ಕೋವಿಡ್-19 ಪರೀಕ್ಷಿಸುವ ಅತ್ಯಂತ ಸರಳ, ನೂತನ ಕಿಟ್ ಅಭಿವೃದ್ಧಿ

ಮೈಸೂರು,ಜೂ.7: ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ನೆರವಿನೊಂದಿಗೆ ಹೈದರಾಬಾದ್ ಮೂಲದ ಕಂಪನಿಯೊಂದು ಕೋವಿಡ್ -19 ಪರೀಕ್ಷಿಸುವ ಅತ್ಯಂತ ಸರಳ ಹಾಗೂ ನೂತನ ಕಿಟ್ ಒಂದನ್ನು ಅಭಿವೃದ್ಧಿಪಡಿಸಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು ವಿವಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ದೇಶದಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಸ್ವಾಮ್ಯದ ವಿಶ್ವವಿದ್ಯಾನಿಲಯವೊಂದರ ಸಂಶೋಧಕರ ತಂಡವೊಂದು ಪೆಂಡಮಿಕ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸಂಶೋಧನೆ ನಡೆಸಿ ಅದನ್ನು ಬಳಕೆಗೆ ತರುವಲ್ಲಿ ಯಶಸ್ವಿಯಾಗಿದೆ. ಮೈಸೂರು ವಿವಿ ವಿಶ್ರಾಂತ ಕುಲಪತಿ, ಖ್ಯಾತ ರಸಾಯನಶಾಸ್ತ್ರಜ್ಞ ಪೆÇ್ರ.ಕೆ.ಎಸ್.ರಂಗಪ್ಪ ಅವರ ಮಾರ್ಗದರ್ಶನದಲ್ಲಿ ಮೈಸೂರು ವಿವಿ ವಿಜ್ಞಾನ ಭವನದ ಸಂಚಾಲಕ ಡಾ.ಎಸ್.ಚಂದ್ರನಾಯಕ್ ಹಾಗೂ ಮೈಸೂರು ವಿವಿ ಮಾಲಿಕ್ಯೂಲರ್ ಬಯಲಾಜಿಯ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಡಿ.ಮೋಹನ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಮೈಸೂರು ವಿವಿ ಸಂಶೋಧನೆಗೆ ಬೆನ್ನೆಲುಬಾಗಿ ನಿಂತಿದ್ದು, ಅಗತ್ಯ ನೆರವು ನೀಡಿ ಪೆÇ್ರೀತ್ಸಾಹಿಸಿದೆ ಎಂದರು.
ಪೆÇ್ರ.ಕೆ.ಎಸ್.ರಂಗಪ್ಪ ಮಾತನಾಡಿ ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡ ಕೋವಿಡ್-19 ಹಾಗೂ ಅದರಿಂದ ಉಂಟಾದ ಸಂಕಷ್ಟದ ಹಿನ್ನೆಲೆಯಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಸಂಶೋಧನೆಗೆ ಮುಂದಾದೆವು. ಇದಕ್ಕೆ ಪೂರಕವಾಗಿ ಮೈಸೂರು ವಿವಿ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಸಹ, ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡು ಸಮಾಜದ ನೆರವಿಗೆ ಮುಂದಾಗುವಂತೆ ಕೇಳಿಕೊಂಡರು. ಜತೆಗೆ ಇದಕ್ಕೆ ಬೇಕಾದ ನೆರವು ನೀಡುವುದಾಗಿ ಸಹ ತಿಳಿಸಿದರು. ಈ ಹಿನ್ನೆಲೆಯಲ್ಲಿ ತೆಲಂಗಾಣದ ಹೈದರಬಾದ್ ನ ಲಾರ್ವೆನ್ ಬಯೋಲಾಜಿಕ್ಸ್ ಪ್ರೈ.ಲೀ ಕಂಪನಿ ನಿರ್ದೆಶಕ ಡಾ. ವೆಂಕಟರಮಣ ಜತೆಗೆ ಮಾತುಕತೆ ನಡೆಸಿ ಸಹಭಾಗಿತ್ವದಲ್ಲಿ ಸಂಶೋಧನೆಗೆ ಮುಂದಡಿ ಇಡಲಾಯಿತು ಎಂದರು.
