ಕೋವಿಡ್-19 ಲಸಿಕೆ ಪಡೆಯುವುದರಿಂದ ಅಡ್ಡಪರಿಣಾಮವಿಲ್ಲ: ಲಸಿಕಾ ಅಭಿಯಾನ ಯಶಸ್ವಿಗೆ ಯತ್ನಾಳ ಕರೆ

ವಿಜಯಪುರ, ಏ.6-ಕೋವಿಡ್-19 ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ ಕಾರಣ 45 ವರ್ಷ ಮೇಲ್ಪಟ್ಟವರು 60 ವರ್ಷ ಒಳಗಿನವರು ತಪ್ಪದೇ ಕೋವಿಡ್-19 ಲಸಿಕೆ ಪಡೆಯುವಂತೆ ನಗರ ಶಾಸಕ ಬಸನಗೌಡ ರಾ ಪಾಟೀಲಗ (ಯತ್ನಾಳ) ಅವರು ಕರೆ ನೀಡಿದರು.
ಇಂದು, ವಿಜಯಪುರ ನಗರದ ವಜ್ರಹನುಮಾನ ಗುಡಿ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಾದ ಮನೆ-ಮನೆಗೆ ಕೋವಿಡ್ ವ್ಯಾಕ್ಸಿನ್ ಲಸಿಕೆ ಹಂಚಿಕೆ ಅಭಿಯಾನದ ಅಂಗವಾಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ಅಭಿಯಾನಕ್ಕೆ ಸಸಿಗೆ ನೀರು ಉಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ವಿಶ್ವ ಹಾಗೂ ದೇಶಾದ್ಯಂತ ಕೋವಿಡ್ ಎರಡನೇ ಅಲೆ ಆರಂಭವಾಗಿದೆ. ಕಾರಣ ಎಲ್ಲರೂ ಜಾಗೃತರಾಗಿ ಇರುವುದರ ಜೊತೆಗೆ ಸರಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಯಾವುದೇ ರೀತಿಯ ನಿರ್ಲಕ್ಷದಿಂದ ಮಾರಕ ರೋಗಕ್ಕೆ ತುತ್ತಾದಲ್ಲಿ ಸಮಸ್ಯೆ ಎದುರಿಸಬಹುದಾಗಿದ್ದು ಜಾಗೃತರಾಗಿ ತಕ್ಷಣ ಕೋವಿಡ್ -19 ಲಸಿಕೆ ತಪ್ಪದೇ ಪಡೆಯುವಂತೆ ಅವರು ಸಲಹೆ ನೀಡಿದರು.
ರಾಜ್ಯದಲ್ಲಿಯೇ ಅತ್ಯುತ್ತಮ ಸೌಲಭ್ಯಗಳುಳ್ಳ ಜಿಲ್ಲಾ ಆಸ್ಪತ್ರೆ ನಗರದಲ್ಲಿ ಇದ್ದು ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ಮತ್ತು ಕೋರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ಪ್ರತಿ ಮನೆಮನೆಗೆ ಪೆÇೀಲಿಯೋ ಮಾದರಿಯಲ್ಲಿ ಲಸಿಕೆ ನೀಡುವಂತಹ ವಿನೂತನ ಅಭಿಯಾನ ಇಲ್ಲಿ ಆರಂಭಿಸಲಾಗಿದೆ. ನಗರ ಪ್ರದೇಶದಲ್ಲಿ ಈ ಲಸಿಕೆಯಲ್ಲಿ ಈ ಸೂಕ್ತ ಪ್ರಗತಿ ಸಾಧಿಸಲು ಜಿಲ್ಲಾಡಳಿತಕ್ಕೆ ಸಹಕಾರದ ಅಂಗವಾಗಿ 10 ಸಂಗನಬಸವ ಶಾಲಾ ವಾಹನಗಳ ಮೂಲಕ ಸಾರ್ವಜನಿಕರನ್ನು ಲಸಿಕಾ ಕೇಂದ್ರಗಳಿಗೆ ಕರೆದೊಯ್ಯಲು ನೆರವು ಒದಗಿಸಲಾಗಿದ್ದು, ಸಾರ್ವಜನಿಕರು ಇದಕ್ಕೆ ಸೂಕ್ತ ಸಹಕಾರ ನೀಡುವಂತೆ ಮನವಿ ಮಾಡಿದರು.
