಳು ಕಳೆದುಕೊಂಡಿದ್ದೆವೆ. ಪ್ರಥಮ ಹಂತದಲ್ಲಿ ಇಷ್ಟೊಂದು ಸಾವುಗಳು ಸಂಭವಿಸಿರಲ್ಲಿಲ್ಲಾ. 2ನೇ ಅಲೆಯಲ್ಲಿ ಎಪ್ರೀಲ್ .ಮೇ ಇಡೀ ದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾವು ನೋವುಗಳನ್ನು ಸಂಭವಿಸಿ ಅನೇಕ ಕುಟುಂಬಗಳು ನಿರಾಶ್ರೀತವಾಗಿವೆ ಸರಕಾರ ಆಸರೆ ನೀಡಲು ತುರ್ತು ಕ್ರಮಕೈಗೋಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ್ ಹೇಳಿದರು.
ತಾಲೂಕಿನ ತಡವಲಗಾ ಗ್ರಾಮದಲ್ಲಿ ಹಮ್ಮಿಕೊಂಡ ವೈದ್ಯರ ನಡೆಗೆ ಹಳ್ಳಿ ಕಡೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಾ. ಕಾಪ್ಸೆಯವರ ಅಭಿಪ್ರಾಯದಂತೆ ಪ್ರಥಮ ಹಂತದಲ್ಲಿ ಹಿರಿಯರಿಗೆ ತೊಂದರೆಯಾಗಿತ್ತು. 3ನೆ ಅಲೆ ಬರುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಮಕ್ಕಳನ್ನು ಪ್ರೀತಿಸುವ ದೇಶ ಭಾರತ ಇಂತಹ ಮುಗ್ದ ಮಕ್ಕಳ ಮೇಲೆ ಬರುತ್ತದೆ ಎಂದು ಸರಕಾರ ಮಂಜಾಗೃತಾ ಕ್ರಮಕೈಗೊಳ್ಳುತ್ತಿದೆ ಎಂದರು.
2ನೇ ಅಲೆ ಮಹಾರಾಷ್ಟ್ರದಲ್ಲಿ, ಕೇರಳದಲ್ಲಿ ಸಾವಿನ ಪ್ರಮಾಣಗಳು ಆಗಿವೆ. ಮೇ 10-11-12ನೇ ತಾರೀಖಿನ ದಿನಗಳನ್ನು ನೆನಪಿಸಿಕೊಂಡರೆ ವೆಂಟಿಲೀಟರ್, ಆಕ್ಸೀಜನ್, ರೇಮಿಡಿಸಿವಿಯರ್ ಇಂಜೇಕ್ಸನ್ ಇಲ್ಲದೆ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ವೈದ್ಯಕೀಯ, ಶಿಕ್ಷಣಕ್ಷೇತ್ರಕ್ಕೆ ಎನು ಮಾಡಬೇಕಾಗಿತ್ತು ಅದು ಮಾಡಲ್ಲಿಲ್ಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮಾಡಿರುವುದು ನೋವು ನನಗಿದೆ. ನಾವು ಎನು ಕಳೆದುಕೊಂಡಿದ್ದೆವೆ ಜೀವಗಳು ತರಲ ಸಾಧ್ಯ ಆದರೆ ಮಂದಿನ ದಿನಗಳಲ್ಲಿ ಸರಕಾರ ಇಂತಹ ಅಚಾರ್ತು ನಡೆಯಬಾರದು ಎಂದರು.
ಪ್ರಥಮ ಕರೋನಾ ಬಾಧೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೋವಿಡ್ ಕೇರ್‍ಸೆಂಟರ್‍ಲ್ಲಿ ಒತ್ತಾಯ ಮಾಡಲಾಗುತ್ತಿತ್ತು ಆದರೆ 2ನೇ ಅಲೆಯಲ್ಲಿ ಅಷ್ಟೊಂದು ಬೀಗುವಿನ ವಾತಾವರಣ ಮಾಡಲ್ಲಿಲ್ಲ. ಹೊಂ ಆಯಸುಲೇಶನ್ ಮಾಡಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ವ್ಯಾಪಿಸಿದೆ ಎಂದು ಹೇಳಿದರು.
ಇಂದು ಸಾರ್ವಜನಿಕರು ಸ್ವಯಂ ದಿಗ್ಭಂಧನ ಹೇರಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಶೆ. 75 ಪ್ರತಿಶತ ಜನರು ಮಾಸ್ಕ ಹಾಕಿಕೊಳ್ಳುವದಿಲ್ಲ ಇದು ಅತ್ಯಂತ ತಪ್ಪು ನಿರ್ಣಯ ನಿಮಗೆ ಕೈಮುಗಿದು ಮನವಿ ಮಾಡುತ್ತೇನೆಮಾಸ್ಕ, ಸ್ಯಾನಿಟೈಜರ್ ಬಳಕೆ ಮಾಡಿ ಗ್ರಾಮೀಣ ಭಾಗ ಸ್ವಚ್ಛತೆಗೆ ಆದ್ಯತೆ ನೀಡಿ. ಸರಕಾರಗಳ ನಿಯಮಗಳನ್ನು ಪ್ರತಿಯೋಬ್ಬರು ಪಾಲನೆ ಮಾಡಿ ಪೊಲೀಸ್ ಇಲಾಖೆ ನಿಮ್ಮ ರಕ್ಷಣೆಗೆ ಇದೆ ಲಾಕ್ ಡೌನ್ ಗಾಳಿಗೆ ತೂರಿ ಸುಖಾ ಸುಮ್ಮನ್ನೆ ಅಲೆದಾಡಬೇಡಿ ಸದ್ಯ ಬ್ಲಾಕ್ ಫಂಗಸ್ ರೋಗ ಬಂದಿದೆ ಇದರ ಬಗ್ಗೆ ಜಾಗೃತಿ ಇರಲಿ ಎಂದರು.
