ಕೋವಿಡ್-19 ನಿಯಮ ಪಾಲಿಸಿ: ಹೋಳಿ ಹಬ್ಬ ಆಚರಿಸಿ

ಗುಳೇದಗುಡ್ಡ, ಮಾ27: ಹೋಳಿ ಹಬ್ಬ ಭಾವೈಕ್ಯತೆಯ ಸಂಕೇತವಾಗಿದ್ದು. ಬಣ್ಣದಾಟದಲ್ಲಿ ಯಾರಿಗೂ ಒತ್ತಾಯ ಪೂರ್ವಕವಾಗಿ ಬಣ್ಣ ಎರಚಬಾರದು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕರು ಓಣಿಯಲ್ಲಿನ ಕುಟುಂಬಗಳೊಂದಿಗೆ ಬಣ್ಣದ ಹಬ್ಬ ಆಚರಿಸುವ ಮೂಲಕ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಪಿ.ಎಸ್.ಐ ಪುಂಡಲೀಕ ಎಂ. ಪಟಾತರ ಹೇಳಿದರು.
ಗುರುವಾರ ಸಂಜೆ ಪೊಲೀಸ್ ಠಾಣೆಯಲ್ಲಿ ನಡೆಸಿದ ಹೋಳಿ ಹಬ್ಬದ ಅಂಗವಾಗಿ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಎಸ್. ಮಠಪತಿ ಮಾತನಾಡಿದರು. ಉಪತಹಶೀಲ್ದಾರ ವೀರೇಶ ಬಡಿಗೇರ, ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ಅಮರೇಶ ಕವಡಿಮಟ್ಟಿ, ವಿನೋದ ಮದ್ದಾನಿ, ಯಲ್ಲಪ್ಪ ಮನ್ನಿಕಟ್ಟಿ, ರಫೀಕ್ ಕಲಬುರ್ಗಿ, ಮುಬಾರಕ ಮಂಗಳೂರ, ಪ್ರಕಾಶ ಮುರಗೋಡ, ಸಾಗರ ಕೊಣ್ಣೂರ, ಸಲೀಮ ಮೋಮಿನ್, ಪೊಲೀಸ್ ಸಿಬ್ಬಂದಿ ಆನಂದ ಮನ್ನಿಕಟ್ಟಿ, ಸಿ.ವೈ. ಸಿದ್ದನ್ನವರ ಇತರರು ಇದ್ದರು.