ಕೋವಿಡ್-19 ಸಿರೋ ಸರ್ವೆ ರಕ್ತ ಮಾದರಿ ಸಂಗ್ರಹ

ಶಹಾಬಾದ,ಡಿ.25- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾಂಸ್ಥಿಕ ನೈತಿಕ ಸಮಿತಿ , ಐ ಸಿ ಎಂ ‌ಆರ್ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯೋಲಾಜಿ ಚೆನ್ನೈ, ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ಬೆಂಗಳೂರು ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯ ಕೋವಿಡ್-19 ಹಿನ್ನೆಲೆಯಲ್ಲಿ ಸರ್ವೆ ಶಹಾಬಾದ ತಾಲ್ಲೂಕಿನ ಪೇಠಶೀರುರೂ ಪ್ರಾಥಮಿಕ ಆರೋಗ್ಯ ಕೇಂದ್ರ ಒಳಪಡುವ ಮಹಾನಗರ ಮುಗಳನಾಗವಿ ಗ್ರಾಮದಲ್ಲಿ ಱ್ಯಾಂಡಮ್ ಟೆಸ್ಟ್ ಮಾಡಲಾಯಿತು. 40 ಜನರ ಮನೆ ಮನೆ ಭೇಟಿ ಮಾಡಿ ರಕ್ತ ಮಾದರಿ ಸ್ಯಾಂಪಲ್ ಸಂಗ್ರಹ ತೆಗೆದುಕೊಳ್ಳಲಾಯಿತು.
ರಾಷ್ಟ್ರೀಯ ಜನಸಂಖ್ಯೆ ಆಧಾರಿತ ಎಸ್.ಎ.ಆರ್.ಎಸ್.ಸಿಓವಿ SARS COV -2 ಸೋಂಕಿನ ಸೀರೊ – ಸರ್ವೇಕ್ಷಣೆ ತೃತೀಯ ಸಮೀಕ್ಷೆ ಕೊರೋನ ವೈರಸ್‌ ಕಾಯಿಲೆಗೆ ಕಾರಣವಾಗುವ SARS COV -2 ವೈರಸ್‌ ಹಿಂದೆಂದೂ ವರದಿಯಾಗದ‌ ಒಂದು ಹೊಸ ಸೊಂಕು. ಈ ಸರ್ವೇಕ್ಷಣೆಯ ಉದ್ದೇಶವು ಕೋವಿಡ್-19 ಸಮುದಾಯದಲ್ಲಿ ಹರಡುವುದರ ಬಗ್ಗೆ ಮಾಹಿತಿ ಸಂಗ್ರಹ ಮಾಡುವುದು ಆಂಟಿಬಾಡಿ ಉಪಸ್ಥಿತಿ ಕೊರೋನ ಸೋಂಕಿಗೆ ಒಡ್ಡಿಕೊಳ್ಳುವ ಸಂಕೇತವಾಗಿದೆ. ಈ ಸರ್ವೇಕ್ಷಣೆ ವಿಭಿನ್ನ ವಯಸ್ಸಿನ ಗುಂಪುಗಳಲ್ಲಿ ಮತ್ತು ಲಿಂಗಗಳಲ್ಲಿ ಹರಡುವ ವ್ಯಾಪ್ತಿಯನ್ನು ಹಾಗೂ ಕಾಲಮಾನದಲ್ಲಿ ಹೊಸ ಪ್ರಕರಣಗಳು ಸಂಭವಿಸುವ ರೀತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಸಾಧ್ಯತೆ ಇದೆ .ಇದರಿಂದ ಪಡೆದ ಜ್ಞಾನವು ರೋಗವನ್ನು ತಡೆಗಟ್ಟಲು, ನಿಯಂತ್ರಿಸಲು ಹಾಗೂ ಕಾರ್ಯಕ್ರಮದ ಮಾರ್ಗಸೂಚಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ಬೆಂಗಳೂರು ಪಬ್ಲಿಕ್ ಹೆಲ್ತ್ ಸ್ಪೆಷಾಲಿಸ್ಟ್ ಗ್ರೇಡ್ ೨ , ನೋಡಲ್ ಆಧಿಕಾರಿ ಡಾ.ಚೇತನ ರಂಗರಾಜು ಹೇಳಿದರು.
ಕಲಬುರಗಿ ‌ತಾಲ್ಲುಕಿನಲ್ಲಿಂದು ವಿಶೇಷವಾಗಿ ಸೀರೊ ಸರ್ವೇಕ್ಷಣೆಯ ಮೇಲ್ವಿಚಾರಣೆ ಕಾರ್ಯಚರಣೆ ಅಳಂದನ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಳಾ (‌ಬಿ), ಜೇವರ್ಗಿಯ ಕೂಡಿ ಪ್ರಾ ಆ ಕೇಂದ್ರ . ಕಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಡೊಂಗಾರಗಾಂವ್, ಸೇಡಂನ ಯಡಗಾ ಪ್ರಾಥಮಿಕ ಆರೋಗ್ಯ ಕೇಂದ್ರ ತೊಟ್ಟನಳ್ಳಿ. ಅಫಜಲಪುರ, ಜೇವರ್ಗಿ ಕೂಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಬನಮಿ. ಕಾಳಗಿ ಟೆಂಗಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಳಗುಂಪಾ.ಕಲಬುರಗಿಯ ಮಕ್ತಂಪೂರ ಪ್ರಾಥಮಿಕ ಆರೋಗ್ಯ ಕೇಂದ್ರ ಮೋಮಿನಪೂರ. ಕಲಬುರಗಿಯ ತಾರಫೈಲ . ಅತಿ ಸೂಕ್ಷ್ಮ ಕ್ಷೇತ್ರದಲ್ಲಿ ತಂಡಗಳು ರಚನೆಯಂತೆ ಕ್ಷಯರೋಗ ನಿರ್ಮೂಲನ ಕೇಂದ್ರ ದ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅದರಂತೆ ಮನೆ ಮನೆ ಭೇಟಿ ನೀಡಿ ಕೋವಿಡ್ 19. ಕೆಲ ಲಕ್ಷಣಗಳ ಬಗ್ಗೆ ತಿಳಿಸಿ ಜಾಗೃತಿ ಮೂಡಿಸಲಾಯಿತು.
ಪೇಠ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ ಅರ್ಚನಾ ಕಮಲಪೂರಕರ್ ಅವರ ನೇತ್ರತ್ವದಲ್ಲಿ. ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸರ್ವೆ ಯಲ್ಲಿ NIRT , ICMR ಚೆನ್ನೈ ಟೀಮ್ ನ ಪ್ರಾಜೆಕ್ಟ್ ಟೆಕ್ನಿಕಲ್ ಆಫಿಸರ್ ನವರಾದ ಶ್ರೀಕಾಂತ. ಲ್ಯಾಬ್ ಟೈಕ್ನಿಷನ್ . ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಹಿರಿಯ ಆರೋಗ್ಯ ಮೇಲ್ವಿಚಾರಕ ಗುಂಡಪ್ಪ ದೊಡ್ಡಮನಿ . ಸಕ್ಷಮ್ TISS ಜಿಲ್ಲಾ ಸಮಾಲೋಚಕ ಮಂಜುನಾಥ ಕಂಬಳಿಮಠ, ರವರು ಮೇಲ್ವಿಚಾರಣೆ ಮಾಡಿದರು. ಸಮುದಾಯದ ಹೆಲ್ತ್ ಆಫೀಸರ್ ಶ್ರೀನಿವಾಸ, ಕಿರಿಯ ಆರೋಗ್ಯ ಸಹಾಯಕ ಸಂತೋಷ ‌ಜಾಧವ್, ಪೇಠಶಿರೂರನ ಲ್ಯಾಬ್ ಟೆಕ್ನಿಷನ್ ನಾಗಮಣಿ ಪಾಟೀಲ್, ಹಾಗೆ ಆಶಾ ಕಾರ್ಯಕರ್ತೆ ಮೀನಾಕ್ಷಿ ರಾಠೋಡ. ಹೆಲ್ಪ್ ರ್ ಶಿವು ರಾಠೋಡ. ಮುಗಳನಾಗವಿ ಮಹಾನಗರ ಗ್ರಾಮದ ಜನರು ಸಹಕಾರ ನೀಡಿದರು. ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಾತ್ ನೀಡಿದರು..