ಜಿಲ್ಲೆಯ ಜನಪ್ರತಿನಿಧಿಗಳು ಬ್ಲಾಕ್ ಫಂಗಸ್‍ವ್ಯಾಕ್ಸೀನ್ ಒದಗಿಸುವಂತೆ ಮುಖ್ಯ ಮಂತ್ರಿಗಳ ಗಮನ ಸೆಳೆಯಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಸಾಕಷ್ಟು ಸಾವುಗಳು ಸಂಭವಿಸಿವೆ. ಇದನ್ನು ಒದಗಿಸಬೇಕಾಗಿರುವುದು ಸರಕಾರದ ಕರ್ತವ್ಯ, ಸುದೈವಕ್ಕೆ ನಮ್ಮ ರಾಜ್ಯದಲ್ಲಿ ಪ್ಲ್ಯಾಂಟಗಳು ಸ್ಥಾಪಿಸಲಾಗುತ್ತಿದೆ. ವಿಜಯಪೂರ ಜಿಲ್ಲೆಯ ಮುದ್ದೆಬಿಹಾಳ, ಬಾಗೇವಾಡಿ ಪ್ಲ್ಯಾಂಟ ಮಾಡಲಾಗುತ್ತಿದೆ. ನಮ್ಮ ಇಂಡಿಯಲ್ಲಿಯ ಕೂಡಾ ಅಜೀಂ ಪ್ರೇಮಜಿ ಆಕ್ಸೀಜನ್ ಪ್ಲ್ಯಾಂಟ ಮಾಡಲು ಸಹಾಯ ಮಾಡುತ್ತಿದ್ದಾರೆ. ಇಂತಹ ಹೃದಯವಂತರು ನಮ್ಮ ದೇಶದಲ್ಲಿ ಇದ್ದಾರೆ. ಕಷ್ಟದ ಸಂದರ್ಭದಲ್ಲಿ ಅಜೀಂ ಪ್ರೇಮಜಿ, ಇನ್ಪೋಸಿಸ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ಅನೇಕ ಮಠ ಮಾನ್ಯಗಳು, ಉದ್ದಿಮೆದಾರರು, ಸಹಾಯ ಸಹಕಾರ ಮಾಡುತ್ತಿದ್ದಾರೆ, ನಿಜವಾದ ದೇವರನ್ನು ಇವರ ಸ್ವರೂಪದಲ್ಲಿ ಕಾಣುತ್ತಿದ್ದೆವೆ. ಯಾರು ಸಹಾಯ ಸಹಕಾರ ಮಾಡಿದ್ದಾರೆ ಅವರನ್ನು ಸ್ಮರಿಸುವುದು ಮಾನವೀಯ ಮೌಲ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.
ಗ್ರಾಮ ಪಂಚಾಯತ ಅಧ್ಯಕ್ಷ, ಜಿಲ್ಲಾ ಆರೋಗ್ಯಾಧಿಕಾರಿ ಡಾ, ಮಹೇಂದ್ರ ಕಾಪ್ಸೆ, ತಾಲೂಕಾ ವೈಧ್ಯಾಧಿಕಾರಿ ಡಾ. ಅರ್ಚನಾ ಕುಲಕರ್ಣಿ, ಡಾ. ಶ್ರೀಮತಿ ಆಕಾಶ, ತಮ್ಮಣ್ಣಾ ಪೂಜಾರಿ, ಅಶೋಕ ಮಿರ್ಜಿ, ಸೋಮಶೇಖರ ಬ್ಯಾಳಿ, ತಹಶೀಲ್ದಾರ ಚಿದಂಬರಂ ಕುಲಕರ್ಣಿ, ಗುತ್ತಿಗೆದಾರ ಚಂದ್ರಶೇಖರ ರೂಗಿ, ಬಸವರಾಜ ಇಂಡಿ, ಇಲಿಯಾಸ ಬೋರಾಮಣಿ, ಪ್ರಶಾತ ಕಾಳೆ, ಧರ್ಮರಾಜ ವಾಲೀಕಾರ, ಅವಿನಾಶ ಬಗಲಿ, ರಾಹುಲ್ ಮಸಳಿ, ರವಿ ಹೊಸಮನಿ, ರಾಜು ಕ್ಷತ್ರಿ, ಸಂತೋಷ ಪರಶೇನವರ್, ಜಾವೀದ ಮೋಮಿನ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಮಹೇಶ ನಾಯಕ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದ್ದಿ ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಇದ್ದರು