ಕೋವಿಡ್-19 ಪರೀಕ್ಷಾ ಶಿಬಿರ

ಬ್ಯಾಡಗಿ,ಜೂ9: ತಾಲೂಕಿನ ಬುಡುಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಛತ್ರ ಗ್ರಾಮದಲ್ಲಿ ಮಂಗಳವಾರ ಕೋವಿಡ್-19 ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಪಂ ನೋಡೆಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಟಿ.ಲಮಾಣಿ ಮಾತನಾಡಿ, ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ತಮ್ಮ ಆರೋಗ್ಯದ ಸುರಕ್ಷತೆಯತ್ತ ಜಾಗೃತಿ ವಹಿಸಬೇಕು ಎಂದರಲ್ಲದೇ ಗ್ರಾಮದಲ್ಲಿ ಇಂದು ನಡೆದ ಕೋವಿಡ್ ಪರೀಕ್ಷೆಯಲ್ಲಿ 125ಜನರ ದ್ರವ ಮಾದರಿಯನ್ನು ಪಡೆಯಲಾಗಿದೆ ಎಂದು ತಿಳಿಸಿದರು.

ಗ್ರಾ.ಪಂ.ಅಧ್ಯಕ್ಷೆ ಸಂಗೀತಾ ಹಿರೇಮಠ ಮಾತನಾಡಿ, ದೇಶವನ್ನು ಹೆಮ್ಮಾರಿಯಾಗಿ ಕಾಡುತ್ತಿರುವ ಕೊರೋನಾ ಸೋಂಕು ಉಲ್ಬಣಗೊಳ್ಳಲು ಜನರ ನಿರ್ಲಕ್ಷ್ಯವೇ ಕಾರಣವಾಗಿದೆ. ಸಾರ್ವಜನಿಕರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಹಿತ ದೃಷ್ಟಿಯಿಂದ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕು ಎಂದರಲ್ಲದೇ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಬರಬೇಕೆಂದು ಹೇಳಿದರು.

ಗ್ರಾಮದಲ್ಲಿ ಕೋವಿಡ್-19 ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಪ್ರಕಾಶ ಹುಣಸಿಕಟ್ಟಿ, ಗ್ರಾಮ ಲೆಕ್ಕಾಧಿಕಾರಿ ಶೃತಿ ಮೈದೂರ, ಎಎಸ್ಸೈ ನಂದಿಗೌಡ್ರ, ಬಿಲ್ ಕಲೆಕ್ಟರ್ ಸಣ್ಣಪ್ಪ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಜಣ್ಣ, ಲ್ಯಾಬ್ ಟೆಕ್ನಿಷಿಯನ್ ಸುನೀಲ ಕಡೇಮನಿ ಹಾಗೂ ಗ್ರಾಪಂ ಸದಸ್ಯ ಶಿವಪ್ಪ ಪೆÇಟೇರ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ, ಕಂದಾಯ ಹಾಗೂ ಗ್ರಾಪಂ ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.