ಕೋವಿಡ್-19 ಲಸಿಕಾ ಕಾರ್ಯಕ್ರಮ ಮುಂದಿನ ಒಂದು ವಾರ ಅವಧಿಯಲ್ಲಿ ಶೇಕಡಾ 100 ರಷ್ಟು ಪ್ರಗತಿ ಸಾಧಿಸಲು ಪ್ರಯತ್ನಿಸುವಂತೆ ಆರೋಗ್ಯ ಅಧಿಕಾರಿ ಸಿಬ್ಬಂದಿಗಳಿಗೆ ಸಲಹೆ ನೀಡಿದ ಅವರು ಸಾರ್ವಜನಿಕರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪೆÇಲೀಸ್ ಇಲಾಖೆಗೆ ಸಹಕರಿಸಬೇಕು, ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದ ಅವರು ಸ್ವಯಂ ರಕ್ಷಣೆಗಾಗಿ ತಪ್ಪದೆ 45 ವರ್ಷ ಮೇಲ್ಪಟ್ಟವರು ಕೋವಿಡ್ -19 ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಲಸಿಕೆಯ ಬಗ್ಗೆ ಯಾವುದೇ ರೀತಿಯ ಅಪಪ್ರಚಾರ ಸರಿಯಲ್ಲ. ಮಾನ್ಯ ಪ್ರಧಾನ ಮಂತ್ರಿಗಳ ಮುತುವರ್ಜಿಯಿಂದ ವಿಶ್ವದಲ್ಲಿಯೇ ಪ್ರಥಮವಾಗಿ ಈ ಲಸಿಕೆ ಸಂಶೋಧಿಸುವ ಜೊತೆಗೆ ದೇಶ-ವಿದೇಶಗಳಿಗೆ ರಫ್ತನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವಿಶ್ವಾದ್ಯಂತ ಕೋವಿಡ್ 2ನೇ ಅಲೆ ಆರಂಭಗೊಂಡಿದ್ದು ಇದರ ನಿಯಂತ್ರಣದಲ್ಲಿ ಹೆಚ್ಚು ಸಹಕಾರಿಯಾಗಲಿದೆ. ಮುಂದುವರೆದ ರಾಷ್ಟ್ರಗಳಾದ ಅಮೆರಿಕಾ, ಇಂಗ್ಲೆಂಡ್, ಸ್ಪೇನ್, ಜರ್ಮನಿ ಮತ್ತು ಇಟಲಿ ದೇಶಗಳು ಆರೋಗ್ಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕೂಡ ಇಂತಹ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಭಾರತ ಇತರೆ ರಾಷ್ಟ್ರಗಳಿಗಿಂತಲೂ ಮುಂಚಿತವಾಗಿ ಇಂತಹ ಲಸಿಕೆಯನ್ನು ಸಂಶೋಧಿಸುವ ಜೊತೆಗೆ ರಾಷ್ಟ್ರದ ಜನತೆಗೆ ಉಚಿತವಾಗಿ ಪೂರೈಸಲು ಕ್ರಮ ಕೈಗೊಂಡಿರುವುದು ಮಾನ್ಯ ಪ್ರಧಾನಿಗಳ ಕೊಡುಗೆಗೆ ಹಾಗೂ ಲಸಿಕೆ ಸಂಶೋಧಿಸಿದ ವಿಜ್ಞಾನಿಗಳು ಮತ್ತು ವೈದ್ಯರಿಗೆ ಅಭಿನಂದನೆ ಸಲ್ಲಿಸಿದರು.
