ಕೋವಿಡ್-19 ಮುಂಜಾಗ್ರತಾ ಕ್ರಮ ಕುರಿತು ಸಭೆ ನಡೆಸಿದ ಆರೋಗ್ಯ ಇಲಾಖೆ

ಚಿಂಚೋಳಿ,ಮಾ.15- ಇಲ್ಲಿನ ಚಂದಾಪುರ ಪಟ್ಟಣದ ಸಿ.ಬಿ. ಪಾಟೀಲ ಕಾಲೇಜಿನಲ್ಲಿ ತಾಲೂಕ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕೋವಿಡ-19 ಸೋಂಕು ಮುಂಜಾಗ್ರತಾ ಕುರಿತು ಸಭೆ ಜರಗಿತು.
ಸಭೆ ಉದ್ದೇಶಿಸಿ ತಾಲೂಕ ಆರೋಗ್ಯ ಇಲಾಖೆ ಅಧಿಕಾರಿ ಡಾ.ಮಹಮ್ಮದ್ ಗಫೂರ ಮಾತನಾಡಿ, ತಾಲೂಕಿನಲ್ಲಿ ಎರಡನೆ ಅಲೆಯ ಕೋವಿಡ 19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಸೋಂಕು ಹರಡದಂತೆ ತಡೆಗಟ್ಟಬೇಕಾದರೆ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.
ಸಾರ್ವಜನಿಕರು ಮಹಾಮಾರಿ ಕೋವಿಡ 19 ಕೊರೊನ ಸೋಂಕಿನ ಕುರಿತು ಬಯಾಭೀತರಾಗುವ ಅಗತ್ಯವಿಲ್ಲ, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೋಂಕಿನಿಂಗ ರಕ್ಷಣೆ ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು ಮತ್ತು ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಪ್ರಯಾಣವನ್ನು ಮಾಡಬೇಕು ಹಾಗೂ ತಾಲೂಕಿನ ಎಲ್ಲಾ ವ್ಯಾಪಾರಸ್ಥರು ಹಾಗೂ ನಾಗರಿಕರು ಕೋವಿಡ 19 ಸೋಂಕನ್ನು ನಿರ್ಲಕ್ಷ ವಹಿಸಬಾರದು ಮುನ್ನೆಚ್ಚರಿಕೆ ಕ್ರಮವಾಗಿ ಸೋಶಿಯಲ್ ಡಿಸ್ಟೆನ್ಸ್ ಮಾಡುವ.
ಸಭೆಯಲ್ಲಿ ತಹಸಿಲ್ದಾರ ಅರುಣಕುಮಾರ ಕುಲಕರ್ಣಿ. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲಕುಮಾರ ರಾಠೋಡ. ಸಿಪಿಐ ಮಾಂತೇಶ ಪಾಟೀಲ. ಶಿಶು ಅಭಿವೃದ್ಧಿ ಅಧಿಕಾರಿಗಳಾದ ಗುರುಪ್ರಸಾದ. ಸಿ.ಬಿ. ಪಾಟೀಲ ಕಾಲೇಜಿನ ಪ್ರಾಂಶುಪಾಲರಾದ ಶ್ರೀಶೈಲ ನಾಗರಾಳ. ಪಿಎಸ್‍ಐ ಸಂತೋಷ ರಾಠೋಡ. ಉಪೇಂದ್ರಕುಮಾರ. ಗ್ರೇಡ್ ತಹಸಿಲ್ದಾರ ವೆಂಕಟೇಶ ದುಗ್ಗನ. ಮತ್ತು ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.