ಈಗಾಗಲೇ ಕ್ಯಾನ್ಸರ್ ಕ್ಷೇತ್ರದಲ್ಲಿ ಹಲವಾರು ಯಶಸ್ವಿ ಸಂಶೋಧನೆ ನಡೆಸಿದ ಅನುಭವ ಸಹ ಹೊಸ ಸಂಶೋಧನೆಗೆ ಪ್ರೇರಣೆ ನೀಡಿತು. ಕಳೆದ ಒಂದು ವರ್ಷದಿಂದ ನಿರಂತರ ಸಂಶೋಧನೆ ನಡೆಸಿದ ಫಲವಾಗಿ ಇದೀಗ ಕೋವಿಡ್ 19 ಪತ್ತೆ ಹಚ್ಚುವ ಸುಲಭ ಸಾಧನ ಪತ್ತೆ ಹಚ್ಚಲು ಸಾಧ್ಯವಾಯಿತು. ಹೊಸದಾಗಿ ಪತ್ತೆ ಹಚ್ಚಿರುವ ಎ.ಆರ್.ಡಿ.ಟಿ ಕಿಟ್ (ಂಟಿಣigeಟಿ ಖಚಿಠಿiಜ ಆeಣeಛಿಣioಟಿ ಖಿesಣ ಏiಣ) ಅತ್ಯಂತ ಸುಲಭಾಗಿ ಬಳಸಬಹುದಾದ ವಿಧಾನ ಹೊಂದಿದೆ. ಇದು ಪ್ರೆಗ್ನೆನ್ಸಿ ಟೆಸ್ಟ್ ರೀತಿ ಸ್ಥಳದಲ್ಲೇ ಕ್ಷಣಾರ್ಧದಲ್ಲಿ ಫಲಿತಾಂಶ ನೀಡುತ್ತದೆ. ಜತೆಗೆ ಈ ಫಲಿತಾಂಶ ಶೇ.90 ರಷ್ಟು ನಿಖರತೆ ಹೊಂದಿದೆ ಎಂಬುದೇ ವಿಶೇಷ.
ಬಹುತೇಕ ಸಂದರ್ಭಗಳಲ್ಲಿ ಕೋವಿಡ್ ಪರೀಕ್ಷೆಯಲ್ಲಿ ವಿಳಂಬ ಅಥವಾ ಕಡೆಗಣಿಸಿದ ಪರಿಣಾಮ ಸೋಂಕು ಉಲ್ಭಣಗೊಂಡು ವ್ಯಕ್ತಿ ಮೃತಪಟ್ಟ ಅನೇಕ ಘಟನೆಗಳು ನಡೆದಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಸುಲಭ ವಿಧಾನದ ಂಖಆಖಿ ಕಿಟ್ ಕೊರೋನ ಸೋಂಕು ಪತ್ತೆಗೆ ಸಹಕಾರಿಯಾಗಲಿದೆ. ಆದರೆ, ಂಖಆಖಿ ಕಿಟ್ ಮೂಲಕ ಕೊರೋನಾದ ಯಾವುದೇ ವೇರಿಯಂಟ್ ಅನ್ನು ಶೇ.90 ರಷ್ಟು ನಿಖರವಾಗಿ ಪತ್ತೆ ಮಾಡಬಹುದಾಗಿದೆ. ಇದೇ ಈ ನಮ್ಮ ಸಂಶೋಧನೆಯ ಹೆಗ್ಗಳಿಕೆ ಎಂದು ತಿಳಿಸಿದರು.
ಅಪ್ಲಿಕೇಶನ್‍ನೊಂದಿಗೆ ಸಂಪರ್ಕ ಹೊಂದಿದ ಬಾರ್‍ಕೋಡ್ ಸ್ಟ್ರಿಪ್ ಅನ್ನು ಒದಗಿಸುತ್ತಿದ್ದೇವೆ. ಬಾರ್‍ಕೋಡ್ ಅನ್ನು ಸ್ಕ್ಯಾನ್ ಮಾಡಿದ ತಕ್ಷಣ, ಸರ್ವರ್ ನಲ್ಲಿ ರೋಗಿಯ ಆರೋಗ್ಯ ಸ್ಥಿತಿಯನ್ನು ನವೀಕರಿಸಲಾಗುತ್ತದೆ, ಇದು ಅಔಗಿIಆ- ಪಾಸಿಟಿವ್ ಪ್ರಕರಣಗಳನ್ನು ವೇಗವಾಗಿ ಮೇಲ್ವಿಚಾರಣೆ ಮಾಡಲು ಆಡಳಿತ ಸಂಸ್ಥೆಗೆ ಅನುವು ಮಾಡಿಕೊಡಲಿದೆ.
ಈ ಕಿಟ್ ಅನ್ನು ಭಾರತ ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸಿದ್ದೇವೆ. ಕಿಟ್ ಅನ್ನು ಮೇಕ್ ಇನ್ ಇಂಡಿಯಾ’’ ಮತ್ತುಆತ್ಮ ನಿರ್ಭರ್ ಭಾರತ್ ಅಭಿಯಾನ್’’ ಗೆ ಸಮಾನವಾದ ಧ್ಯೇಯವಾಕ್ಯದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಕಿಟ್ ಅನ್ನು ವಿಶ್ವವಿದ್ಯಾನಿಲಯವು (ಸರ್ಕಾರಿ ಸಂಸ್ಥೆ) ಅಭಿವೃದ್ಧಿಪಡಿಸಿರುವುದರಿಂದ, ಇದು ಕಡಿಮೆ ವೆಚ್ಚವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.