ಕೋವಿಡ್ -19 ಲಸಿಕೆಯನ್ನು ತಾವು ಸಹ ಪಡೆದಿದ್ದು ಯಾವುದೇ ಅಡ್ಡ ಪರಿಣಾಮ ಆಗಿಲ್ಲ ಅಗ್ಗ ದರದಲ್ಲಿ ಈ ಲಸಿಕೆ ಲಭ್ಯವಾಗಿರುವುದರಿಂದ ಮತ್ತು ಕೊರೋನಾದಿಂದ ದೂರ ಉಳಿಯಲು ಸಹಕಾರಿಯಾಗುವುದರಿಂದ 45 ವಯೋವುಳ್ಳವರು ತಪ್ಪದೇ ಈ ಲಸಿಕೆ ಹಾಕಿಸಿ ಕೊಳ್ಳುವಂತೆ ಅವರು ಕರೆ ನೀಡಿ ಮನೆ ಮನೆಗೆ ಕೋವಿಡ್-19 ಲಸಿಕೆ ನೀಡಲು ಬಂದ ಸಂದರ್ಭದಲ್ಲಿ ಸಂಬಂಧಿಸಿದವರು ತಪ್ಪದೆ ಲಸಿಕೆ ಹಾಕಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಮಾತನಾಡಿ ಜಿಲ್ಲೆಯಲ್ಲಿ 12 ಸಾವಿರ ಹೆಲ್ತ್ ಕೇರ್ ಗಳ ವರ್ಕರ್ ಗಳ ಪೈಕಿ 14 ಸಾವಿರ ವರ್ಕರ್ ಗಳು ಈ ಲಸಿಕೆ ಪಡೆದಿದ್ದಾರೆ. ಅದರಂತೆ 8 ಸಾವಿರ ಫ್ರಂಟ್ ಲೈನ್ ವರ್ಕರ್ ಗಳ ಪೈಕಿ 9 ಸಾವಿರ ಜನ ಈ ಲಸಿಕೆ ಪಡೆದಿದ್ದು ಶೇಕಡಾ 100ಕ್ಕೂ ಹೆಚ್ಚು ಪ್ರಗತಿ ಸಾಧಿಸಿದೆ. 45 ವರ್ಷ ಮೇಲ್ಪಟ್ಟ 3.40 ಲಕ್ಷ ಜನರು ಜಿಲ್ಲೆಯಲ್ಲಿದ್ದು 60 ವರ್ಷದವರು 2.40 ಲಕ್ಷ ಜನ ಸೇರಿದಂತೆ ಒಟ್ಟು 5.80 ಲಕ್ಷ ಜನರ ಪೈಕಿ ಈವರೆಗೆ 1.40 ಲಕ್ಷ ಜನರು ಲಸಿಕೆ ಪಡೆದಿದ್ದಾರೆ. ನಗರಪ್ರದೇಶದಲ್ಲಿ ಶೇಕಡಾ 100ರಷ್ಟು ಲಸಿಕೆಯಲ್ಲಿ ಪ್ರಗತಿ ಸಾಧಿಸಲು ಜಿಲ್ಲಾಡಳಿತಕ್ಕೆ ಶಾಸಕರು ವಾಹನಗಳನ್ನು ಒದಗಿಸಿ ನೇರವಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಅವರು ಗ್ರಾಮಾಂತರ ಪ್ರದೇಶಗಳಿಗೂ ಈ ಲಸಿಕಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಅವಶ್ಯಕ ಸಹಕಾರ ಕೋರಿ ಸಂಬಂಧಪಟ್ಟ 45 ವಯೋಮಾನ ಮೇಲ್ಪಟ್ಟ ಜನರು ಕೋವಿಡ್-19 ಲಸಿಕೆ ತಪ್ಪದೇ ಪಡೆಯಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೋಳಸಂಗಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗೋವಿಂದ ರೆಡ್ಡಿ, ಜಿಲ್ಲಾ ಆಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಡಾ.ಎಸ್.ಎಲ್.ಲಕ್ಕಣ್ಣವರ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಮಹೇಶ್ ನಾಗರಬೆಟ್ಟ, ತಾಲೂಕಾ ವೈದ್ಯಾಧಿಕಾರಿ ಡಾ.ಕವಿತಾ ದೊಡ್ಡಮನಿ, ಡಬ್ಲ್ಯೂ .ಎಚ್. ಓ. ಪ್ರತಿನಿಧಿ ಮುಕುಂದ ಗಲಗಲಿ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮುಖಂಡರಾದ ಶ್ರೀ ಪಾಂಡು ಸಾಹುಕಾರ, ಉಪಸ್ಥೀತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ್ ಎರಗಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಸಿರುಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನರಾಮ್ ಜಯಂತಿ ಅಂಗವಾಗಿ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು.