ಕೋವಿಡ್-19 ಬೃಹತ್ ಲಸಿಕಾ ಮೇಳ ಕಾರ್ಯಕ್ರಮ


ಚಿತ್ರದುರ್ಗ,ಅ.28; ಚಿತ್ರದುರ್ಗ ತಾಲ್ಲೂಕಿನ ಗೋಡಬನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಓಬಣ್ಣನಹಳ್ಳಿ ಗ್ರಾಮದಲ್ಲಿ ಸುಮಾರು ಮೂರು ಬಾರಿ ಲಸಿಕಾ ಅಧಿವೇಶನ ನಡೆಸಿದರು ಸಹ ತುಂಬಾ ಜನ ಕೋವಿಡ್ ಲಸಿಕೆ ಪಡೆಯಲು ನಿರಾಕರಣೆ ಮಾಡುತ್ತಿದ್ದ ಕಾರಣ  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಜನರಿಗೆ ತಿಳುವಳಿಕೆ ನೀಡಿ ಮನೆ ಮನೆ ಭೇಟಿ ಮಾಡಿ ಕೋವಿಡ್-19 ಲಸಿಕೆ ಪಡೆಯುವಂತೆ ಮನವೋಲಿಸಲಾಯಿತು.
  ತೀವ್ರ ನಿರಾಕರಣೆ ಮಾಡಿದ ಸ್ಥಳದಲ್ಲಿ ಹೆಚ್ಚಿನ ಜನ ಜಾಗೃತಿ ಮೂಡಿಸಿ ಗ್ರಾಮದ ಸುಮಾರು 150 ಜನರಿಗೆ ಕೋವಿಡ್ ಲಸಿಕೆ ನೀಡಲಾಯಿತು.
ಗ್ರಾಮದ ಜನರು ದಿನ ನಿತ್ಯ ಕೂಲಿ ಕೆಲಸಕ್ಕೆ ಹೋಗುವುದರಿಂದ ಲಸಿಕೆ ಅಕ್ಟೋಬರ್ 30ರಂದು ಸಂಜೆ ಕೋವಿಡ್-19 ಲಸಿಕೆ ಅಧಿವೇಶನ ನಡೆಸಿ ಉಳಿದಿರುವ ಗ್ರಾಮದ ಜನರಿಗೆ ಲಸಿಕೆ ಹಾಕಿಸಿ ಶೇ.100ರಷ್ಟು ಪ್ರಗತಿ ಸಾಧಿಸಲಾಗುವುದು ಎಂದು ಗೋಡಬನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ  ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಮ್ಮ, ಸೊಂಡೆಕೊಳ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ, ಗ್ರಾಮ ಲೆಕ್ಕಾಧಿಕಾರಿ ದೀಲಿಪ್, ಗೋಡಬನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೂಪ, ಶಾಲಾ ಮುಖ್ಯ ಶಿಕ್ಷಕರಾದ ವೆಂಕಟೇಶ್, ಇಂದಿರಾ, ತಿಪ್ಪಮ್ಮ, ರಾಧಾ ಹಾಗೂ ಪಿಹೆಚ್‍ಸಿಓ ರಾಜೇಶ್ವರಿ, ಆಶಾ ಕಾರ್ಯಕರ್ತೆ ಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ತಿಮ್ಮಕ್ಕ,  ಆರ್‍ಬಿಎಸ್‍ಕೆ ವೈದ್ಯಾಧಿಕಾರಿಗಳಾದ ಡಾ. ಮಂಜುಳಾ, ಡಾ. ವಾಣಿ ಮತ್ತು ಅಕ್ಷತಾ ಹಾಜರಿದ್ದರು